AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

My India My Life Goals: ಚಂಡೀಗಢ್ ಪೊಲೀಸ್ ಕಾನ್​ಸ್ಟೇಬಲ್ ದೇವೆಂದರ್ ಸುರಾ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿ

My India My Life Goals: ಚಂಡೀಗಢ್ ಪೊಲೀಸ್ ಕಾನ್​ಸ್ಟೇಬಲ್ ದೇವೆಂದರ್ ಸುರಾ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿ

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Jun 22, 2023 | 2:39 PM

ಇಂಥ ಸದ್ಬುದ್ಧಿಯ ಜನರಿಂದಾಗೇ ಉಸಿರಾಡಲು ಆಮ್ಲಜನಕ ಲಭ್ಯವಾಗುತ್ತಿದೆ, ಕಣ್ಣಿಗೆ ತಂಪನ್ನೀಯುವ ಹಸಿರು ಗಿಡಮರಗಳು ನೋಡಸಿಗುತ್ತಿವೆ ಅಂದರೆ ಉತ್ಪ್ರೇಕ್ಷೆ ಅನಿಸದು.

ಬೆಂಗಳೂರು: ಹಸಿರು ಯೋಧ (green warrior), ಹಸಿರು ಕ್ರಾಂತಿಕಾರ, ಪರಿಸರ ರಕ್ಷಕ, ಪರಿಸರವಾದಿ (environmentalist) ಮೊದಲಾದ ಎಲ್ಲ ವಿಶೇಷಣಗಳನ್ನು ಬಳಸಿದಾಗ್ಯೂ ಚಂಡೀಗಢ್ ಪೊಲೀಸ್ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ದೇವೆಂದರ್ ಸುರಾ (Devender Sura) ಆವರ ಪರಿಸರ ಪ್ರೇಮವನ್ನು ವ್ಯಾಖ್ಯಾನಿಸಲಾಗದು. ಇಂಥ ಸದ್ಬುದ್ಧಿಯ ಜನರಿಂದಾಗೇ ನಮಗೆ ಉಸಿರಾಡಲು ಆಮ್ಲಜನಕ ಲಭ್ಯವಾಗುತ್ತಿದೆ, ಕಣ್ಣಿಗೆ ತಂಪನ್ನೀಯುವ ಹಸಿರು ಗಿಡಮರಗಳು ನೋಡಸಿಗುತ್ತಿವೆ ಅಂದರೆ ಉತ್ಪ್ರೇಕ್ಷೆ ಅನಿಸದು. ಸರ್ಕಾರೀ ಕೆಲಸ ಸಿಕ್ಕ ಕೂಡಲೇ ಕೂಡಲೇ ಹೆತ್ತ ತಾಯಿ ತಂದೆಯನ್ನೂ ಮರೆಯುವ ಜನ ನಮ್ಮ ನಡುವೆ ಇದ್ದಾರೆ. ಆದರೆ ದೇವೆಂದರ್ ಇಡೀ ಮನುಕುಲದ ತಾಯಿಯೆನಿಸಿಕೊಳ್ಳುವ ಭೂಮಿಯ ಸಂರಕ್ಷಣೆ ಮತ್ತು ಅದರ ಅರೋಗ್ಯಕ್ಕಾಗಿ ಯಾರೂ ನಿರೀಕ್ಷಿಸದನ್ನು ಮಾಡುತ್ತಿದ್ದಾರೆ. ಅವರ ಗುರಿ, ಸಂಕಲ್ಪ, ಬದ್ಧತೆ, ಕಾಳಜಿಗಳಿಗೆ ಕನ್ನಡಿಗರದೊಂದು ಸಲಾಂ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Jun 07, 2023 04:32 PM