Mumbai: ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಬಿದ್ದ ಬೃಹತ್ ಕಲ್ಲು, ಇಬ್ಬರು ಸಾವು, ಹಲವು ವಾಹನಗಳು ಜಖಂ
ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಬೃಹತ್ ಕಲ್ಲೊಂದು ಕೆಳಗೆ ಬಿದ್ದಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ವರ್ಲಿ ಪ್ರದೇಶದಲ್ಲಿ ಸಂಭವಿಸಿದೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದ 42ನೇ ಮಹಡಿಯಿಂದ ಬೃಹತ್ ಕಲ್ಲೊಂದು ಕೆಳಗೆ ಬಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಮುಂಬೈನ ವರ್ಲಿ ಪ್ರದೇಶದಲ್ಲಿ ಸಂಭವಿಸಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಈ ದೊಡ್ಡ ಕಲ್ಲು ಬಿದ್ದು ಜಖಂಗೊಂಡಿದೆ. ಜನವರಿ 9 ರಂದು ವರ್ಲಿ ಪ್ರದೇಶದಲ್ಲಿ ಲಿಫ್ಟ್ನಲ್ಲಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು.
ಇನ್ನು ಬೆಂಗಳೂರಿನಲ್ಲು ಕೂಡ ಇಂಥದ್ದೇ ಘಟನೆ ವರದಿಯಾಗಿತ್ತು, ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಬಿದ್ದು, ತಾಯಿ ಮಗಳು ಸಾವನ್ನಪ್ಪಿದ್ದರು. ಮಹಾರಾಷ್ಟ್ರದ ಮುಂಬೈನಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಕಲ್ಲು ಬಿದ್ದು ರಸ್ತೆಯಲ್ಲಿ ಹೋಗುತ್ತಿದ್ದ ಸಬೀರ್ ಅಲಿ (36) ಮತ್ತು ಇಮ್ರಾನ್ ಅಲಿ (30) ಗಾಯಗೊಂಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿತ್ತು, ಆದರೆ ಅವರು ಬದುಕುಳಿಯಲಿಲ್ಲ.
ಮತ್ತಷ್ಟು ಓದಿ: Metro Pillar collapsed ಮೆಟ್ರೋ ಕಂಬಿ ಕುಸಿದು ತಾಯಿ, ಮಗು ಸಾವು ಪ್ರಕರಣ: ಐವರ ವಿರುದ್ಧ ಕೇಸ್ ಬುಕ್
ಈ ಕಟ್ಟಡವು ಮುಂಬೈನ ವರ್ಲಿಯ ಗಾಂಧಿನಗರ ಪ್ರದೇಶದಲ್ಲಿದೆ. ಈ ಕುರಿತು ಬಿಎಂಸಿ ಮಾಹಿತಿ ನೀಡಿದೆ. ಫೆಬ್ರವರಿ 14 ರಂದು ರಾತ್ರಿ 9.40ಕ್ಕೆ ಈ ಘಟನೆ ನಡೆದಿದೆ.
ಈ ಘಟನೆ ಕುರಿತು ಮಾಹಿತಿ ಪಡೆದು ತಕ್ಷಣವೇ ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಅಪಘಾತದ ಸ್ಥಳದಲ್ಲಿ ಹಲವು ವಾಹನಗಳು ಜಖಂ ಆಗಿವೆ. ಘಟನೆ ಕಾರಣರಾದವರ ವಿರುದ್ಧ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ