ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ (Rishi Sunak)ಅವರೊಂದಿಗೆ ಇಂದು ಮಾತನಾಡಿದ್ದು ಭಾರತ ಮತ್ತು ಯುಕೆ ನಡುವಿನ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ. ಇಂದು ರಿಷಿ ಸುನಕ್ ಜತೆ ಮಾತನಾಡಲು ಸಂತೋಷವಾಗಿದೆ. ಯುಕೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವಹಿವಾಟು ಒಪ್ಪಂದದ ಆರಂಭಿಕ ತೀರ್ಮಾನದ ಪ್ರಾಮುಖ್ಯತೆಯನ್ನು ಸಹ ನಾವು ಒಪ್ಪಿಕೊಂಡಿದ್ದೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಿಷಿ ಸುನಕ್ ಧನ್ಯವಾದ ಎಂದಿದ್ದಾರೆ
Glad to speak to @RishiSunak today. Congratulated him on assuming charge as UK PM. We will work together to further strengthen our Comprehensive Strategic Partnership. We also agreed on the importance of early conclusion of a comprehensive and balanced FTA.
— Narendra Modi (@narendramodi) October 27, 2022
ನಾನು ನನ್ನ ಹೊಸ ಪಾತ್ರನ್ನು ಪ್ರಾರಂಭಿಸುತ್ತಿರುವಾಗ ವಿನಯದ ಮಾತುಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಯುಕೆ ಮತ್ತು ಭಾರತ ಬಹಳಷ್ಟು ಹಂಚಿಕೊಂಡಿದೆ. ಮುಂದಿನ ತಿಂಗಳುಗಳು ಮತ್ತು ವರ್ಷಗಳಲ್ಲಿ ನಮ್ಮ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ನಾವು ಗಾಢಗೊಳಿಸುವುದರಿಂದ ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವಗಳು ಏನನ್ನು ಸಾಧಿಸಬಹುದು ಎಂಬುದರ ಕುರಿತು ನಾನು ಉತ್ಸುಕನಾಗಿದ್ದೇನೆ ಎಂದು ಸುನಕ್ ಟ್ವೀಟ್ ಮಾಡಿದ್ದಾರೆ.
Thank you Prime Minister @NarendraModi for your kind words as I get started in my new role.
The UK and India share so much. I'm excited about what our two great democracies can achieve as we deepen our security, defence and economic partnership in the months & years ahead. pic.twitter.com/Ly60ezbDPg
— Rishi Sunak (@RishiSunak) October 27, 2022
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಕೂಡ ಶುಕ್ರವಾರ ಭಾರತಕ್ಕೆ ಬರುತ್ತಿದ್ದಾರೆ. ಇಬ್ಬರೂ ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ ಎಂದು ಬ್ರಿಟನ್‌ನ ವಿದೇಶಾಂಗ ಕಚೇರಿ ಇಂದು ತಿಳಿಸಿದೆ.
ಬ್ರಿಟನ್ ಭಾರತದೊಂದಿಗೆ ಮುಕ್ತ-ವ್ಯಾಪಾರ ಒಪ್ಪಂದದ ಬಹುಪಾಲು ವಿಭಾಗಗಳನ್ನು ಪೂರ್ಣಗೊಳಿಸಿದೆ. ಆದರೆ ಅದು ನ್ಯಾಯಯುತ ಮತ್ತು ಪರಸ್ಪರ ಎಂದು ತಿಳಿದ ನಂತರ ಮಾತ್ರ ಒಪ್ಪಂದಕ್ಕೆ ಸಹಿ ಹಾಕುತ್ತದೆ ಎಂದು ವ್ಯಾಪಾರ ಇಲಾಖೆ ಸಚಿವ ಗ್ರೆಗ್ ಹ್ಯಾಂಡ್ಸ್ ನಿನ್ನೆ ಹೇಳಿದ್ದಾರೆ. “ನಾವು ಈಗಾಗಲೇ ಹೆಚ್ಚಿನ ವಿಷಯಗಳನ್ನು ಚರ್ಚಿಸಿದ್ದು ಶೀಘ್ರದಲ್ಲೇ ಮುಂದಿನ ಸುತ್ತಿನ ಮಾತುಕತೆಗಳನ್ನು ಎದುರು ನೋಡುತ್ತಿದ್ದೇವೆ” ಎಂದು ಹ್ಯಾಂಡ್ಸ್ ಸಂಸತ್ ನಲ್ಲಿ ತಿಳಿಸಿದರು. ಈ ವಾರದ ಆರಂಭದಲ್ಲಿ ಗಡುವು ಮುಗಿದ್ದಿದ್ದು ದೀಪಾವಳಿಯೊಳಗೆ ಒಪ್ಪಂದವನ್ನು ಪೂರ್ಣಗೊಳಿಸಬೇಕೆಂದು ಸರ್ಕಾರವು ಹಿಂದೆ ಹೇಳಿತ್ತು.
Published On - 9:59 pm, Thu, 27 October 22