ನವದೆಹಲಿ: ತನ್ನ ತಾಯಿಗೆ ದಿನವೂ ಕಿರುಕುಳ ನೀಡುತ್ತಿದ್ದ ತಂದೆಯನ್ನು 17 ವರ್ಷದ ಮಗನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ರೋಲಿಂಗ್ ಪಿನ್ ಬಳಸಿ ತಂದೆಯನ್ನು ಕೊಂದ ಆರೋಪದ ಮೇಲೆ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ನಲ್ಲಿ (ಆರ್‌ಪಿಎಫ್) ಕೆಲಸ ಮಾಡುತ್ತಿದ್ದ ಮೃತ ವ್ಯಕ್ತಿ ದಿನವೂ ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ನೋಡಿ ಬೇಸತ್ತಿದ್ದ ಮಗ ಅಪ್ಪನನ್ನು ಕೊಲೆ ಮಾಡಿದ್ದಾನೆ.
ಮೃತ ವ್ಯಕ್ತಿಯನ್ನು ರೋಲಿಂಗ್ ಪಿನ್‌ನಿಂದ 20 ಬಾರಿ ಹೊಡೆದು ಕೊಲ್ಲಲಾಗಿದೆ. ನನ್ನ ತಂದೆಯನ್ನು ಕೊಲ್ಲುವ ಉದ್ದೇಶ ಹೊಂದಿರಲಿಲ್ಲ, ಆದರೆ, ನನ್ನಪ್ಪನಿಗೆ ತಕ್ಕ ಪಾಠ ಕಲಿಸಲು ಬಯಸಿದ್ದೆ ಎಂದು ಬಾಲಾಪರಾಧಿ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಸೆಕ್ಯುರಿಟಿಗಳ ಸರಣಿ ಹತ್ಯೆ; ಕೊಲೆ ಹಿಂದಿನ ಅಚ್ಚರಿಯ ಕಾರಣ ಇಲ್ಲಿದೆ
ತಂದೆ ಕುಡಿದು ಮನೆಗೆ ಬಂದು ತಾಯಿಯನ್ನು ಬೈಯುತ್ತಿದ್ದ, ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಕೊಲೆ ನಡೆದ ದಿನದಂದು, ಮೃತ ವ್ಯಕ್ತಿ ರಾತ್ರಿ 10 ಗಂಟೆಯ ಸುಮಾರಿಗೆ ಮನೆಗೆ ಬಂದು ಮಗನನ್ನು ಕಾಲಿನಿಂದ ತಳ್ಳಿ, ತನ್ನ ಹೆಂಡತಿಯನ್ನು ನಿಂದಿಸಿದ್ದರು. ಇದರಿಂದ ಕೋಪಗೊಂಡ ಮಗ ರೋಲಿಂಗ್ ಪಿನ್ ಅನ್ನು ಎತ್ತಿಕೊಂಡು ಅಪ್ಪನಿಗೆ ಅನೇಕ ಬಾರಿ ಹೊಡೆದು ಕೊಂದಿದ್ದಾನೆ.
ಮೃತ ದೇಹದ ಮೇಲೆ 19 ಗಾಯಗಳಾಗಿತ್ತು. ಹೊಡೆತದ ಪ್ರಭಾವದಿಂದ ಬ್ರೈನ್ ಹ್ಯಾಮರೇಜ್ ಆಗಿ ಆಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಶವಪರೀಕ್ಷೆ ವರದಿಯ ನಂತರ, ಪೊಲೀಸರು ಕೊಲೆ ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ಮೃತರ ಕುಟುಂಬದ ಸದಸ್ಯರನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ್ದಾರೆ.
Published On - 9:58 am, Thu, 8 September 22