ನವದೆಹಲಿ: ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್ ಅಲಿ ಅವರು ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಬಿಜೆಪಿ ಆಡಳಿತ ಕೊನೆಗೊಳ್ಳಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಆಡಳಿತ ಕೊನೆಗೊಳ್ಳಲಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೆಹಬೂಬ್ ಅಲಿ, ಸದ್ಯದಲ್ಲೇ ಬಿಜೆಪಿಯ ಆಡಳಿತ ಕೊನೆಗೊಳ್ಳುತ್ತದೆ. ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಖಚಿತ; ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ವಿಶ್ವಾಸ
ಮೊಘಲರು 850 ವರ್ಷಗಳ ಕಾಲ ಆಳಿದರು. ಇದೀಗ ಜನರು ಎಚ್ಚೆತ್ತುಕೊಂಡಿದ್ದಾರೆ. ಜನರು ಸಂಸತ್ತಿನ ಚುನಾವಣೆಯಲ್ಲಿ ಉತ್ತರವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಂದರೆ 2027ರಲ್ಲಿ ಬಿಜೆಪಿ ಖಂಡಿತವಾಗಿಯೂ ಅಧಿಕಾರದಿಂದ ಕೆಳಗಿಳಿಯುತ್ತದೆ. ಆಗ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಅಮ್ರೋಹಾದ ಶಾಸಕ ಮೆಹಬೂಬ್ ಅಲಿ ಹೇಳಿದ್ದಾರೆ.
SP MLA from Amroha Mehboob Ali has in the “Samvidhan Samman” meeting says
“Yogi rule will end because the Muslim population is increasing now”
1) They often complained about 80:20 statement – who does 80 vs 20 is before you
2) Is this Muhabbat ki Dukaan ? Is it pro… pic.twitter.com/KAr6BtO2qa
— Shehzad Jai Hind (Modi Ka Parivar) (@Shehzad_Ind) September 30, 2024
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಬಿಜ್ನೋರ್ ಮುಖ್ಯಸ್ಥ ಶೇಖ್ ಜಾಕಿರ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಧರ್ಮದ ಆಧಾರದ ಮೇಲೆ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಯನ್ನು ಎಸ್‌ಪಿ ಶಾಸಕ ನೀಡಿದ್ದಾರೆ ಎಂದು ಎಫ್ಐಆರ್ ದಾಖಲಿಸಲಾಗಿದೆ.
Samajwadi Party MLA Mehboob Ali’s statement, ”The Muslim population has increased, now your rule will end,” reflects the anti-Hindu stance within the party.
Despite India being 80% Hindu, SP leaders allow such divisive remarks, showing their true intentions. pic.twitter.com/z1F7QiOJI5
— Vishnu Vardhan Reddy (@SVishnuReddy) September 30, 2024
ಇದನ್ನೂ ಓದಿ: ಜಮ್ಮುವಿನಲ್ಲಿ ಸಭೆಯ ವೇಳೆ ಅಸ್ವಸ್ಥಗೊಂಡಿದ್ದ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಮೆಹಬೂಬ್ ಅಲಿ ಅವರ ಹೇಳಿಕೆಗಳ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಇದಕ್ಕೆ ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲಿಯವರ ಹೇಳಿಕೆಯನ್ನು ಬಿಜೆಪಿಯ ಆಂಧ್ರಪ್ರದೇಶದ ಉಪಾಧ್ಯಕ್ಷರು ಸಹ ಟೀಕಿಸಿದ್ದಾರೆ. ಅವರು ಎಕ್ಸ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ, ಈಗ ಬಿಜೆಪಿಯ ಆಡಳಿತ ಕೊನೆಗೊಳ್ಳುತ್ತದೆ. ಇದು ಪಕ್ಷದೊಳಗೆ ಹಿಂದೂ ವಿರೋಧಿ ನಿಲುವನ್ನು ಪ್ರತಿಬಿಂಬಿಸುತ್ತದೆ. ಭಾರತವು 80% ಹಿಂದೂ ಆಗಿದ್ದರೂ ಎಸ್‌ಪಿ ನಾಯಕರು ತಮ್ಮ ನಿಜವಾದ ಉದ್ದೇಶಗಳನ್ನು ತೋರಿಸುವ ಇಂತಹ ವಿಭಜಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಶಾಸಕ ಮೆಹಬೂಬ್ ಅಲಿ ವಿರುದ್ಧ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ