ಜಮ್ಮುವಿನಲ್ಲಿ ಸಭೆಯ ವೇಳೆ ಅಸ್ವಸ್ಥಗೊಂಡಿದ್ದ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

ಜಮ್ಮುವಿನಲ್ಲಿ ನಡೆದ ಸಭೆಯಲ್ಲಿ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಕುರಿತು ಪ್ರಧಾನಿ ಮೋದಿ ಕರೆ ಮಾಡಿ ವಿಚಾರಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ಭಾನುವಾರ ಪ್ರಚಾರ ಅಂತ್ಯಗೊಂಡಿತ್ತು, ಅಂದು ಸಭೆಯನ್ನುದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ, ‘‘ನನಗೆ ಈಗ 83 ವರ್ಷ, ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ’’ ಎಂದು ಹೇಳುತ್ತಿರುವಾಗಲೇ ಅಸ್ವಸ್ಥಗೊಂಡಿದ್ದರು.

ಜಮ್ಮುವಿನಲ್ಲಿ ಸಭೆಯ ವೇಳೆ ಅಸ್ವಸ್ಥಗೊಂಡಿದ್ದ ಖರ್ಗೆ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆImage Credit source: ABP Live
Follow us
|

Updated on:Sep 30, 2024 | 10:26 AM

ಜಮ್ಮುವಿನಲ್ಲಿ ನಡೆದ ಸಭೆಯಲ್ಲಿ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆರೋಗ್ಯ ಕುರಿತು ಪ್ರಧಾನಿ ಮೋದಿ ಕರೆ ಮಾಡಿ ವಿಚಾರಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ಭಾನುವಾರ ಪ್ರಚಾರ ಅಂತ್ಯಗೊಂಡಿತ್ತು, ಅಂದು ಸಭೆಯನ್ನುದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿರುವಾಗ ಅಸ್ವಸ್ಥಗೊಂಡಿದ್ದರು., ಬಳಿಕ ಮಾತು ಮುಂದುವರೆಸಿ ‘‘ನನಗೆ ಈಗ 83 ವರ್ಷ, ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ’’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಕರೆ ಮಾಡಿ ಖರ್ಗೆಯವರು ಆರೋಗ್ಯ ವಿಚಾರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಗಣಿಗಾರಿಕೆ ಮತ್ತು ಮದ್ಯದ ಒಪ್ಪಂದಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೊರಗಿನವರಿಗೆ ಪ್ರಾಬಲ್ಯ ಸಾಧಿಸಲು ಬಿಜೆಪಿ ಅವಕಾಶ ನೀಡುತ್ತಿದೆ ಎಂದು ಖರ್ಗೆ ಆರೋಪಿಸಿದರು.

ಕೆಲಕಾಲ ಅವರನ್ನು ವೇದಿಕೆಯ ಮೇಲೆ ಕೂರಿಸಲಾಯಿತು. ಸ್ವಲ್ಪ ಹೊತ್ತು ಕುಳಿತ ನಂತರ ಮತ್ತೊಮ್ಮೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು ನಂತರ ವೇದಿಕೆ ಮೇಲೆ ನಿಂತು ಭಾಷಣ ಆರಂಭಿಸಿ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಹೋರಾಟ ನಡೆಸುತ್ತೇವೆ ಎಂದರು.

ಮತ್ತಷ್ಟು ಓದಿ: ವೇದಿಕೆಯ ಮೇಲೆ ಕುಸಿದುಬಿದ್ದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಜಮ್ಮು ಮತ್ತು ಕಾಶ್ಮೀರದ ಯುವಕರ ಭವಿಷ್ಯಕ್ಕಾಗಿ ಮೋದಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ, ವಾಸ್ತವವೆಂದರೆ ಕಳೆದ 10 ವರ್ಷಗಳಲ್ಲಿ ಇಡೀ ದೇಶದ ಯುವಕರನ್ನು ಕತ್ತಲೆಗೆ ತಳ್ಳಲಾಗಿದೆ, ಇದಕ್ಕೆ ಸ್ವತಃ ಮೋದಿಯವರೇ ಕಾರಣ ಎಂದು ಖರ್ಗೆ ಆರೋಪಿಸಿದ್ದಾರೆ.

ಅಕ್ಟೋಬರ್ 1 ರಂದು ನಡೆಯಲಿರುವ ಮತದಾನಕ್ಕೂ ಮುನ್ನ ಜಸ್ರೋಟಾದ ಕಾಂಗ್ರೆಸ್ ಅಭ್ಯರ್ಥಿ ಠಾಕೂರ್ ಬಲ್ಬೀರ್ ಸಿಂಗ್ ಪರ ಖರ್ಗೆ ಪ್ರಚಾರ ನಡೆಸುತ್ತಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:26 am, Mon, 30 September 24

Nithya Bhavishya: ಈ ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ
Nithya Bhavishya: ಈ ರಾಶಿಯವರಿಗೆ ಇಂದು ಮಾನಸಿಕ ನೆಮ್ಮದಿ
ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್