ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿದ್ದನ್ನೂ ವಿರೋಧಿಸಿದ್ದ ಕಾಂಗ್ರೆಸ್​, ನನ್ನನ್ನು ನಿಂದಿಸಲು ಸಣ್ಣ ಕಾರಣ ಸಿಕ್ಕರೂ ಬಿಡುವುದಿಲ್ಲ: ಮೋದಿ

ನನ್ನನ್ನು ನಿಂದಿಸಲು ಕಾಂಗ್ರೆಸ್ ಸಣ್ಣ ಕಾರಣ ಸಿಕ್ಕರೂ ಬಿಡುವುದಿಲ್ಲ, ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿದ್ದನ್ನೂ ಕೂಡ ವಿರೋಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಬಡವರು ಮತ್ತು ಆದಿವಾಸಿಗಳು ವೈದ್ಯರಾಗಲು ಸಾಧ್ಯವಾಗಲಿಲ್ಲ ಏಕೆಂದರೆ ಕಾಂಗ್ರೆಸ್​ ಇಂಗ್ಲಿಷ್​ ತಿಳಿದಿರುವವರಿಗೆ ಮಾತ್ರ ಅನುಕೂಲವಾಗುವಂತೆ ಕಾನೂನು ಮಾಡಿದೆ.

ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿದ್ದನ್ನೂ ವಿರೋಧಿಸಿದ್ದ ಕಾಂಗ್ರೆಸ್​, ನನ್ನನ್ನು ನಿಂದಿಸಲು ಸಣ್ಣ ಕಾರಣ ಸಿಕ್ಕರೂ ಬಿಡುವುದಿಲ್ಲ: ಮೋದಿ
ನರೇಂದ್ರ ಮೋದಿ
Image Credit source: NDTV

Updated on: Nov 07, 2023 | 2:55 PM

ನನ್ನನ್ನು ನಿಂದಿಸಲು ಕಾಂಗ್ರೆಸ್ ಸಣ್ಣ ಕಾರಣ ಸಿಕ್ಕರೂ ಬಿಡುವುದಿಲ್ಲ, ಆದಿವಾಸಿ ಮಹಿಳೆ ರಾಷ್ಟ್ರಪತಿಯಾಗಿದ್ದನ್ನೂ ಕೂಡ ವಿರೋಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಬಡವರು ಮತ್ತು ಆದಿವಾಸಿಗಳು ವೈದ್ಯರಾಗಲು ಸಾಧ್ಯವಾಗಲಿಲ್ಲ ಏಕೆಂದರೆ ಕಾಂಗ್ರೆಸ್​ ಇಂಗ್ಲಿಷ್​ ತಿಳಿದಿರುವವರಿಗೆ ಮಾತ್ರ ಅನುಕೂಲವಾಗುವಂತೆ ಕಾನೂನು ಮಾಡಿದೆ.

ಮಧ್ಯಪ್ರದೇಶದ ಸಿಧಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ,   ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಲೆಲ್ಲಾ ನಕ್ಸಲರು ಹಾಗೂ ಭಯೋತ್ಪಾದಕರು ಧೈರ್ಯ ತುಂಬುತ್ತಾರೆ ಎಂದರು. ಪ್ರಧಾನಿ ಮೋದಿ ಮಧ್ಯಪ್ರದೇಶದ ಜನರ ಹೃದಯದಲ್ಲಿದ್ದಾರೆ ಏಕೆಂದರೆ, ಕೇಂದ್ರದಲ್ಲಿ ಕಾಂಗ್ರೆಸ್​ ತನ್ನ 10 ವರ್ಷಗಳ ಆಡಳಿತದಲ್ಲಿ ಕೇವಲ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ, ರೈತರ ಬ್ಯಾಂಕ್​ ಖಾತೆಗಳಿಗೆ 2 ಲಕ್ಷ ಕೋಟಿ ರೂ. ಹಣ ವರ್ಗಾಯಿಸಲಾಗಿದೆ. ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ 13,000 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದಿದ್ದಾರೆ.

ಮತ್ತಷ್ಟು ಓದಿ: Vocal For Local: ‘ಅನುಪಮಾ’ ದೀಪಾವಳಿಯ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ; ವಿಶೇಷವೇನು?

ಎಂಟು ವಿಧಾನಸಭೆಗಳ ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿ ಮತ ಯಾಚಿಸಿದರು. ಈ ಎಂಟು ವಿಧಾನಸಭಾ ಸ್ಥಾನಗಳಲ್ಲಿ ನಾಲ್ಕು ಮೀಸಲು ಸ್ಥಾನಗಳಾಗಿವೆ. ಉಳಿದ ಸ್ಥಾನಗಳಲ್ಲಿಯೂ ಆದಿವಾಸಿಗಳನ್ನು ನಿರ್ಣಾಯಕ ಮತದಾರರು ಎಂದು ಪರಿಗಣಿಸಲಾಗುತ್ತದೆ. ಈ ಬಾರಿ ಯಾವುದೇ ಬೆಲೆ ತೆತ್ತಾದರೂ ಬುಡಕಟ್ಟು ಮತಗಳನ್ನು ಕಳೆದುಕೊಳ್ಳಲು ಬಿಜೆಪಿ ಬಯಸುವುದಿಲ್ಲ. ತಮ್ಮ ಭಾಷಣವನ್ನು ಆಕ್ರಮಣಕಾರಿಯಾಗಿ ಪ್ರಾರಂಭಿಸಿದ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹಗರಣಗಳ ಮೂಲಕ ನಿಮ್ಮ ಹಣವನ್ನು ಲೂಟಿ ಮಾಡಿದೆ, ನಾವು ಸರ್ಕಾರಕ್ಕೆ ಬಂದ ತಕ್ಷಣ ಇದು ನಿಂತುಹೋಯಿತು. ನಾವು 2 ಲಕ್ಷ ಕೋಟಿ ರೂಪಾಯಿಗಳನ್ನು ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಹೂಡಿಕೆ ಮಾಡಿದ್ದೇವೆ, ಇದು ಕರೋನಾಕ್ಕಿಂತ ಮುಂಚೆಯೇ ಬಡವರಿಗೆ ಪಡಿತರವನ್ನು ಒದಗಿಸಿದೆ.

ದೇಶದ ಯಾವುದೇ ಭಾಗದಲ್ಲಿ ಯಾವುದೇ ಬಡ ಕುಟುಂಬ ಹಸಿವಿನಿಂದ ಮಲಗುವುದಿಲ್ಲ ಎಂಬುದು ಮೋದಿಯವರ ಗ್ಯಾರಂಟಿ. ಈ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸುತ್ತಿದ್ದೇವೆ ಎಂದು ಹೇಳಿದರು. ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:52 pm, Tue, 7 November 23