AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ಭಾರತ್ ಶಕ್ತಿ ಪ್ರದರ್ಶನ ವೀಕ್ಷಿಸಿದ ಮೋದಿ

"ನಾವು ಭಾರತವನ್ನು 'ವಿಕಸಿತ್' ಮಾಡಲು ಬಯಸಿದರೆ, ನಾವು ಇತರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿಯೇ ಭಾರತವು ಖಾದ್ಯ ತೈಲಗಳಿಂದ ಹಿಡಿದು ಆಧುನಿಕ ವಿಮಾನಗಳವರೆಗೆ ಪ್ರತಿ ವಲಯದಲ್ಲಿ 'ಆತ್ಮನಿರ್ಭರ'ದತ್ತ ಗಮನಹರಿಸುತ್ತಿದೆ ಎಂದು ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ಭಾರತ್ ಶಕ್ತಿ ಪ್ರದರ್ಶನವನ್ನು ವೀಕ್ಷಿಸಿದ ಪ್ರಧಾನಿ ಮೋದಿ ಹೇಳಿದರು.

ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ಭಾರತ್ ಶಕ್ತಿ ಪ್ರದರ್ಶನ ವೀಕ್ಷಿಸಿದ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on:Mar 12, 2024 | 4:19 PM

Share

ಪೋಖ್ರಾನ್:  ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ (Pokhran firing range) ಭಾರತ್ ಶಕ್ತಿ (Bharat Shakti) ಪ್ರದರ್ಶನವನ್ನು ವೀಕ್ಷಿಸಿದ್ದಾರೆ. ಭಾರತ್ ಶಕ್ತಿ ಮೂರು ಸೇವೆಗಳ ಸ್ಥಳೀಯವಾಗಿ ತಯಾರಿಸಿದ ರಕ್ಷಣಾ ಸಾಧನಗಳ ಪರಾಕ್ರಮವನ್ನು ಪ್ರದರ್ಶಿಸುತ್ತದೆ. ಸಂಯೋಜಿತ ತ್ರಿ-ಸೇವಾ ಫೈರ್‌ಪವರ್ ಮತ್ತು ಕುಶಲ ಪ್ರದರ್ಶನ ಸುಮಾರು 50 ನಿಮಿಷಗಳ ಕಾಲ ನಡೆದಿದೆ. LCA ತೇಜಸ್, ALH Mk-IV, LCH ಪ್ರಚಂಡ್, ಮೊಬೈಲ್ ಆಂಟಿ-ಡ್ರೋನ್ ಸಿಸ್ಟಮ್, BMP-II ಮತ್ತು ಅದರ ರೂಪಾಂತರಗಳು, NAMICA (ನಾಗ್ ಮಿಸೈಲ್ ಕ್ಯಾರಿಯರ್), T90 ಟ್ಯಾಂಕ್‌ಗಳು, ಧನುಷ್, K9 ವಜ್ರ ಮತ್ತು ಪಿನಾಕಾ ರಾಕೆಟ್‌ಗಳ ಪ್ರದರ್ಶನ ಇಲ್ಲಿ ನಡೆಯಲಿದೆ.

“ನಾವು ಭಾರತವನ್ನು ‘ವಿಕಸಿತ್’ ಮಾಡಲು ಬಯಸಿದರೆ, ನಾವು ಇತರರ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿಯೇ ಭಾರತವು ಖಾದ್ಯ ತೈಲಗಳಿಂದ ಹಿಡಿದು ಆಧುನಿಕ ವಿಮಾನಗಳವರೆಗೆ ಪ್ರತಿ ವಲಯದಲ್ಲಿ ‘ಆತ್ಮನಿರ್ಭರ’ದತ್ತ ಗಮನಹರಿಸುತ್ತಿದೆ  ಎಂದು ಪ್ರಧಾನಿ ಮೋದಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ದೇಶದ ರಕ್ಷಣಾ ಉತ್ಪಾದನೆ ದುಪ್ಪಟ್ಟಾಗಿದೆ ಅಂದರೆ ₹1 ಲಕ್ಷ ಕೋಟಿಗೂ ಹೆಚ್ಚು. ಇದರಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ 150 ಕ್ಕೂ ಹೆಚ್ಚು ರಕ್ಷಣಾ ಸ್ಟಾರ್ಟ್‌ಅಪ್‌ಗಳು ಪ್ರಾರಂಭವಾಗಿದ್ದು, ನಮ್ಮ ಪಡೆಗಳು ಅವರಿಗೆ ₹1,800 ಕೋಟಿ ಮೌಲ್ಯದ ಆರ್ಡರ್‌ಗಳನ್ನು ನೀಡಲು ನಿರ್ಧರಿಸಿವೆ. ರಕ್ಷಣಾ ವಲಯದಲ್ಲಿ ‘ಆತ್ಮನಿರ್ಭರ್’ ಭಾರತವು ಪಡೆಗಳಲ್ಲಿ ‘ಆತ್ಮವಿಶ್ವಾಸ’ದ ಭರವಸೆಯಾಗಿದೆ” ಎಂದು ಅವರು ಹೇಳಿದರು

ಭಾರತ್ ಶಕ್ತಿ ಪ್ರದರ್ಶನ

ಪೋಖ್ರಾನ್ ಭಾರತದ ಆತ್ಮನಿರ್ಭರ್ (ಸ್ವಾವಲಂಬನೆ), ನಂಬಿಕೆ, ಸ್ವಾಭಿಮಾನದ ತ್ರಿಮೂರ್ತಿಗಳಿಗೆ ಸಾಕ್ಷಿಯಾಗಿದೆ ಎಂದು ‘ಭಾರತ್ ಶಕ್ತಿ’ ಪ್ರದರ್ಶನ ಬಗ್ಗೆ ಪ್ರಧಾನಿ ಮೋದಿ ಹೇಳಿದರು.”ಗಾಳಿಯಲ್ಲಿ ವಿಮಾನದ ಘರ್ಜನೆ, ಭಾರತ ಶಕ್ತಿ ವ್ಯಾಯಾಮದ ಸಮಯದಲ್ಲಿ ನೆಲದ ಮೇಲೆ ಪ್ರದರ್ಶಿಸಲಾದ ಶೌರ್ಯವು ‘ನವ ಭಾರತ’ದ ಕರೆಯಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಹರ್ಯಾಣದ ಜನರು ಬದಲಾವಣೆ ಬಯಸಿದ್ದಾರೆ ಎಂದ ದೀಪೇಂದರ್ ಹೂಡಾ

26 ವರ್ಷಗಳ ಹಿಂದೆ ಮೋದಿ ಮಾಡಿದ್ದ ಭಾಷಣ

ಇಂದು ಭಾರತವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಅಥವಾ ಸ್ವಾವಲಂಬನೆಯಲ್ಲಿ ದಾಪುಗಾಲು ಹಾಕುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಆದರೆ 26 ವರ್ಷಗಳ ಹಿಂದೆ, ದೃಷ್ಟಿ ಮತ್ತು ಧ್ಯೇಯವು ಸ್ಪಷ್ಟವಾಗಿತ್ತು. ಅದೇನೆಂದರೆ 100% ಮೇಕ್ ಇನ್ ಇಂಡಿಯಾ. 1998 ರಲ್ಲಿ ಪೋಖ್ರಾನ್‌ನಲ್ಲಿ ಭಾರತದ ಯಶಸ್ವಿ ಪರಮಾಣು ಪರೀಕ್ಷೆಯನ್ನು ಆಚರಿಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತ ನರೇಂದ್ರ ಮೋದಿಯವರು ಮಾಡಿದ ಭಾಷಣದ ತುಣುಕು ಇಲ್ಲಿದೆ.@modiarchive ಎಂಬ ಎಕ್ಸ್ ಹ್ಯಾಂಡಲ್ ಈ ಭಾಷಣದ ತುಣುಕನ್ನು ಪೋಸ್ಟ್ ಮಾಡಿದೆ.

ಮೋದಿ ಭಾಷಣದ ವಿಡಿಯೊ

ತಮ್ಮ ಭಾಷಣದಲ್ಲಿ ಮೋದಿ, ಈ  ಪರಮಾಣು ಪರೀಕ್ಷೆಯಲ್ಲಿ  ಭಾಗಿಯಾಗಿರುವ ವಿಜ್ಞಾನಿಗಳು ಹೇಗೆ ಭಾರತೀಯರು ಮತ್ತು ಸಂಪೂರ್ಣವಾಗಿ ಭಾರತದಲ್ಲಿ ಶಿಕ್ಷಣ ಪಡೆದವರು ಎಂಬುದನ್ನು ಮೋದಿ ಒತ್ತಿಹೇಳಿದ್ದಾರೆ. ಪರಮಾಣು ಪರೀಕ್ಷೆಯಿಂದ ಜಗತ್ತೇ ನಡುಗಿದೆ. ಇದು ಸಂಪೂರ್ಣ ಸ್ವದೇಶಿ. ಈ ಪರೀಕ್ಷೆಯಲ್ಲಿ ಇಬ್ಬರು ವಿಜ್ಞಾನಿಗಳ ಹೆಸರು ಮುನ್ನೆಲೆಗೆ ಬರುತ್ತದೆ.ಈ ವಿಜ್ಞಾನಿಗಳು ದೇಶದ ಹೊರಗಿನವರು ಅಲ್ಲ.ಇವರ ಸಂಪೂರ್ಣ ಶಿಕ್ಷಣ ಭಾರತದಲ್ಲೇ ಆಗಿತ್ತು. ಅಷ್ಟೇ ಅಲ್ಲ ಅಬ್ದುಲ್ ಕಲಾಂ ಅವರು ತಮಿಳು ಮಾಧ್ಯಮದಲ್ಲಿ ಕಲಿತವರು ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Tue, 12 March 24

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ