Mann ki Baat: ಭಾರತೀಯ ಅನಿಮೇಶನ್ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

|

Updated on: Oct 27, 2024 | 12:59 PM

PM Modi praises Indian animation industry, ಅಕ್ಟೋಬರ್ 28ರಂದು ವಿಶ್ವ ಅನಿಮೇಶನ್ ದಿನ ಇದ್ದು, ಭಾರತವನ್ನು ಅನಿಮೇಶನ್​ನಲ್ಲಿ ಜಾಗತಿಕ ಪವರ್ ಆಗಿ ಮಾಡುವ ಸಂಕಲ್ಪ ತೊಡಬೇಕು ಎಂದು ಇಂದಿನ ಯುವಜನರಿಗೆ ಪ್ರಧಾನಿ ಮೋದಿ ಕರೆ ನೀಡಿದರು. ಛೋಟಾ ಭೀಮ್​ನ ದೋಲಕ್​ಪುರ್​ನ ಡೋಲು ಜಾಗತಿಕವಾಗಿ ಜನಪ್ರಿಯವಾಗಿರುವುದನ್ನು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ ಅವರು, ಭಾರತೀಯರು ಒರಿಜಿನಲ್ ಕಂಟೆಂಟ್ ಸೃಷ್ಟಿಸುತ್ತಿರುವುದು ಹೆಚ್ಚುತ್ತಿದೆ ಎಂದರು.

Mann ki Baat: ಭಾರತೀಯ ಅನಿಮೇಶನ್ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
ಛೋಟಾ ಭೀಮ್
Follow us on

ನವದೆಹಲಿ, ಅಕ್ಟೋಬರ್ 27: ಪ್ರಧಾನಿ ನರೇಂದ್ರ ಮೋದಿ ತಮ್ಮ 155ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾರತೀಯ ಅನಿಮೇಶನ್ ಉದ್ಯಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅನಿಮೇಶನ್ ಕ್ಷೇತ್ರ ಇಂದು ಉದ್ಯಮವಾಗಿ ರೂಪುಗೊಂಡಿದ್ದು, ಇತರ ಉದ್ಯಮಗಳಿಗೆ ಬಲ ನೀಡುತ್ತಿದೆ. ಯುವಜನರು ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ಮೂಲ ಭಾರತೀಯ ಕಂಟೆಂಟ್ ಅನ್ನು ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದ ನರೇಂದ್ರ ಮೋದಿ ಅವರು ಛೋಟ ಭೀಮ್​ನ ಡೋಲಕ್ ಡ್ರಮ್ ಮೊದಲಾದ ನಿದರ್ಶನಗಳನ್ನು ನೀಡಿದರು.

‘ನೀವು ಟಿವಿಯಲ್ಲಿ ಛೋಟಾ ಭೀಮ್ ಕಾರ್ಯಕ್ರಮ ನೋಡಿರಬಹುದು. ಅದನ್ನು ನೋಡಿ ಬೆಳೆದ ಮಕ್ಕಳಿಗೆ ಛೋಟಾ ಭೀಮ್ ಬಗ್ಗೆ ಖುಷಿ ಎಂದು ಮರೆಯುವಂಥದ್ದಲ್ಲ. ಇವತ್ತು ಧೋಲಕ್​ಪುರ್​ನ ಡೋಲು ಭಾರತ ಮಾತ್ರವಲ್ಲ, ಇತರ ದೇಶಗಳನ್ನೂ ಆಕರ್ಷಿಸುತ್ತದೆ ಎಂದರೆ ನಿಮಗೆ ಅಚ್ಚರಿ ಎನಿಸಬಹುದು,’ ಎಂದು ಪ್ರಧಾನಿಗಳು ಹೇಳಿದರು.

ನಿಮ್ಮ ಕ್ರಿಯಾಶೀಲತೆಯನ್ನು ತೋರಿಸಿ ಎಂದು ಇವತ್ತಿನ ಯುವಜನರಿಗೆ ಕೋರಬಯಸುತ್ತೇನೆ. ಯಾರಿಗೆ ಗೊತ್ತು, ವಿಶ್ವದ ಮುಂದಿನ ಸೂಪರ್ ಹಿಟ್ ಅನಿಮೇಶನ್ ನಿಮ್ಮ ಕಂಪ್ಯೂಟರ್​ನಿಂದಲೇ ಹೊರಬರಬಹುದು. ಮುಂದಿನ ವೈರಲ್ ಗೇಮ್​ನ ಸೃಷ್ಟಿಕರ್ತ ನೀವೇ ಆಗಬಹುದು ಎಂದು ಹೇಳಿದ ನರೇಂದ್ರ ಮೋದಿ, ನಾಳೆ ಅಕ್ಟೋಬರ್ 28ರಂದು ವಿಶ್ವ ಅನಿಮೇಶನ್ ದಿನ ಆಚರಣೆಯನ್ನು ಉಲ್ಲೇಖಿಸುತ್ತಾ, ಭಾರತವನ್ನು ಜಾಗತಿಕ ಅನಿಮೇಶನ್ ಪವರ್ ಹೌಸ್ ಅನ್ನಾಗಿ ಮಾಡುವ ಸಂಕಲ್ಪಕ್ಕೆ ಕರೆ ನೀಡಿದರು.

ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಅನ್ನೋ ಕಾನೂನೇ ಇಲ್ಲ, ಹುಷಾರಾಗಿರಿ: ಮನ್ ಕೀ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಎಚ್ಚರ ಸಂದೇಶ

ಇನ್ನೋವೇಶನ್​ನಲ್ಲಿ ಭಾರತ ಗ್ಲೋಬಲ್ ಪವರ್ ಆಗಬೇಕು

ಭಾರತದಲ್ಲಿ ಸಂಕೀರ್ಣ ತಂತ್ರಜ್ಞಾನ ಬೆಳೆಸುವ ಮಾತು ಬಂದರೆ ಅಪಹಾಸ್ಯ ಮಾಡುತ್ತಿದ್ದ ಕಾಲ ಇತ್ತು. ಇವತ್ತು ತಂತ್ರಜ್ಞಾನ ಭಾರತದಲ್ಲಿ ಹುಲುಸಾಗಿ ಬೆಳೆಯುತ್ತಿದೆ. ಎಲ್ಲಾ ರೀತಿಯ ತಂತ್ರಜ್ಞಾನಗಳು ಭಾರತದಲ್ಲಿ ಸಿದ್ಧವಾಗುತ್ತಿವೆ. ಮೊಬೈಲ್ ಫೋನ್ ತಯಾರಿಕೆ ಆಗುತ್ತಿದೆ. ಮಿಲಿಟರಿ ಶಸ್ತ್ರಾಸ್ತ್ರಗಳು ಭಾರತದಲ್ಲಿ ತಯಾರಾಗುತ್ತಿವೆ. ಸ್ಪೇಸ್ ಟೆಕ್ನಾಲಜಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಈಗ ಆತ್ಮನಿರ್ಬರ್ ಭಾರತ್ ಎಂಬುದು ಸರ್ಕಾರಿ ಯೋಜನೆಯಾಗಿ ಉಳಿದಿಲ್ಲ ಎಂದು ನರೇಂದ್ರ ಮೋದಿ ತಮ್ಮ 115ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳೀದರು.

ಪ್ರತಿಯೊಬ್ಬ ಭಾರತೀಯನೂ ಇನ್ನೋವೇಟರ್ ಆಗಬೇಕು. ಭಾರತವು ಇನ್ನೋವೇಶನ್​ನಲ್ಲಿ ಜಾಗತಿಕ ಪವರ್ ಆಗಬೇಕು ಎಂದು ಕರೆ ನೀಡಿದ ಪ್ರಧಾನಿಗಳು, ‘ನಿಮಗೆ ಸ್ಥಳೀಯವಾಗಿ ಯಾವ ಸ್ಟಾರ್ಟಪ್ ಇಷ್ಟವಾಯಿತು ಎಂಬುದನ್ನು #AtmanirbharInnovation ಈ ಹ್ಯಾಷ್​ಟ್ಯಾಗ್ ಮೂಲಕ ತಿಳಿಸುವಂತೆ ಕೋರಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Sun, 27 October 24