ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್​ ಮೊರೆ ಹೊಕ್ಕ ವಕೀಲರು

ತಮ್ಮ ವಿರುದ್ಧ ಆರೋಪ ಮಾಡಿರುವ ಮಹಿಳಾ ವಕೀಲೆಯ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂದು ವಕೀಲರು ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್​ ಮೊರೆ ಹೊಕ್ಕ ವಕೀಲರು
ಬಾಂಬೆ ಹೈಕೋರ್ಟ್​
Edited By:

Updated on: Aug 24, 2021 | 3:36 PM

ಮುಂಬೈ: ತಮ್ಮ ವಿರುದ್ಧ ಮಹಿಳಾ ಸಹೋದ್ಯೋಗಿಯೊಬ್ಬರು ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಸಿಬಿಐ (Central Bureau of Investigation – CBI) ತನಿಖೆ ನಡೆಸಲು ನಿರ್ದೇಶನ ನೀಡಬೇಕು ಕೋರಿರುವ ಮೂವರು ವಕೀಲರು ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್​ ರದ್ದುಪಡಿಸಬೇಕು ಎಂದು ವಿನಂತಿಸಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿರುವ ಮಹಿಳಾ ವಕೀಲೆಯ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ ಎಂದು ವಕೀಲರು ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಪಿ.ಬಿ.ವರೇಲ್ ಮತ್ತು ಎನ್.ಆರ್.ಬೋರ್ಕರ್ ಅವರಿದ್ದ ನ್ಯಾಯಪೀಠದ ಎದುರು ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ದೂರು ಸಲ್ಲಿಸಿರುವ ವಕೀಲರು ಕ್ರಿಮಿನಲ್ ಕಾನೂನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಹಲವು ಮುಗ್ಧರನ್ನು ಇಂಥ ತಪ್ಪು ದೂರುಗಳ ಮೂಲಕ ತೊಂದರೆಗೆ ಸಿಲುಕಿಸಿದ್ದಾರೆ ಎಂದು ವಾದಿಸಿದರು. ಇನ್ನೊಂದು ದಿನದ ಒಳಗೆ ಅರ್ಜಿದಾರರು ತಮ್ಮ ಪ್ರತಿಕ್ರಿಯೆ ದಾಖಲಿಸಲು ಸೂಚಿಸಬೇಕು. ಇಲ್ಲದಿದ್ದರೆ ಈ ಪ್ರಕರಣವು ವಿನಾಕಾರಣ ಮುಂದಕ್ಕೆ ಹೋಗುತ್ತಿರುತ್ತದೆ ಎಂದು ಹೇಳಿದರು.

ಇದು ಹಿಟ್ ಅಂಡ್ ರನ್​ಗೆ ಸೂಕ್ತ ಉದಾಹರಣೆಯಾಗಿದೆ. ಅವರ ವಾದ ಆಲಿಸಲು ಮತ್ತೊಂದು ಅವಕಾಶ ನೀಡಿದರೆ ನ್ಯಾಯಾಲಯದಲ್ಲಿ ಅವರಿಂದ ನಾಟಕವೇ ನಡೆದುಹೋಗುತ್ತದೆ ಎಂದು ಹೇಳಿದರು. ಸುಪ್ರೀಂಕೋರ್ಟ್​ನಿಂದ ಮಹಿಳೆಯರಿಗೆ ಸಿಕ್ಕಿರುವ ರಕ್ಷಣೆಯನ್ನು ಈ ರೀತಿ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ ವಕೀಲರು ಈ ಪ್ರಕರಣದ ಬಗ್ಗೆ ಶೀಘ್ರ ವಿಚಾರಣೆ ನಡೆಸಬೇಕು ಎಂದು ವಿನಂತಿಸಿದರು. ಆರೋಪಿ ವಕೀಲರು ಇದೀಗ ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ಹೋಗಿ ಸಹಿಹಾಕಬೇಕಾಗಿದೆ ಎಂದು ಹೇಳಿದರು.

(Mumbai Lawyers request Bombay High Court to initiate CBI investigation against sexual assault case)

ಇದನ್ನೂ ಓದಿ: ಎಲ್​​ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಮಹಿಳೆಯಿಂದ ದೆಹಲಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ

ಇದನ್ನೂ ಓದಿ: ವಿವಾಹ ನಂತರ ಬಲವಂತದ ಲೈಂಗಿಕ ಕ್ರಿಯೆ ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ: ಮುಂಬೈ ನ್ಯಾಯಾಲಯ

TV9 Web

TV9 Kannada

Read More
Loading...
Unable to load recommendations.
Follow Us