ಮಧ್ಯಪ್ರದೇಶದಲ್ಲಿ ಸೆಕ್ಯುರಿಟಿಗಳ ಸರಣಿ ಹತ್ಯೆ; ಕೊಲೆ ಹಿಂದಿನ ಅಚ್ಚರಿಯ ಕಾರಣ ಇಲ್ಲಿದೆ

ತಾನು ಶ್ರೀಮಂತ ಮತ್ತು ಖ್ಯಾತ ದರೋಡೆಕೋರನಾಗಬೇಕೆಂಬ ಕಾರಣಕ್ಕೆ ಶಿವಪ್ರಸಾದ್ ಗೊಂಡ್ ಈ ಕೃತ್ಯ ಎಸಗಿದ್ದಾನೆ ಎಂದು ಮಧ್ಯಪ್ರದೇಶದ ಪೊಲೀಸರು ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಸೆಕ್ಯುರಿಟಿಗಳ ಸರಣಿ ಹತ್ಯೆ; ಕೊಲೆ ಹಿಂದಿನ ಅಚ್ಚರಿಯ ಕಾರಣ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 03, 2022 | 12:40 PM

ಭೂಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ನಾಲ್ವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಕೊಂದ ಆರೋಪಿ 19 ವರ್ಷದ ಶಿವಪ್ರಸಾದ್ ಗೊಂಡ್ (Shivprasad Gond) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದಾನೆ. ಸಿನಿಮಾದಿಂದ ಪ್ರಭಾವಿತನಾಗಿ ಆತ ಈ ಸರಣಿ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಭದ್ರತಾ ಸಿಬ್ಬಂದಿಯನ್ನು ಶೂಟ್ ಮಾಡಿ ಸಾಯಿಸಿದ ಕೆಲವೇ ಗಂಟೆಗಳಲ್ಲಿ ಶಿವಪ್ರಸಾದ್​ ಗೊಂಡನನ್ನು ಬುಧವಾರ ರಾತ್ರಿ ಭೂಪಾಲ್‌ನಲ್ಲಿ ಬಂಧಿಸಲಾಯಿತು.

ಆತ ಈ ಸರಣಿ ಕೊಲೆ ಮಾಡಲು ಕಾರಣವೇನೆಂದು ತನಿಖೆ ಶುರು ಮಾಡಿದ ಪೊಲೀಸರಿಗೆ ಅಚ್ಚರಿಯ ವಿಚಾರಗಳು ಗೊತ್ತಾಗಿವೆ. ತಾನು ಶ್ರೀಮಂತ ಮತ್ತು ಖ್ಯಾತ ದರೋಡೆಕೋರನಾಗಬೇಕೆಂಬ ಕಾರಣಕ್ಕೆ ಶಿವಪ್ರಸಾದ್ ಗೊಂಡ್ ಈ ಕೃತ್ಯ ಎಸಗಿದ್ದಾನೆ ಎಂದು ಮಧ್ಯಪ್ರದೇಶದ ಪೊಲೀಸರು ಹೇಳಿದ್ದಾರೆ. ಅತ್ಯಂತ ಕಡಿಮೆ ಸಂಬಳ ಪಡೆಯುತ್ತಿದ್ದ ಶಿವಪ್ರಸಾದ್ ಗೊಂಡ್ ತನ್ನ ಸಂಬಳವನ್ನು ಕೂಡಲೆ ಖರ್ಚು ಮಾಡುತ್ತಿದ್ದ. ಆತನ ಬಳಿ ಹಣ ಉಳಿಯುತ್ತಿರಲಿಲ್ಲ. ಹೀಗಾಗಿ, ಹಣ ಸಂಪಾದಿಸಲು, ಯಾವುದಾದರೂ ರೀತಿಯಲ್ಲಿ ಖ್ಯಾತಿ ಹೊಂದಲು ಆತ ಯೋಚಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಅನೈತಿಕ ಸಂಬಂಧದ ಅನುಮಾನದಡಿ ಪತ್ನಿಯನ್ನೇ ಕೊಲೆಗೈದ ಪತಿಯ ಬಂಧನ

ಈತ ಮೊದಲ ಬಾರಿ ಮಹಾರಾಷ್ಟ್ರದ ಪುಣೆಯಲ್ಲಿ ತನ್ನ ಉದ್ಯೋಗದಾತ ಹೋಟೆಲ್ ಮಾಲೀಕನ ತಲೆಗೆ ದೊಣ್ಣೆಯಿಂದ ಹೊಡೆದಿದ್ದ. ಆಗ ಆತ ಆ ಹೋಟೆಲ್​ನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ. ಕೊಲೆಗೆ ಯತ್ನಿಸಿದ ಆರೋಪದಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಸ್ವಲ್ಪ ಕಾಲ ಜೈಲು ಶಿಕ್ಷೆ ನೀಡಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

ತನ್ನ ಮಗನನ್ನು ಅಪರಾಧಗಳಿಂದ ದೂರವಿಟ್ಟು ಸರಳ ಜೀವನ ನಡೆಸಬೇಕೆಂದು ಶಿವಪ್ರಸಾದನ ತಂದೆ ಬಯಸಿದ್ದ. ಆದರೆ, ಅವನು ತನ್ನ ಕುಟುಂಬದಿಂದ ಹೊರನಡೆದಿದ್ದ. ಶಿವಪ್ರಸಾದ್ ಬಾಲ್ಯದಿಂದಲೂ ಹಲವಾರು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಅವರ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವನು ತನ್ನ ಹುಟ್ಟೂರಿಗೆ ಭೇಟಿ ನೀಡಿದಾಗಲೆಲ್ಲ ಅವನು ತನ್ನ ತಾಯಿಯ ಬಳಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತಿದ್ದ ಎಂದು ಆತನ ತಂದೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ