AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಬರಮತಿ ಆಶ್ರಮ ಮನುಕುಲದ ಐತಿಹಾಸಿಕ ಪರಂಪರೆ, ಹಿಂದಿನ ಸರ್ಕಾರಗಳು ಅದನ್ನು ನಿರ್ಲಕ್ಷಿಸಿದ್ದವು: ಪ್ರಧಾನಿ ಮೋದಿ

ಸಬರಮತಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ತನ್ನ ಪರಂಪರೆಯನ್ನು ಪಾಲಿಸದ ದೇಶ ತನ್ನ ಭವಿಷ್ಯವನ್ನೂ ಕಳೆದುಕೊಳ್ಳುತ್ತದೆ. ಹಿಂದಿನ ಸರ್ಕಾರಗಳು ಈ ಬಗ್ಗೆ ನಿರಾಸಕ್ತಿ ತೋರಿದ್ದವು. ಹಿಂದಿನ ಸರ್ಕಾರಗಳಲ್ಲಿ ಬಾಪು ಅವರ ಆಶ್ರಮಕ್ಕೆ ನ್ಯಾಯ ಸಿಗಲಿಲ್ಲ. ನಮ್ಮ ಪರಂಪರೆಯನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದಾರೆ.

ಸಬರಮತಿ ಆಶ್ರಮ ಮನುಕುಲದ ಐತಿಹಾಸಿಕ ಪರಂಪರೆ, ಹಿಂದಿನ ಸರ್ಕಾರಗಳು ಅದನ್ನು ನಿರ್ಲಕ್ಷಿಸಿದ್ದವು: ಪ್ರಧಾನಿ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Mar 12, 2024 | 6:22 PM

Share

ಅಹಮದಾಬಾದ್ ಮಾರ್ಚ್ 12: ಗುಜರಾತ್‌ನ ಅಹಮದಾಬಾದ್‌ನ ಸಬರಮತಿಯಲ್ಲಿರುವ ಮಹಾತ್ಮಾ ಗಾಂಧಿ ಆಶ್ರಮದಲ್ಲಿ ಪುನರಾಭಿವೃದ್ಧಿಗೊಂಡ ಕೋಚರಬ್ ಆಶ್ರಮವನ್ನು(Kochrab Ashram) ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಿ, ಗಾಂಧಿ ಆಶ್ರಮ ಸ್ಮಾರಕದ ಮಾಸ್ಟರ್ ಪ್ಲಾನ್‌ಗೆ ಚಾಲನೆ ನೀಡಿದರು. ಸಬರಮತಿ (Sabarmati) ಆಶ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಾಪು ಅವರ ಸಬರಮತಿ ಆಶ್ರಮವು ಕೇವಲ ದೇಶಕ್ಕೆ ಮಾತ್ರವಲ್ಲದೆ ಮನುಕುಲದ ಐತಿಹಾಸಿಕ ಪರಂಪರೆಯಾಗಿದೆ. ಹಿಂದಿನ ಸರ್ಕಾರಗಳು ಇದನ್ನು ನಿರ್ಲಕ್ಷಿಸಿದ್ದವು ಎಂದಿದ್ದಾರೆ.

ನಮ್ಮ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ತನ್ನ ಪರಂಪರೆಯನ್ನು ಪಾಲಿಸದ ದೇಶ ತನ್ನ ಭವಿಷ್ಯವನ್ನೂ ಕಳೆದುಕೊಳ್ಳುತ್ತದೆ. ಹಿಂದಿನ ಸರ್ಕಾರಗಳು ಈ ಬಗ್ಗೆ ನಿರಾಸಕ್ತಿ ತೋರಿದ್ದವು. ಹಿಂದಿನ ಸರ್ಕಾರಗಳಲ್ಲಿ ಬಾಪು ಅವರ ಆಶ್ರಮಕ್ಕೆ ನ್ಯಾಯ ಸಿಗಲಿಲ್ಲ. ನಮ್ಮ ಪರಂಪರೆಯನ್ನು ಕಡೆಗಣಿಸಲಾಗಿದೆ. ಬಾಪು ಅವರ ಆಶ್ರಮ ಅನನ್ಯ ಶಕ್ತಿಯ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದರು.

ಸಬರಮತಿ ಆಶ್ರಮವು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸಂಕಲ್ಪದ ತೀರ್ಥಕ್ಷೇತ್ರ

ಬಾಪು ಅವರ ಸಬರಮತಿ ಆಶ್ರಮವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕಾಗಿ ಯಾತ್ರಾ ಕೇಂದ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಸಬರಮತಿ ಆಶ್ರಮದಿಂದ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಪ್ರಾರಂಭಿಸಿತು. ಮಾರ್ಚ್ 12 ರ ದಿನಾಂಕವು ಐತಿಹಾಸಿಕ ದಿನಾಂಕವಾಗಿದೆ. ಈ ದಿನ, ಬಾಪು ಅವರು ಸ್ವಾತಂತ್ರ್ಯ ಚಳುವಳಿಯ ದಿಕ್ಕನ್ನು ಬದಲಾಯಿಸಿದರು. ದಂಡಿ ಮೆರವಣಿಗೆಯು ಸ್ವಾತಂತ್ರ್ಯ ಚಳುವಳಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ ಎಂದಿದ್ದಾರೆ ಮೋದಿ.

ಮೋದಿ ಟ್ವೀಟ್

1200 ಕೋಟಿ ವೆಚ್ಚದಲ್ಲಿ ಆಶ್ರಮಕ್ಕೆ ಕಾಯಕಲ್ಪ

1200 ಕೋಟಿ ವೆಚ್ಚದಲ್ಲಿ ಸಬರಮತಿ ಆಶ್ರಮವನ್ನು ಪುನರಾಭಿವೃದ್ಧಿ ಮಾಡಲಾಗುವುದು. ಈ ಮಾಸ್ಟರ್ ಪ್ಲಾನ್ ಅಡಿಯಲ್ಲಿ, ಆಶ್ರಮದ ಅಸ್ತಿತ್ವದಲ್ಲಿರುವ ಐದು ಎಕರೆ ಪ್ರದೇಶವನ್ನು 55 ಎಕರೆಗಳಿಗೆ ವಿಸ್ತರಿಸಲಾಗುವುದು. ಇದಲ್ಲದೇ ಆಶ್ರಮದಲ್ಲಿ ಈಗಿರುವ 36 ಕಟ್ಟಡಗಳನ್ನು ನವೀಕರಿಸಲಾಗುವುದು. ವಾಸ್ತವವಾಗಿ, ಸಬರಮತಿ ಆಶ್ರಮವು 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ಮಹಾತ್ಮ ಗಾಂಧಿಯವರು ಸ್ಥಾಪಿಸಿದ ಮೊದಲ ಆಶ್ರಮವಾಗಿದೆ. ಈ ಮಾಸ್ಟರ್ ಪ್ಲಾನ್ 20 ಹಳೆಯ ಕಟ್ಟಡಗಳ ಸಂರಕ್ಷಣೆ, 13 ಕಟ್ಟಡಗಳ ಮರುಸ್ಥಾಪನೆ ಮತ್ತು ಮೂರು ಕಟ್ಟಡಗಳ ನವೀಕರಣವನ್ನು ಒಳಗೊಂಡಿದೆ.

ಈ ಯೋಜನೆಯ ಗುರಿ ಏನು?

ಭವಿಷ್ಯದ ಪೀಳಿಗೆಗೆ ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಗಾಂಧಿ ವಿಚಾರಗಳನ್ನು ಉತ್ತೇಜಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಆಶ್ರಮ ಯೋಜನೆಯನ್ನು ಕಾರ್ಯಗತಗೊಳಿಸಲು ಗುಜರಾತ್ ಸರ್ಕಾರವು ಮಹಾತ್ಮ ಗಾಂಧಿ ಸಬರಮತಿ ಆಶ್ರಮ ಸ್ಮಾರಕ ಟ್ರಸ್ಟ್ ಅನ್ನು ಸ್ಥಾಪಿಸಿದೆ. ಆಶ್ರಮ ಅಭಿವೃದ್ಧಿ ಯೋಜನೆಯಿಂದಾಗಿ ಸಬರಮತಿ ಆಶ್ರಮದ ಆವರಣದಲ್ಲಿ ವಾಸಿಸುತ್ತಿದ್ದ ಸುಮಾರು 250 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ಇದನ್ನೂ ಓದಿ: ಬದಲಾಯಿತು ಗುಜರಾತ್‌ನ ಸಬರಮತಿಯಲ್ಲಿರುವ ಕೋಚರಬ್ ಆಶ್ರಮದ ಚಹರೆ; ಚಿತ್ರಗಳಲ್ಲಿ ನೋಡಿ

ಗಾಂಧೀಜಿ ದಂಡಿ ಮೆರವಣಿಗೆ ಆರಂಭಿಸಿದ್ದು ಇದೇ ದಿನ

ಈ ದಿನ (12 ಮಾರ್ಚ್ 1930), ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಬ್ರಿಟಿಷರ ಏಕಸ್ವಾಮ್ಯದ ವಿರುದ್ಧ ಉಪ್ಪಿನ ಸತ್ಯಾಗ್ರಹದ ಹೆಸರಿನಲ್ಲಿ ಐತಿಹಾಸಿಕ ದಂಡಿ ಮೆರವಣಿಗೆಯನ್ನು ಪ್ರಾರಂಭಿಸಿದರು. ಅಹಮದಾಬಾದ್‌ನ ಸಬರಮತಿ ಆಶ್ರಮದಿಂದ ಆರಂಭವಾದ ಈ 24 ದಿನಗಳ ಸುದೀರ್ಘ ನಡಿಗೆ ನವಸಾರಿಯ ಸಣ್ಣ ಹಳ್ಳಿಯಾದ ದಂಡಿ ಸಮುದ್ರ ತೀರದಲ್ಲಿ ಉಪ್ಪು ತಯಾರಿಸುವ ಮೂಲಕ ಕೊನೆಗೊಂಡಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ