AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ 3.0 ಕ್ಯಾಬಿನೆಟ್: ನೂತನ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಪೂರ್ಣ ಪಟ್ಟಿ

ರಾಜನಾಥ್ ಸಿಂಗ್ ಅವರಿಗೆ, ರಕ್ಷಣಾ ಸಚಿವ,ಅಮಿತ್ ಶಾ ಅವರಿಗೆ - ಗೃಹ ಖಾತೆ, ನಿತಿನ್ ಜೈರಾಮ್ ಗಡ್ಕರಿ ಅವರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಸ್ಥಾನ ಮತ್ತು ಜಗತ್ ಪ್ರಕಾಶ್ ನಡ್ಡಾ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ,ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಸ್ಥಾನ ನೀಡಲಾಗಿದೆ. ಅದೇ ವೇಳೆ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನ ನೀಡಿದರೆ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಸ್ಥಾನ ನೀಡಲಾಗಿದೆ.

ಮೋದಿ 3.0 ಕ್ಯಾಬಿನೆಟ್: ನೂತನ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ? ಇಲ್ಲಿದೆ ಪೂರ್ಣ ಪಟ್ಟಿ
ನರೇಂದ್ರ ಮೋದಿ ಸಚಿವ ಸಂಪುಟ
ರಶ್ಮಿ ಕಲ್ಲಕಟ್ಟ
|

Updated on:Jun 10, 2024 | 8:36 PM

Share

ದೆಹಲಿ: ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿಯವರ ಜತೆ ನೂತನ ಸರ್ಕಾರದ 71 ಸಚಿವರು ಕೂಡಾ ಪ್ರಮಾಣ ಸ್ವೀಕರಿಸಿದ್ದು, ಈ 71 ಸಚಿವರ ಪೈಕಿ 30 ಕ್ಯಾಬಿನೆಟ್ ಮಂತ್ರಿಗಳಾಗಿ, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಮಂತ್ರಿಗಳಾಗಿ ಮತ್ತು 36 ರಾಜ್ಯ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು. ಅಮಿತ್ ಶಾ (Amit Shah) ಅವರು ಗೃಹ ಖಾತೆ, ರಾಜನಾಥ್ ಸಿಂಗ್ ಅವರು  ರಕ್ಷಣಾ ಖಾತೆಯಲ್ಲೇ ಮುಂದುವರಿಯಲಿದ್ದಾರೆ. ಏತನ್ಮಧ್ಯೆ, ಈ ಹಿಂದಿನ ಸರ್ಕಾರದಲ್ಲಿ ಇದ್ದಂತೆ ನಿತಿನ್ ಗಡ್ಕರಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯನ್ನು ನೀಡಲಾಗಿದೆ.

ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಕ್ಯಾಬಿನೆಟ್ ಸಚಿವರು ಇವರು

  • ರಾಜನಾಥ್ ಸಿಂಗ್ – ರಕ್ಷಣಾ ಸಚಿವ
  • ಅಮಿತ್ ಶಾ – ಗೃಹ ಸಚಿವ; ಸಹಕಾರ ಸಚಿವರು.
  • ನಿತಿನ್ ಜೈರಾಮ್ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ.
  • ಜಗತ್ ಪ್ರಕಾಶ್ ನಡ್ಡಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು; ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರು.
  • ಶಿವರಾಜ್ ಸಿಂಗ್ ಚೌಹಾಣ್ – ಕೃಷಿ ಮತ್ತು ರೈತರ ಕಲ್ಯಾಣ ಸಚಿವ; ಗ್ರಾಮೀಣಾಭಿವೃದ್ಧಿ ಸಚಿವರು.
  • ನಿರ್ಮಲಾ ಸೀತಾರಾಮನ್ – ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ
  • ಡಾ. ಸುಬ್ರಹ್ಮಣ್ಯಂ ಜೈಶಂಕರ್ – ವಿದೇಶಾಂಗ ವ್ಯವಹಾರಗಳ ಸಚಿವ.
  • ಮನೋಹರ್ ಲಾಲ್ ಖಟ್ಟರ್ – ವಸತಿ ಮತ್ತು ನಗರ ವ್ಯವಹಾರಗಳ ಸಚಿವ; ಮತ್ತು ವಿದ್ಯುತ್ ಮಂತ್ರಿ.
  • ಎಚ್.ಡಿ.ಕುಮಾರಸ್ವಾಮಿ – ಕೈಗಾರಿಕೆ ಸಚಿವ, ಉಕ್ಕು ಖಾತೆ.
  • ಪಿಯೂಷ್ ಗೋಯಲ್ – ವಾಣಿಜ್ಯ ಮತ್ತು ಕೈಗಾರಿಕಾ ಸಚಿವ.
  • ಧರ್ಮೇಂದ್ರ ಪ್ರಧಾನ್ – ಶಿಕ್ಷಣ ಸಚಿವ
  • ಜಿತನ್ ರಾಮ್ ಮಾಂಝಿ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ.
  • ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ – ಪಂಚಾಯತ್ ರಾಜ್ ಸಚಿವ; ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು.
  • ಸರ್ಬಾನಂದ ಸೋನೋವಾಲ್ – ಬಂದರು, ಹಡಗು ಮತ್ತು ಜಲಮಾರ್ಗ ಸಚಿವ.
  • ವೀರೇಂದ್ರ ಕುಮಾರ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ
  • ಕಿಂಜರಾಪು ರಾಮಮೋಹನ್ ನಾಯ್ಡು – ನಾಗರಿಕ ವಿಮಾನಯಾನ ಸಚಿವ.
  • ಪ್ರಲ್ಹಾದ್ ಜೋಶಿ – ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು;ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು.
  • ಜುಯಲ್ ಓರಮ್ – ಬುಡಕಟ್ಟು ವ್ಯವಹಾರಗಳ ಸಚಿವ
  • ಗಿರಿರಾಜ್ ಸಿಂಗ್ – ಜವಳಿ ಸಚಿವ.
  • ಅಶ್ವಿನಿ ವೈಷ್ಣವ್ – ರೈಲ್ವೆ ಸಚಿವ; ಮಾಹಿತಿ ಮತ್ತು ಪ್ರಸಾರ ಸಚಿವರು; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು.
  • ಜ್ಯೋತಿರಾದಿತ್ಯ ಎಂ. ಸಿಂಧಿಯಾ – ಸಂಪರ್ಕ ಸಚಿವ;ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು.
  • ಭೂಪೇಂದರ್ ಯಾದವ್ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ.
  • ಗಜೇಂದ್ರ ಸಿಂಗ್ ಶೇಖಾವತ್ – ಸಂಸ್ಕೃತಿ ಸಚಿವ; ಪ್ರವಾಸೋದ್ಯಮ ಸಚಿವರು.
  • ಅನ್ನಪೂರ್ಣ ದೇವಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
  • ಕಿರಣ್ ರಿಜಿಜು – ಸಂಸದೀಯ ವ್ಯವಹಾರಗಳ ಸಚಿವ; ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು.
  • ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ
  • ಮನ್ಸುಖ್ ಮಾಂಡವಿಯಾ – ಕಾರ್ಮಿಕ ಮತ್ತು ಉದ್ಯೋಗ ಸಚಿವ; ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರು.
  • ಜಿ.ಕಿಶನ್ ರೆಡ್ಡಿ – ಕಲ್ಲಿದ್ದಲು ಸಚಿವ; ಗಣಿ ಸಚಿವರು.
  • ಚಿರಾಗ್ ಪಾಸ್ವಾನ್ – ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ.
  • ಸಿ ಆರ್ ಪಾಟೀಲ್ – ಜಲಶಕ್ತಿ ಸಚಿವ

ಇದನ್ನೂ ಓದಿ: ಕುಮಾರಸ್ವಾಮಿಗೆ ಕೃಷಿ ಖಾತೆ ಮಿಸ್​: ಜೋಶಿ, ಶೋಭಾ, ಸೋಮಣ್ಣಗೆ ಯಾವ ಖಾತೆ? ಇಲ್ಲಿದೆ ವಿವರ

ರಾಜ್ಯ ಸಚಿವರು- ಯಾರಿಗೆ ಯಾವ ಖಾತೆ?

  • ರಾವ್ ಇಂದರ್‌ಜಿತ್ ಸಿಂಗ್ – ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವರು.
  • ಡಾ. ಜಿತೇಂದ್ರ ಸಿಂಗ್ – ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಸಚಿವಾಲಯದ ರಾಜ್ಯ ಮಂತ್ರಿ (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವರು; ಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವರು;  ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವರು.
  • ಅರ್ಜುನ್ ರಾಮ್ ಮೇಘವಾಲ್ – ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ);  ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು.
  • ಜಾಧವ್ ಪ್ರತಾಪ್ರಾವ್ ಗಣಪತ್ರಾವ್ – ಆಯುಷ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು.
  • ಜಯಂತ್ ಚೌಧರಿ – ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ);  ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು.
  • ಜಿತಿನ್ ಪ್ರಸಾದ – ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರು;  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರು.
  • ಶ್ರೀಪಾದ್ ಯೆಶೋ ನಾಯಕ್ – ವಿದ್ಯುತ್ ಸಚಿವಾಲಯದ ರಾಜ್ಯ ಸಚಿವರು;  ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರು.
  • ಪಂಕಜ್ ಚೌಧರಿ – ಹಣಕಾಸು ಸಚಿವಾಲಯದ ರಾಜ್ಯ ಸಚಿವ.
  • ಕ್ರಿಶನ್ ಪಾಲ್ – ಸಹಕಾರ ಸಚಿವಾಲಯದ ರಾಜ್ಯ ಸಚಿವರು.
  • ರಾಮದಾಸ್ ಅಠವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು.
  • ರಾಮ್ ನಾಥ್ ಠಾಕೂರ್ – ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು.
  • ನಿತ್ಯಾನಂದ ರಾಯ್ – ಗೃಹ ಸಚಿವಾಲಯದ ರಾಜ್ಯ ಸಚಿವರು.
  • ಅನುಪ್ರಿಯಾ ಪಟೇಲ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ;  ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ರಾಜ್ಯ ಸಚಿವರು.
  • ವಿ.ಸೋಮಣ್ಣ – ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರು; ರೈಲ್ವೇ ಸಚಿವಾಲಯದ ರಾಜ್ಯ ಸಚಿವರು.
  • ಚಂದ್ರಶೇಖರ್ ಪೆಮ್ಮಸಾನಿ – ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು; ಸಂವಹನ ಸಚಿವಾಲಯದ ರಾಜ್ಯ ಸಚಿವರು.
  • ಪ್ರೊ. ಎಸ್.ಪಿ. ಸಿಂಗ್ ಬಾಘೇಲ್ -ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು;  ಪಂಚಾಯತ್ ರಾಜ್ ಸಚಿವಾಲಯದ ರಾಜ್ಯ ಸಚಿವರು
  • ಶೋಭಾ ಕರಂದ್ಲಾಜೆ – ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವರು; ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವರು.
  • ಕೀರ್ತಿವರ್ಧನ್ ಸಿಂಗ್ – ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ; ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು.
  • ಬಿ.ಎಲ್. ವರ್ಮಾ – ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರು.
  • ಶಂತನು ಠಾಕೂರ್ – ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ರಾಜ್ಯ ಸಚಿವರು
  • ಸುರೇಶ್ ಗೋಪಿ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರು; ಪ್ರವಾಸೋದ್ಯಮ ಸಚಿವಾಲಯದ ರಾಜ್ಯ ಸಚಿವರು.
  • ಡಾ. ಎಲ್. ಮುರುಗನ್ – ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು;  ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು.
  • ಅಜಯ್ ತಮ್ತಾ – ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಜ್ಯ ಸಚಿವ.
  • ಬಂಡಿ ಸಂಜಯ್ ಕುಮಾರ್ – ಗೃಹ ಸಚಿವಾಲಯದ ರಾಜ್ಯ ಸಚಿವರು.
  • ಕಮಲೇಶ್ ಪಾಸ್ವಾನ್ – ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು
  • ಭಗೀರಥ ಚೌಧರಿ – ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರು.
  • ಸತೀಶ್ ಚಂದ್ರ ದುಬೆ – ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವರು; ಗಣಿ ಸಚಿವಾಲಯದ ರಾಜ್ಯ ಸಚಿವರು
  • ಸಂಜಯ್ ಸೇಠ್ – ರಕ್ಷಣಾ ಸಚಿವಾಲಯದ ರಾಜ್ಯ ಸಚಿವ.
  • ರವನೀತ್ ಸಿಂಗ್ – ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವ;  ರೈಲ್ವೇ ಸಚಿವಾಲಯದ ರಾಜ್ಯ ಸಚಿವರು
  • ದುರ್ಗಾದಾಸ್ ಯುಕೆ – ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು
  • ರಕ್ಷಾ ನಿಖಿಲ್ ಖಡ್ಸೆ – ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವರು
  • ಸುಕಾಂತ ಮಜುಂದಾರ್ – ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರು; ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು
  • ಸಾವಿತ್ರಿ ಠಾಕೂರ್ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು
  • ತೋಖಾನ್ ಸಾಹು – ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು.
  • ರಾಜ್ ಭೂಷಣ್ ಚೌಧರಿ – ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ
  • ಭೂಪತಿ ರಾಜು ಶ್ರೀನಿವಾಸ ವರ್ಮಾ – ಭಾರೀ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವರು; ಮತ್ತು ಉಕ್ಕಿನ ಸಚಿವಾಲಯದ ರಾಜ್ಯ ಸಚಿವರು
  • ಹರ್ಷ್ ಮಲ್ಹೋತ್ರಾ – ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ;  ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ರಾಜ್ಯ ಸಚಿವರು.
  • ನಿಮುಬೆನ್ ಜಯಂತಿಭಾಯ್ ಬಂಬಾನಿಯಾ – ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು
  • ಮುರಳೀಧರ್ ಮೊಹೋಲ್– ಸಹಕಾರ ಸಚಿವಾಲಯದ ರಾಜ್ಯ ಸಚಿವರು;  ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವರು.
  • ಜಾರ್ಜ್ ಕುರಿಯನ್ – ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ; ಮತ್ತುಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು.
  • ಪಬಿತ್ರಾ ಮಾರ್ಗರಿಟಾ – ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ; ಜವಳಿ ಸಚಿವಾಲಯದ ರಾಜ್ಯ ಸಚಿವರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Mon, 10 June 24

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?