ಹೆಲ್ಮೆಟ್ ಧರಿಸಿದ್ದರೂ ಸಿಸಿಟಿವಿಯಲ್ಲಿ ಕಳ್ಳನ ಮುಖ ಸೆರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸಿಸಿಟಿವಿಯಲ್ಲಿ ತನ್ನ ಗುರುತು ಪತ್ತೆ ಹತ್ತಬಾರದು ಅಂತ ಕಳ್ಳ ಹೆಲ್ಮೆಟ್ ಧರಿಸಿ ಹೋಟೆಲ್ನೊಳಗೆ ನುಸುಳಿದ್ದಾನೆ. ಆದರೆ ಅವನು ಕೆಮೆರಾದ ಮುಂದೆ ನಿಂತು ಅದನ್ನು ದಿಟ್ಟಿಸಿ ನೋಡಿದ್ದು ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿರುವ ಕಾರಣ ಅವನನ್ನು ಪತ್ತೆ ಹಚ್ಚೋದು ಪೊಲೀಸರಿಗೆ ಸಮಸ್ಯೆ ಆಗಲಾರದು.
ಮಂಗಳೂರು: ಇವನ್ಯಾವನೋ ಚಿಲ್ಲರೆ ಕಳ್ಳ ಮಾರಾಯ್ರೇ! ಅವನು ಏನು ಕದಿಯುತ್ತಿದ್ದಾನೆ ಅಂತ ಗಮನಿಸಿ. ಹೋಟೆಲ್ ಗಲ್ಲಾಪಟ್ಟಿಗೆಯಲ್ಲಿರುವ ಚಿಲ್ಲರೆ ನಾಣ್ಯಗಳು! ಗಲ್ಲಾಪಟ್ಟಿಗೆಯಲ್ಲಿ ನಾಣ್ಯಗಳನ್ನು ಹಾಕಲು ಬಟ್ಟಲುಗಳಿರುತ್ತದೆ. ಕಳ್ಳ ಅವೇ ಬಟ್ಟಲುಗಳಿಂದ ನಾಣ್ಯಗಳನ್ನು ತೆಗೆದು ಒಂದು ಪಾಲಿಥೀನ್ ಬ್ಯಾಗ್ಗೆ ಸುರುವಿಕೊಳ್ಳುತ್ತಿದ್ದಾನೆ. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ದೇವರ ಸ್ಟ್ಯಾಂಡ್ನಲ್ಲಿಟ್ಟಿದ್ದ ಹುಂಡಿಯನ್ನೂ ಕಳ್ಳ ಕದ್ದೊಯ್ದಿದ್ದಾನಂತೆ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿರುವ ಲಕ್ಷ್ಮಿ ನಿವಾಸ ಹೋಟೆಲ್ನಲ್ಲಿ ಕಳ್ಳತನ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನುಮಾನ್ ದೇವಾಲಯದಲ್ಲಿ ಅರ್ಚಕನ ಕೊಲೆ; ಕಳ್ಳತನದ ದೂರು ನೀಡಿದ್ದರೂ ತಲೆಕೆಡಿಸಿಕೊಳ್ಳದ ಪೊಲೀಸರು
Published on: Oct 26, 2024 12:27 PM
Latest Videos