AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟವಾಡಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ಕೆರೆಗೆ ಹಾರಿದ ಮಹಿಳೆ

ಮುದ್ದು ಮಕ್ಕಳನ್ನು ಬಿಟ್ಟು ಗಂಡ ಮೃತಪಟ್ಟ ದುಃಖದಲ್ಲಿ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಏಳು ವರ್ಷ ಹಾಗೂ ಮೂರೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ವಸಂತಾ ತನ್ನ ಪತಿ ಲಕ್ಷ್ಮಣ್ ಅವರನ್ನು ನಾಲ್ಕು ವರ್ಷಗಳ ಹಿಂದೆ ಕಳೆದುಕೊಂಡಿದ್ದರು. ದಿನಿಂದ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಮೂಲಕ ಅವರು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು.

ಆಟವಾಡಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ಕೆರೆಗೆ ಹಾರಿದ ಮಹಿಳೆ
ಮೊಬೈಲ್
ನಯನಾ ರಾಜೀವ್
|

Updated on: Jan 04, 2026 | 7:25 AM

Share

ತೆಲಂಗಾಣ, ಜನವರಿ 04: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ(Suicide) ಮಾಡಿಕೊಳ್ಳುವ ಪರಿಪಾಠ ಮಿತಿ ಮೀರಿದೆ. ಮುದ್ದಿನಂಥಾ ಇಬ್ಬರು ಮಕ್ಕಳನ್ನು ಬಿಟ್ಟು ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ವಸಂತಾ(29) ಮೃತ ಮಹಿಳೆ. ಏಳು ವರ್ಷ ಹಾಗೂ ಮೂರೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಪೊಲೀಸರು ಹೇಳುವ ಪ್ರಕಾರ, ವಸಂತಾ ತನ್ನ ಪತಿ ಲಕ್ಷ್ಮಣ್ ಅವರನ್ನು ನಾಲ್ಕು ವರ್ಷಗಳ ಹಿಂದೆ ಕಳೆದುಕೊಂಡಿದ್ದರು.

ಅಂದಿನಿಂದ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಮೂಲಕ ಅವರು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು.

ಶುಕ್ರವಾರ ಸಂಜೆ, ಅವರು ತನ್ನ ಮಕ್ಕಳನ್ನು ಟ್ಯಾಂಕ್ ಬಂಡ್‌ಗೆ ಕರೆತಂದು, ಆಟವಾಡಲು ಮೊಬೈಲ್ ಫೋನ್ ನೀಡಿ, ನಂತರ ಹುಸೇನ್ ಸಾಗರ್ ಸರೋವರಕ್ಕೆ ಹಾರಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಮತ್ತಷ್ಟು ಓದಿ: ಕಲಬುರಗಿ: ಬಿಜೆಪಿ ಕಾರ್ಯಕರ್ತನ ಮನೆಯಲ್ಲೇ ಪಕ್ಷದ ಕಾರ್ಯಕರ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರ ದೇಹವನ್ನು ನೀರಿನಿಂದ ಹೊರತೆಗೆದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಮಕ್ಕಳ ಬಳಿ ಇದ್ದ ಮೊಬೈಲ್ ಫೋನ್ ಬಳಸಿ ಪೊಲೀಸರು ಮಹಿಳೆಯನ್ನು ಗುರುತಿಸಿ ಆಕೆಯ ಕುಟುಂಬಕ್ಕೆ ಮಾಹಿತಿ ನೀಡುವಲ್ಲಿ ಯಶಸ್ವಿಯಾದರು. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದು ಘಟನೆ ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನ ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ನವೀನ್ ಕುಮಾರ್ (35) ಎನ್ನುವಾತ ತನ್ನ ಪತ್ನಿ ವತ್ಸಲಳನ್ನು(30) ಕೊಂದು ಬಳಿ ತಾನು ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ತಂದೆ-ತಾಯಿಯನ್ನು ಕಳೆದುಕೊಂಡ 7 ವರ್ಷದ ಹೆಣ್ಣು ಮಗು ಅನಾಥವಾಗಿದೆ. ನವೀನ್ ಹಾಗೂ ವತ್ಸಲ ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ 7 ವರ್ಷದ ಹೆಣ್ಣುಮಗು ಇದೆ.

ಸಣ್ಣಪುಟ್ಟ ವಿಚಾರಕ್ಕೆ ಪತಿ, ಪತ್ನಿ ಜಗಳವಾಡುತ್ತಿದ್ದರು. ಕಳೆದ ವಾರ ದಂಪತಿ ಗಲಾಟೆ ಮಾಡಿಕೊಂಡು ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ಇಂದು (ಡಿಸೆಂಬರ್ 15) ಗಲಾಟೆ ವಿಕೋಪಕ್ಕೆ ತಿರುಗಿದ್ದು, ನವೀನ್​​, ವಾತ್ಸಲಳನ್ನು ಕತ್ತುಹಿಸುಕಿ ಕೊಂದಿದ್ದಾನೆ. ಬಳಿಕ ನವೀನ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೆಂಡತಿಯನ್ನು ಮಂಚದ ಮೇಲೆಯೇ ಕೊಂದು ಬಳಿಕ ಮೇಲೆ ಇದ್ದ ಫ್ಯಾನ್​​ಗೆ ನೇಣುಬಿಗಿದುಕೊಂಡು ಆತ್ಯೆಹತ್ಯೆ ಮಾಡಿಕೊಂಡಿದ್ದು, ನವೀನ್ ಮೃತದೇಹ ಪತ್ನಿ ವಾತ್ಸಲ ಮೃತದೇಹದ ಮೇಲೆ ನೇತಾಡುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ಇನ್ನು ಗಂಡ ಹೆಂಡತಿ ಜಗಳದಲ್ಲಿ ಪುಟ್ಟ ಮಗು ಮಾತ್ರ ಅನಾಥವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ