ಮದುವೆಯಾಗುವಂತೆ ಒತ್ತಾಯ; 19 ವರ್ಷದ ಗರ್ಭಿಣಿಯನ್ನು ಕೊಂದು ಹೂತಿಟ್ಟ ಪ್ರಿಯಕರ
ಮೃತ ಯುವತಿ ಸೋನಿ 7 ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ಒಪ್ಪದ ಆಕೆ ತನ್ನ ಪ್ರಿಯಕರನಾಗಿದ್ದ ಸಲೀಂ ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಸಲೀಂಗೆ ಆಕೆಯನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಹಾಗೇ, ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸುತ್ತಿದ್ದ. ಇದರಿಂದ ಇಬ್ಬರ ನಡುವೆ ಜಗಳವಾಗುತ್ತಿತ್ತು.
ನವದೆಹಲಿ: ದೆಹಲಿಯ ಸೋನಿ ಎಂಬ 19 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ ಸಲೀಂ ಮತ್ತು ಆತನ ಇಬ್ಬರು ಸಹಚರರು ಕೊಂದು ಹೂತು ಹಾಕಿದ್ದಾರೆ. ಆಕೆ ಆತನಿಂದ ಗರ್ಭಿಣಿಯಾದ ನಂತರ ಮದುವೆಯಾಗಲು ಒತ್ತಾಯಿಸಿದ್ದಳು. ಆದರೆ, ಆತನಿಗೆ ಆಕೆಯನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದ.
ಪಶ್ಚಿಮ ದೆಹಲಿಯ ನಂಗ್ಲೋಯ್ ನಿವಾಸಿಯಾಗಿರುವ ಸೋನಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದರು. ಆಗಾಗ ಆಕೆ ಮತ್ತು ಸಲೀಂ ಇಬ್ಬರೂ ಇದ್ದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಎನ್‌ಡಿಟಿವಿ ವರದಿಯ ಪ್ರಕಾರ, ಸಂಜು ಎಂದು ಹೇಳಿಕೊಂಡಿದ್ದ ಸಲೀಂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ.
ಇದನ್ನೂ ಓದಿ: ಪನ್ನುನ್ ಕೊಲೆ ಸಂಚು ರೂಪಿಸಿದ ಮಾಜಿ ಭಾರತೀಯ ಅಧಿಕಾರಿ ವಿಕಾಸ್ ಯಾದವ್ ಯಾರು?
ಸೋನಿಯ ಕುಟುಂಬದವರ ಪ್ರಕಾರ, ಆಕೆಗೆ ಪ್ರಿಯಕರ ಇದ್ದಾನೆ ಎಂಬುದು ಅವರಿಗೆ ತಿಳಿದಿತ್ತು ಆದರೆ, ಆಕೆ ಯಾರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಕೇಳಿದಾಗ, ಸೋನಿ ಆಗಾಗ ತಮಾಷೆ ಮಾಡುತ್ತಿದ್ದಳು, ತಾನು ದೆವ್ವದೊಂದಿಗೆ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಿದ್ದಳು. ಸೋನಿ 7 ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆದರೆ, ಈ ವಿಷಯ ಆಕೆಯ ಮನೆಯವರಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ.
ಸಲೀಂ ತನ್ನನ್ನು ಮದುವೆಯಾಗುವಂತೆ ಸೋನಿ ಒತ್ತಾಯಿಸುತ್ತಿದ್ದಳು. ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಸಲೀಮ್ ಒಪ್ಪಿಗೆ ನೀಡಿರಲಿಲ್ಲ ಮತ್ತು ಆಕೆಯು ಗರ್ಭಪಾತ ಮಾಡಿಕೊಳ್ಳಬೇಕೆಂದು ಬಯಸಿದ್ದರು. ಇದು ಇಬ್ಬರ ನಡುವೆ ಆಗಾಗ ವಾದಗಳಿಗೆ ಕಾರಣವಾಗಿತ್ತು.
ಕೊಲೆಯಾದ ದಿನ, ಸೋನಿ ಸಲೀಂನನ್ನು ಭೇಟಿಯಾಗಲು ಕೆಲವು ಸಾಮಾನುಗಳೊಂದಿಗೆ ತನ್ನ ಮನೆಯಿಂದ ಹೊರಟು ಹೋಗಿದ್ದಳು. ಅವನು ತನ್ನ ಇಬ್ಬರು ಸಹಚರರೊಂದಿಗೆ ಅವಳನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದನು. ಅಲ್ಲಿ ಅವರೆಲ್ಲ ಸೇರಿ ಅವಳನ್ನು ಕೊಂದು ಶವವನ್ನು ಹೂತು ಹಾಕಿದರು ಎಂದು ವರದಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ