My India My Life Goals: ಸಾಮಾನ್ಯರೂ ಪರಿಸರಪರ ಕೆಲಸಕ್ಕೆ ಹೇಗೆ ಕೈಜೋಡಿಸೋದು? ವಿಶ್ವಸಂಸ್ಥೆಯಿಂದ ಮೆಚ್ಚುಗೆ ಪಡೆದ ಆಫ್ರೋಜ್ ಷಾ ಹೇಳಿದ ಟಿಪ್ಸ್…

Green Warrior Afroz Shah On Protecting Environment: ಟಿವಿ9 ನಡೆಸುತ್ತಿರುವ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ ಅಭಿಯಾನದಲ್ಲಿ ಪಾಲ್ಗೊಂಡಿರುವ ಅಫ್ರೋಜ್ ಷಾ, ಒಬ್ಬ ಸಾಮಾನ್ಯ ವ್ಯಕ್ತಿಯೂ ಹೇಗೆಲ್ಲಾ ಪರಿಸರಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದಾರೆ.

My India My Life Goals: ಸಾಮಾನ್ಯರೂ ಪರಿಸರಪರ ಕೆಲಸಕ್ಕೆ ಹೇಗೆ ಕೈಜೋಡಿಸೋದು? ವಿಶ್ವಸಂಸ್ಥೆಯಿಂದ ಮೆಚ್ಚುಗೆ ಪಡೆದ ಆಫ್ರೋಜ್ ಷಾ ಹೇಳಿದ ಟಿಪ್ಸ್...
ಅಫ್ರೋಜ್ ಷಾ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 27, 2023 | 11:36 AM

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪರಿಸರ ಉಳಿದರೆ ಮನುಷ್ಯರೂ ಸೇರಿದಂತೆ ಜೀವಸಂಕುಲ ಉಳಿಯುತ್ತದೆ. ನಮ್ಮ ಭೂಮಿಯ ಪರಿಸರ ಅತಿಹೆಚ್ಚು ಹಾನಿಯಾಗುತ್ತಿರುವುದು ಮನುಷ್ಯರಿಂದಲೇ. ಹೀಗಾಗಿ, ನಾವು ಪ್ರತಿಯೊಬ್ಬರೂ ಪರಿಸರ ರಕ್ಷಣೆಯ (Environment Protection) ಮಹತ್ವದ ಜವಾಬ್ದಾರಿ ಹೊರಲೇ ಬೇಕಿದೆ. ನಾವು ಚುನಾಯಿಸಿ ಕಳುಹಿಸಿರುವ ಸರಕಾರ ಈ ಕೆಲಸ ಮಾಡಬೇಕು, ತಾನೇನು ಮಾಡಲು ಸಾಧ್ಯ ಎಂದು ಸುಮ್ಮನೆ ಕೂರಲು ಆಗದು. ನಮ್ಮದೇ ರೀತಿಯಲ್ಲಿ ಪರಿಸರ ರಕ್ಷಣೆ ಕಾರ್ಯದಲ್ಲಿ ಕೈಜೋಡಿಸಬಹುದು. ಈ ವಿಚಾರದಲ್ಲಿ ಖ್ಯಾತ ಪರಿಸರ ಕಾರ್ಯಕರ್ತ ಅಫ್ರೋಜ್ ಷಾ (Afroz Shah) ಆದರ್ಶಪ್ರಾಯ ಎನಿಸಿದ್ದಾರೆ. ಮುಂಬೈನ ವೆರ್ಸೋವಾ ಬೀಚ್ ಪ್ಲಾಸ್ಟಿಕ್ ಮುಕ್ತ ಆಗಲು ಬಹುತೇಕ ಈ ವ್ಯಕ್ತಿಯೇ ಕಾರಣ. ಟಿವಿ9 ನಡೆಸುತ್ತಿರುವ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ (My India My Life Goals) ಅಭಿಯಾನದಲ್ಲಿ ಪಾಲ್ಗೊಂಡಿರುವ ಅಫ್ರೋಜ್ ಷಾ, ಒಬ್ಬ ಸಾಮಾನ್ಯ ವ್ಯಕ್ತಿಯೂ ಹೇಗೆಲ್ಲಾ ಪರಿಸರಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದಾರೆ.

ಮೈ ಇಂಡಿಯಾ ಮೈ ಲೈಫ್ ಗೋಲ್ಸ್ ಅಭಿಯಾನದ ಬಗ್ಗೆ….

ಜೂನ್ 5, ವಿಶ್ವ ಪರಿಸರ ದಿನ. 1973ರಿಂದ ಪ್ರತೀ ವರ್ಷವೂ ಈ ದಿನದಂದು ಪರಿಸರ ದಿನ ಆಚರಿಸಲಾಗುತ್ತಿದೆ. ಈ ವರ್ಷ ಗೋಲ್ಡನ್ ಜ್ಯೂಬಿಲಿಯ ಸಂಭ್ರಮ. ಕೇಂದ್ರ ಸರ್ಕಾರ ವಿಶ್ವ ಪರಿಸರ ದಿನದ ಸ್ವರ್ಣಮಹೋತ್ಸವದ ನಿಮಿತ್ತ ಮೈ ಇಂಡಿಯಾ ಮೈ ಲೈಫ್ ಗೋಲ್ಸ್ ಘೋಷವಾಕ್ಯದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಟಿವಿ9 ನೆಟ್ವರ್ಕ್ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದೆ. ವಿವಿಧ ಪರಿಸರಪ್ರೇಮಿಗಳು, ಪರಿಸರ ಕಾರ್ಯಕರ್ತರನ್ನು ಟಿವಿ9 ಈ ಅಭಿಯಾನಕ್ಕೆ ಜೋಡಿಸಿಕೊಂಡಿದೆ. ಅದರಲ್ಲಿ ಅಫ್ರೋಜ್ ಶಾ ಕೂಡ ಒಬ್ಬರು.

ಇದನ್ನೂ ಓದಿMy India My Life Goals: ಭೂಮಿ ತಾಯಿಯನ್ನು ಪ್ರೀತಿಸಿದರೆ ಮಾತ್ರ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ

ಯಾರು ಈ ಅಫ್ರೋಜ್ ಷಾ?

ಮುಂಬೈನವರಾದ ಅಫ್ರೋಜ್ ಷಾ ವೃತ್ತಿಯಲ್ಲಿ ವಕೀಲರು. ಮುಂಬೈನ ವರ್ಸೋವಾ ಬೀಚ್ ಕೆಲ ವರ್ಷಗಳ ಹಿಂದೆ ವಿಪರೀತ ಕೊಳಕಾಗಿಹೋಗಿತ್ತು. ಪ್ಲಾಸ್ಟಿಕ್ ತ್ಯಾಜ್ಯಗಳು ಈ ಬೀಚ್​ನ ಪರಿಸರಕ್ಕೆ ಮತ್ತು ಸಾಗರಜೀವಿಗಳಿಗೆ ಮಾರಕವಾಗಿದ್ದವು. ಆಗ ಅಫ್ರೋಜ್ ಷಾ ಈ ಬೀಚ್ ಅನ್ನು ತ್ಯಾಜ್ಯಮುಕ್ತಗೊಳಿಸುವ ಸಂಕಲ್ಪದೊಂದಿಗೆ ಸ್ವಚ್ಛ ಅಭಿಯಾನಕ್ಕೆ ಪ್ರೇರಣೆ ನೀಡಿದರು. ಅಫ್ರೋಜ್ ಷಾ ಹಾಗು ಅವರ ಸಂಗಡಿಗ ಪರಿಸರಪ್ರೇಮಿಗಳೆಲ್ಲರೂ ಸೇರಿ ಮುಂಬೈನ ಬೀಚ್​ಗಳಿಂದ 50 ಲಕ್ಷ ಕಿಲೋನಷ್ಟು ತ್ಯಾಜ್ಯವನ್ನು ನಿರ್ಮೂಲನೆಗೊಳಿಸಿದರು. ವಿಶ್ವಾದ್ಯಂತ ಜನರು ತಾವಿರುವ ಸ್ಥಳದ ಸುತ್ತಮುತ್ತ ತ್ಯಾಜ್ಯಮುಕ್ತಗೊಳಿಸಲೂ ಶಾ ಪ್ರೇರಣೆ ನೀಡಿದರು. ವಿಸ್ವಸಂಸ್ಥೆಯೂ ಕೂಡ ಅಫ್ರೋಜ್ ಷಾ ಅವರಿಗೆ ಶಾಹಬ್ಬಾಸ್​ಗಿರಿ ಹೇಳಿದೆ.

ನಾವು ನೀವೂ ಹೇಗೆಲ್ಲಾ ಪರಿಸರ ಕಾರ್ಯ ಮಾಡಬಹುದು? ಅಫ್ರೋಜ್ ಷಾ ಕೊಟ್ಟ ಟಿಪ್ಸ್ ಇವು

  • ಪ್ರತಿಯೊಬ್ಬ ಭಾರತೀಯ, ಆತ ಹಳ್ಳಿಯಲ್ಲೇ ಇರಲಿ ನಗರದಲ್ಲೇ ಇರಲಿ ಎಲ್ಲಾದರೂ ಇರಲಿ ಪರಿಸರ ಸಂರಕ್ಷಣಿ ಸಣ್ಣ ಸಣ್ಣ ಕೆಲಸಗಳನ್ನು ಆರಾಮವಾಗಿ ಮಾಡಬಹುದು.
  • ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಯಾವುದಕ್ಕೆಲ್ಲಾ ಬಳಕೆ ಮಾಡುತ್ತೇವೆ ಎಂಬುದನ್ನು ಪಟ್ಟಿ ಮಾಡಿ. ಅದನ್ನು ಯಾವ ರೀತಿ ಕಡಿಮೆ ಮಾಡೋದು ಅನ್ನೋದನ್ನು ಆಲೋಚಿಸಿ.
  • ನೀವು ಮನೆಯಿಂದ ಹೊರಗೆ ಹೋಗುವಾಗಲೇ ನೀರಿನ ಬಾಟಲಿ ತೆಗೆದುಕೊಂಡು ಹೋಗಿ.
  • ಚಹಾ, ಕಾಫಿ ಮಗ್ಗು ಇತ್ಯಾದಿಯನ್ನು ಮನೆಯಿಂದಲೇ ತೆಗೆದುಕೊಂಡು ಹೋಗುವುದರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಹವಾಸ ತಪ್ಪಿಸಬಹುದು.
  • ಈ ದೇಶದಲ್ಲಿ 150 ಕೋಟಿ ಜನರಿದ್ದೇವೆ. ಎಲ್ಲರೂ ತಮ್ಮದೇ ಟೀ ಕಪ್ ಬಳಸಿದರೆ ಒಂದೇ ದಿನದಲ್ಲಿ 5,000 ಕೋಟಿ ಪ್ಲಾಸ್ಟಿಕ್ ಕಪ್ ಬಳಕೆ ಕಡಿಮೆ ಆಗುತ್ತೆ.

ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Wed, 21 June 23