ವಿವಾಹ ನಂತರ ಬಲವಂತದ ಲೈಂಗಿಕ ಕ್ರಿಯೆ ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ: ಮುಂಬೈ ನ್ಯಾಯಾಲಯ
ಪ್ರಾಸಿಕ್ಯೂಷನ್ ಪ್ರಕಾರ ಮಹಿಳೆ ಕಳೆದ ವರ್ಷ ನವೆಂಬರ್ 22 ರಂದು ವಿವಾಹವಾಗಿದ್ದರು.. ಮದುವೆಯ ನಂತರ ಆಕೆಯ ಪತಿ ಮತ್ತು ಆತನ ಕುಟುಂಬವು ತನ್ನ ಮೇಲೆ ನಿರ್ಬಂಧಗಳನ್ನು ಹೇರಲು ಆರಂಭಿಸಿತು
ಮುಂಬೈ: ಮಹಿಳೆಯೊಬ್ಬರು ತನ್ನ ಗಂಡ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಆರೋಪಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಮುಂಬಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಸಂಜಶ್ರೀ ಜೆ ಘರತ್ ಇದು ಕಾನೂನು ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೇಳಿದ್ದಾರೆ. ಆರೋಪಿಯು ಪತಿಯಾಗಿರುವುದರಿಂದ ಅವರು ಯಾವುದೇ ಕಾನೂನುಬಾಹಿರ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ ಮಹಿಳೆ ಕಳೆದ ವರ್ಷ ನವೆಂಬರ್ 22 ರಂದು ವಿವಾಹವಾಗಿದ್ದರು.. ಮದುವೆಯ ನಂತರ ಆಕೆಯ ಪತಿ ಮತ್ತು ಆತನ ಕುಟುಂಬವು ತನ್ನ ಮೇಲೆ ನಿರ್ಬಂಧಗಳನ್ನು ಹೇರಲು ಆರಂಭಿಸಿತು. ಆ ಕುಟುಂಬ ತನ್ನನ್ನು ಅವಹೇಳನ ಮಾಡಿತು, ನಿಂದಿಸಿತು ಮತ್ತು ಹಣ ನೀಡುವಂತೆ ಒತ್ತಾಯಿಸುತ್ತಿತ್ತು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಮದುವೆಯಾದ ಒಂದು ತಿಂಗಳ ನಂತರ ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಜನವರಿ 2 ರಂದು ಈ ದಂಪತಿ ಮುಂಬೈ ಸಮೀಪದ ಗಿರಿಧಾಮವಾದ ಮಹಾಬಲೇಶ್ವರಕ್ಕೆ ಹೋಗಿದ್ದರು. ಅಲ್ಲಿ ಅವರು ಲೈಂಗಿಕ ಸಂಪರ್ಕ ಮಾಡಿದ್ದರು. ಅದರ ನಂತರ ಮಹಿಳೆ ಅಸ್ವಸ್ಥಗೊಂಡಿದ್ದು ವೈದ್ಯರ ಬಳಿಹೋಗಿದ್ದರು ಪರೀಕ್ಷೆಯ ನಂತರ ವೈದ್ಯರು ಆಕೆಗೆ ಸೊಂಟದ ಕೆಳಗೆ ಪಾರ್ಶ್ವವಾಯು ಇದೆ ಎಂದು ಹೇಳಿದ್ದಾರೆ.
ಇದಾದ ನಂತರವೇ ಮಹಿಳೆ ತನ್ನ ಪತಿ ಮತ್ತು ಇತರರ ವಿರುದ್ಧ ಮುಂಬೈನಲ್ಲಿ ಎಫ್ಐಆರ್ ದಾಖಲಿಸಿದ್ದು, ನಂತರ ನಿರೀಕ್ಷಣಾ ಜಾಮೀನು ಅರ್ಜಿಯೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸಿದರು. ವಿಚಾರಣೆಯ ಸಮಯದಲ್ಲಿ ಪತಿ ಮತ್ತು ಅವರ ಕುಟುಂಬವು ತಮ್ಮ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಮತ್ತು ವರದಕ್ಷಿಣೆಗಾಗಿ ಯಾವುದೇ ಬೇಡಿಕೆಯೊಡ್ಡಿಲ್ಲ ಎಂದು ಹೇಳಿದರು.
ಅವರು ಪತಿಯೂ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಕೆಯಿಂದ ಆರೋಪಿಸಲ್ಪಟ್ಟ ಕೆಲವು ಕುಟುಂಬ ಸದಸ್ಯರು ರತ್ನಗಿರಿಯಲ್ಲಿ ವಾಸಿಸುತ್ತಿದ್ದರು ಮತ್ತು ದಂಪತಿಯೊಂದಿಗೆ ಎರಡು ದಿನ ಮಾತ್ರ ವಾಸಿಸಲು ಬಂದಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಮತ್ತೊಬ್ಬ ಕುಟುಂಬದ ಸದಸ್ಯರು ಆಕೆ ಗರ್ಭಿಣಿ ಎಂದು ಹೇಳಿದ್ದಾರೆ.
ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವುದನ್ನು ಪ್ರಾಸಿಕ್ಯೂಷನ್ ವಿರೋಧಿಸಿತು. ಆದಾಗ್ಯೂ ವರದಕ್ಷಿಣೆ ಬೇಡಿಕೆಯ ವಿರುದ್ಧ ಮಹಿಳೆ ದೂರು ನೀಡಿದ್ದರೂ, ಬೇಡಿಕೆ ಎಷ್ಟು ಎಂದು ಅವರು ಹೇಳಲಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದಲ್ಲದೆ, ಬಲವಂತದ ಲೈಂಗಿಕತೆಯ ವಿಷಯವು ಕಾನೂನಿನ ಆಧಾರವನ್ನು ಹೊಂದಿಲ್ಲ ಎಂದು ನ್ಯಾಯಾಧೀಶರು ಗಮನಿಸಿದರು, “ಯುವತಿಯು ಪಾರ್ಶ್ವವಾಯುವಿಗೆ ತುತ್ತಾಗಿರುವುದು ಅತ್ಯಂತ ದುರದೃಷ್ಟಕರ. ಆದಾಗ್ಯೂ, ಅರ್ಜಿದಾರರು (ಗಂಡ ಮತ್ತು ಕುಟುಂಬ) ಇದಕ್ಕೆ ಜವಾಬ್ದಾರರಾಗಿರುವುದಿಲ್ಲ. ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳ ಸ್ವರೂಪವನ್ನು ನೋಡಿದರೆ, ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ. ತನಿಖೆಯ ಸಮಯದಲ್ಲಿ ಅರ್ಜಿದಾರರು ಸಹಕರಿಸಲು ಸಿದ್ಧರಾಗಿದ್ದಾರೆ ಎಂದು ನ್ಯಾಯಾಧೀಶ ಘರತ್ ಹೇಳಿದರು.
ಇದನ್ನೂ ಓದಿ: ಅಫ್ಘಾನಿಸ್ತಾನದ ಪ್ರಮುಖ ನಗರಗಳಾದ ಲಷ್ಕರ್ ಗಹ್, ಕಂದಹಾರ್ ವಶಪಡಿಸಿಕೊಂಡ ತಾಲೀಬಾನ್
ಇದನ್ನೂ ಓದಿ: ಚೀನಾದಲ್ಲಿ ಪ್ರವಾಹ: ಸಾವಿನ ಸಂಖ್ಯೆ 21ಕ್ಕೆ ಏರಿಕೆ, ರೆಡ್ ಅಲರ್ಟ್ ಘೋಷಣೆ
(Forced sexual intercourse in marriage not illegal thing says Mumbai court)