ಮುಂಬೈನ ರೈಲ್ವೆ ನಿಲ್ದಾಣದಲ್ಲಿ ನೂಕುನುಗ್ಗಲು, ಕಾಲ್ತುಳಿತ; 9 ಮಂದಿಗೆ ಗಾಯ

Mumbai Bandra Terminus stampede: ಮುಂಬೈನ ಬಾಂದ್ರಾ ರೈಲು ಟರ್ಮಿನಸ್​ನ ಪ್ಲಾಟ್​ಫಾರ್ಮ್​ವೊಂದರಲ್ಲಿ ಜನರ ನೂಕುನುಗ್ಗಲಿಂದಾಗಿ ಕಾಲ್ತುಳಿತದ ದುರ್ಭಟನೆ ಸಂಭವಿಸಿ 9 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ 6 ಗಂಟೆಗೆ ಸ್ವಲ್ಪ ಮುಂಚೆ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮುಂಬೈನ ರೈಲ್ವೆ ನಿಲ್ದಾಣದಲ್ಲಿ ನೂಕುನುಗ್ಗಲು,  ಕಾಲ್ತುಳಿತ; 9 ಮಂದಿಗೆ ಗಾಯ
ಬಾಂದ್ರಾ ರೈಲು ನಿಲ್ದಾಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: ರಮೇಶ್ ಬಿ. ಜವಳಗೇರಾ

Updated on:Oct 27, 2024 | 10:48 AM

ಮುಂಬೈ, ಅಕ್ಟೋಬರ್ 27: ಮಹಾರಾಷ್ಟ್ರ ರಾಜಧಾನಿನಗರಿಯ ಬಾಂದ್ರಾ ರೈಲು ನಿಲ್ದಾಣದ ಪ್ಲಾಟ್​ಫಾರ್ಮ್​ವೊಂದರಲ್ಲಿ ಜನರ ನೂಕುನುಗ್ಗಲಿಂದಾಗಿ ಕಾಲ್ತುಳಿತದ ದುರ್ಭಟನೆ ಸಂಭವಿಸಿ 9 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ, ಗಾಯಾಳುಗಳನ್ನು ಭಾಭಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಂದ್ರಾ ಟರ್ಮಿನಸ್​ನ ಒಂದನೇ ಪ್ಲಾಟ್​ಫಾರ್ಮ್​ನಲ್ಲಿ ಭಾನುವಾರ ಬೆಳಗ್ಗೆ 5:56ಕ್ಕೆ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ.

ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಬಂದ ಮಾಹಿತಿ ಪ್ರಕಾರ, ಬಾಂದ್ರಾ ಟರ್ಮಿನಸ್​ನ ಪ್ಲಾಟ್​ಫಾರ್ಮ್ 1ರಲ್ಲಿ ಬಾಂದ್ರಾ ಗೋರಖ್​ಪುರ್ ಎಕ್ಸ್​ಪ್ರೆಸ್ ರೈಲಿಗಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದರು. ದೀಪಾವಳಿ ಆದ ಕಾರಣ ತಂತಮ್ಮ ಊರುಗಳಿಗೆ ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ರೈಲ್ವೆ ಸ್ಟೇಷನ್​ನಲ್ಲಿ ಇದ್ದರು. ಟ್ರೈನ್ ಹತ್ತುವಾಗ ನೂಕುನುಗ್ಗುಲು ತೀವ್ರಗೊಂಡು ಕಾಲ್ತುಳಿತವಾಗಿದೆ. ಗಾಯಗೊಂಡ ಒಂಬತ್ತು ಮಂದಿ ಪೈಕಿ ಏಳು ಮಂದಿ ಸ್ಥಿತಿ ಚಿಂತೆ ಪಡುವಷ್ಟು ಇಲ್ಲ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಶಬೀರ್ ಅಬ್ದುಲ್ ರೆಹಮಾನ್ (40), ಪರಮೇಶ್ವರ್ ಸುಖದರ್ ಗುಪ್ತಾ (28), ರವೀಂದ್ರ ಹರಿಹರ್ ಚುಮಾ (30), ರಾಮಸೇವಕ್ ರವೀಂದ್ರ ಪ್ರಸಾದ್ ಪ್ರಜಾಪತಿ (29), ಸಂಜಯ್ ತಿಲಕ್​ರಾಮ್ ಕಂಗಯ್ (27), ದಿವ್ಯಾಂಶು ಯೋಗೇಂದ್ರ ಯಾದವ್ (18), ಮೊಹಮ್ಮದ್ ಶರೀಫ್ ಶೇಖ್ (25), ಇಂದ್ರಜಿತ್ ಸಹಾನಿ (19), ಮತ್ತು ನೂರ್ ಮೊಹಮ್ಮದ್ ಶೇಖರ್ (18) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹಗೆತನದಿಂದ ಉಪಯೋಗವಿಲ್ಲ, ಸಂಯಮವಿರಲಿ; ಇರಾನ್ ಮೇಲೆ ಇಸ್ರೇಲ್ ದಾಳಿಗೆ ಭಾರತ ಕಳವಳ

ಬಾಂದ್ರಾದಿಂದ ಗೋರಖ್​ಪುರಕ್ಕೆ ಹೋಗಲು ಟ್ರೈನ್ ನಂಬರ್ 22921 ನಿಂತಿತ್ತು. ಅವಘಡದ ಸ್ಥಳದ ದೃಶ್ಯಾವಳಿ ಹರಿದಾಡುತ್ತಿದ್ದು, ಒಂದನೇ ಪ್ಲಾಟ್​ಫಾರ್ಮ್​ನ ನೆಲದ ಮೇಲೆ ರಕ್ತದ ಕಲೆಗಳು ಕಾಣಸಿಗುತ್ತಿತ್ತು. ರೈಲ್ವೆ ಪೊಲೀಸ್ ಮತ್ತು ಇತರ ಪ್ರಯಾಣಿಕರು ಗಾಯಾಳುಗಳಿಗೆ ನೆರವಾಗುತ್ತಿದ್ದುದನ್ನು ಈ ದೃಶ್ಯಗಳಲ್ಲಿ ಕಂಡುಬಂದಿವೆ.

ರೈಲು ನಿಲ್ದಾಣಗಳ ಕುಖ್ಯಾತಿ…

ಮುಂಬೈನ ರೈಲು ನಿಲ್ದಾಣಗಳು ಕಾಲ್ತುಳಿತ ಘಟನೆಗಳಿಗೆ ಕುಖ್ಯಾತಿ ಪಡೆದಿವೆ. ಅಲ್ಲಿಯ ಹೆಚ್ಚಿನ ರೈಲುಗಳು ಸದಾ ಕಿಕ್ಕಿರಿದಿರುತ್ತವೆ. 2017ರ ಘಟನೆಯಲ್ಲಂತೂ 23 ಜನರು ಅಸು ನೀಗಿದ್ದರು. ಎಲ್ಫಿನ್​ಸ್ಟೋನ್ ರೋಡ್ ರೈಲ್ವೆ ನಿಲ್ದಾಣದ ಕಾಲ್ಸೇತುವೆಯೊಂದರಲ್ಲಿ ನೂಕುನುಗ್ಗಲಿನಿಂದ ಕಾಲ್ತುಳಿತವಾಗಿ 23 ಮಂದಿ ಪ್ರಾಣ ಕಳೆದುಕೊಂಡಿದ್ದರು. 39 ಮಂದಿಗೆ ಗಾಯವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:58 am, Sun, 27 October 24

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್