ನಾನು ದಣಿದಿಲ್ಲ, ನಿವೃತ್ತಿಯೂ ಆಗಿಲ್ಲ: ಅಜಿತ್ ಪವಾರ್ ಟೀಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ ಶರದ್ ಪವಾರ್

ಶನಿವಾರ ತಮ್ಮ ಪಕ್ಷವನ್ನು ಪುನರ್ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದ ಪವಾರ್, "ಮೊರಾರ್ಜಿ ದೇಸಾಯಿ ಅವರು ಯಾವ ವಯಸ್ಸಿನಲ್ಲಿ ಪ್ರಧಾನಿಯಾದರು ಎಂದು ನಿಮಗೆ ತಿಳಿದಿದೆಯೇ? ನನಗೆ ಪ್ರಧಾನಿ ಅಥವಾ ಮಂತ್ರಿಯಾಗಲು ಇಷ್ಟವಿಲ್ಲ. ನಾನು ಜನರ ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ನಾನು ದಣಿದಿಲ್ಲ, ನಿವೃತ್ತಿಯೂ ಆಗಿಲ್ಲ: ಅಜಿತ್ ಪವಾರ್ ಟೀಕೆಗೆ ಖಡಕ್ ಪ್ರತಿಕ್ರಿಯೆ ನೀಡಿದ ಶರದ್ ಪವಾರ್
ಶರದ್ ಪವಾರ್
Follow us
ರಶ್ಮಿ ಕಲ್ಲಕಟ್ಟ
|

Updated on: Jul 08, 2023 | 3:23 PM

ಬಿಜೆಪಿಯ ನೆರವಿನೊಂದಿಗೆ ತಮ್ಮ ಸೋದರಳಿಯ ಅಜಿತ್ ಪವಾರ್ (Ajit Pawar) ಅವರ ರಹಸ್ಯ ದಂಗೆಯ ನಂತರ ತಮ್ಮ 24 ವರ್ಷದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (NCP) ಪುನರಾಭಿವೃದ್ಧಿ ಮಾಡಲು 82ರ ಹರೆಯದ ಶರದ್ ಪವಾರ್ (Sharad Pawar) ಮತ್ತೆ ಎದ್ದು ನಿಂತಿದ್ದಾರೆ. ಶರದ್ ಪವಾರ್ ಅವರಿಗೆ ವಯಸ್ಸಾಗಿದೆ ಅವರಿನ್ನು ನಿವೃತ್ತಿ ಪಡೆಯಬಹುದು ಎಂಬ ಅಜಿತ್ ಪವಾರ್ ಸಲಹೆಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ವಾಜಪೇಯಿ ಮಾತನ್ನು ಉಲ್ಲೇಖಿಸಿ ನಾನು ದಣಿದಿಲ್ಲ, ನಿವೃತ್ತಿಯಾಗಿಲ್ಲ ಎಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಪಕ್ಷದ ನಾಯಕತ್ವವನ್ನು ಅಡ್ವಾಣಿ ಅವರಿಗೆ ವರ್ಗಾಯಿಸಿದಾಗ ‘ನಾನು ದಣಿದಿಲ್ಲ, ನಿವೃತ್ತಿ ಹೊಂದಿಲ್ಲ.ಆದರೆ ಈಗ ಅಡ್ವಾಣಿ ನೇತೃತ್ವದಲ್ಲಿ ಗೆಲುವಿನತ್ತ ಮುನ್ನಡೆಯಬೇಕು ಎಂದು ಹೇಳಿದ್ದರು’ ಎಂದು ಶರದ್ ಪವಾರ್ ವಾಜಪೇಯಿ ಮಾತುಗಳನ್ನು ನೆನೆದಿದ್ದಾರೆ.

ತಮ್ಮ ಮಾವನ ಈಗ ನಿವೃತ್ತಿಯಾಗಬೇಕು ಎಂದು ಅಜಿತ್ ಪವಾರ್ ಸೂಚಿಸಿದ ನಂತರ ಶರದ್ ಪವಾರ್ ತಮ್ಮ ವಯಸ್ಸು, ಆರೋಗ್ಯ ಸ್ಥಿತಿ ಹೆಚ್ಚು ಚರ್ಚೆಯಲ್ಲಿದೆ ಎಂದಿದ್ದಾರೆ.

ಎಲ್ಲರ ಮುಂದೆ ನನ್ನನ್ನು ಖಳನಾಯಕನನ್ನಾಗಿ ಬಿಂಬಿಸಿದ್ದೀರಿ. ಅವರ (ಶರದ್ ಪವಾರ್) ಬಗ್ಗೆ ನನಗೆ ಇನ್ನೂ ಅತೀವ ಗೌರವವಿದೆ. ಆದರೆ ನೀವು ಹೇಳಿ, ಐಎಎಸ್ ಅಧಿಕಾರಿಗಳು 60 ವರ್ಷಕ್ಕೆ ನಿವೃತ್ತಿ ಹೊಂದುತ್ತಾರೆ. ರಾಜಕೀಯದಲ್ಲಿಯೂ ಬಿಜೆಪಿ ನಾಯಕರು 75 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಾರೆ. ನೀವು ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಉದಾಹರಣೆಯನ್ನು ನೋಡಬಹುದು. ಅದು ಹೊಸ ಪೀಳಿಗೆಯನ್ನು ಏರಲು ಅನುವು ಮಾಡಿಕೊಡುತ್ತದೆ ಎಂದು ಅಜಿತ್ ಪವಾರ್ ಹೇಳಿದ್ದರು.

ಇದನ್ನೂ ಓದಿ: ತೆಲಂಗಾಣದ ವಾರಂಗಲ್​​​ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ; ಚಿತ್ರಗಳಲ್ಲಿ ನೋಡಿ

ಟೀಕೆಗಳನ್ನು ಧೈರ್ಯದಿಂದ ಎದುರಿಸಿದ ಶರದ್ ಪವಾರ್,ನನ್ನ ವಯಸ್ಸು 82 ಅಥವಾ 92 ಆಗಿರಲಿ ನಾನು ಇನ್ನೂ ಚುರುಕಾಗಿಯೇ ಇದ್ದೇನೆ ಎಂದು ಹೇಳಿದ್ದರು. ಶನಿವಾರ ತಮ್ಮ ಪಕ್ಷವನ್ನು ಪುನರ್ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದ ಪವಾರ್, “ಮೊರಾರ್ಜಿ ದೇಸಾಯಿ ಅವರು ಯಾವ ವಯಸ್ಸಿನಲ್ಲಿ ಪ್ರಧಾನಿಯಾದರು ಎಂದು ನಿಮಗೆ ತಿಳಿದಿದೆಯೇ? ನನಗೆ ಪ್ರಧಾನಿ ಅಥವಾ ಮಂತ್ರಿಯಾಗಲು ಇಷ್ಟವಿಲ್ಲ. ನಾನು ಜನರ ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ