ಬೆಂಗಳೂರು: ಹಸಿರು ನಮ್ಮ ಉಸಿರು, ಪ್ರತಿಯೊಬ್ಬ ವ್ಯಕ್ತಿಯು ಬದುಕಬೇಕಾದರೆ ಈ ಪ್ರಕೃತಿ ಎಂಬುದು ಬಹಳ ಮುಖ್ಯ, ಅದೆಷ್ಟೋ ಜನ ಈ ಪರಿಸರಕ್ಕಾಗಿ ಜೀವವನ್ನು ಮುಡಿಪಾಗಿಟ್ಟಿದ್ದಾರೆ. ಇಂತಹವರ ಸಾಲಿನಲ್ಲಿ ನಮ್ಮ ಕರ್ನಾಟಕದ ಸಾಲು ಮರದ ತಿಮ್ಮಕ್ಕ ಕೂಡ ಒಬ್ಬರು, ಮರಗಳೇ ನನ್ನ ಮಕ್ಕಳು ಎಂದು ತನ್ನ ಜೀವನವನ್ನು ಮುಡಿಪಾಗಿಟ್ಟರು, ಹೀಗೆ ದೇಶದ ಅನೇಕ ಭಾಗಗಳಲ್ಲಿ ಇಂತಹ ಅನೇಕ ಸಾಲು ಮರದ ತಿಮ್ಮಕ್ಕನಂತಹ ಪರಿಸರ ಪ್ರೇಮಿಗಳಿದ್ದರೆ. ಅವರಲ್ಲಿ ಒಬ್ಬರು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಅಸ್ಸಾಂನ ಜಾದವ್ ಮೊಲಾಯ್ ಪಯೆಂಗ್.
ಇವರಿಗೆ ನಿಸರ್ಗ, ಪರಿಸರ ಎಂದರೆ ಪ್ರಾಣ. ಜೀವಿಗಳ ಉಳಿವಿಗಾಗಿ, ಪರಿಸರ ಸಂರಕ್ಷಣೆಗಾಗಿ 42 ವರ್ಷಗಳಿಂದ ಸಸಿಗಳನ್ನು ನೆಡುತ್ತಿದ್ದಾರೆ. ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಸ್ವಂತವಾಗಿ ಮರಗಳನ್ನು ನೆಡುತ್ತಿದ್ದಾರೆ. ಅದಕ್ಕೆ ಅವರನ್ನು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಇವರ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 1979ರಲ್ಲಿ ಆರಂಭವಾದ ಅವರ ಸೇವೆ. ಈಗಲೂ ಮುಂದುವರಿದಿದೆ. 1979 ರಲ್ಲಿ, 16 ವರ್ಷದ ಹುಡುಗನಾಗಿದ್ದಾಗ, ದಿನಕ್ಕೆ ಒಂದು ಸಸಿ ನೆಡಲು ಪ್ರಾರಂಭಿಸಿದ ಜಾದವ್ ಮೊಲಾಯ್ ಪಯೆಂಗ್ ಅವರು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಎಂಬ ಹೆಸರಿನಿಂದಲ್ಲೇ ಜನಪ್ರಿಯವಾದರು.
ದಿನಕ್ಕೆ ಒಂದು ಸಸಿ ನೆಡುವ ಮೂಲಕ ಅವರ ಆಲೋಚನೆಯು ವನ ವೃಕ್ಷದ ಸ್ಥಾಪನೆಗೆ ಕಾರಣವಾಯಿತು. 42 ವರ್ಷಗಳ ಕಾಲ ಮುಂದುವರಿದ ಈ ಆಂದೋಲನದಿಂದ ಜಾಧವ್ ಏಕಾಂಗಿಯಾಗಿ 550 ಹೆಕ್ಟೇರ್‌ಗೂ ಹೆಚ್ಚು ಅರಣ್ಯವನ್ನು ಸೃಷ್ಟಿಸಿದ್ದಾರೆ. ಅಸ್ಸಾಂನಲ್ಲಿ 550 ಹೆಕ್ಟೇರ್ ಒಣ ತ್ಯಾಜ್ಯ ಭೂಮಿಯನ್ನು ಹಸಿರು ಅರಣ್ಯವಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ, ಮುಲೈ ಅರಣ್ಯವು 1360 ಎಕರೆ ಪ್ರದೇಶದಲ್ಲಿ ಮರಗಳನ್ನು ನೆಟ್ಟಿದ್ದು. ಈ ಅರಣ್ಯ ಪ್ರದೇಶವು ಆನೆಗಳು ಮತ್ತು ಇತರ ಪ್ರಾಣಿಗಳ ಆವಾಸಸ್ಥಾನವಾಗಿದೆ.
ಇದನ್ನೂ ಓದಿ:My India My Life Goals: ಚಂಡೀಗಢ್ ಪೊಲೀಸ್ ಕಾನ್ಸ್ಟೇಬಲ್ ದೇವೆಂದರ್ ಸುರಾ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿ
ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಜಾಧವ್ ಮೊಲಾಯ್ ಪಯೆಂಗ್ ಅವರ ತಮ್ಮ ಪಯಣದ ಬಗ್ಗೆ ಮಾತುಗಳನ್ನು ಹಂಚಿಕೊಂಡಿದ್ದಾರೆ. 42 ವರ್ಷಗಳಿಂದ ಪ್ರತಿದಿನ ಸಸಿಗಳನ್ನು ನೆಡುತ್ತಿದ್ದೇನೆ. ಬೆಳಿಗ್ಗೆ ಮೂರು ಗಂಟೆಗೆ ಎದ್ದು ಐದು ಗಂಟೆಗೆ ದೋಣಿಯಲ್ಲಿ ಕಾಡು ತಲುಪುತ್ತೇನೆ. ನಾನು ಈ ಕಾಡಿನಲ್ಲಿಯೇ ಮದುವೆಯಾದೆ, ನಮ್ಮ ಮಗ, ಮಗಳೂ ಇಲ್ಲೇ ಹುಟ್ಟಿದ್ದು. ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ನಾವು ಭೂಮಿ ತಾಯಿಯನ್ನು ಪ್ರೀತಿಸಬೇಕು. ದೇಶದಲ್ಲಿರುವ 140 ಕೋಟಿ ಭಾರತೀಯರು ಪ್ರಕೃತಿಯನ್ನು ಪ್ರೀತಿಸಬೇಕು. ಪರಿಸರ ಕಾಪಾಡಬೇಕು. ಆಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. ಸರ್ಕಾರ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ ನನಗೆ ಹಣ ಬೇಕಿಲ್ಲ. ಸರ್ಕಾರ ನೀಡುವ ಗೌರವವನ್ನು ದೊಡ್ಡ ಗೌರವ ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:03 pm, Wed, 21 June 23