AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಮಾರಿ ತಡೆಗೆ ನಾಳೆಯಿಂದ ‘ಸಂಜೀವಿನಿ ಲಸಿಕೆ’ ಪರ್ವ! ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ100 ಮಂದಿಗೆ ಲಸಿಕೆ

ನಾಳೆಯಿಂದ(ಜ.16) ದೇಶಾದ್ಯಂತ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ನಡೆಯಲಿದ್ದು ನಾಳೆ ಬೆಳಿಗ್ಗೆ 10.30 ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಮಹಾಮಾರಿ ತಡೆಗೆ ನಾಳೆಯಿಂದ ‘ಸಂಜೀವಿನಿ ಲಸಿಕೆ’ ಪರ್ವ! ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ100 ಮಂದಿಗೆ ಲಸಿಕೆ
ಪ್ರಧಾನಿ ನರೇಂದ್ರ ಮೋದಿ (FILE PHOTO)
ಆಯೇಷಾ ಬಾನು
|

Updated on:Jan 15, 2021 | 11:51 AM

Share

ಬೆಂಗಳೂರು: ಕೊರೊನಾಗೆ ಬ್ರೇಕ್ ಹಾಕಲು ವ್ಯಾಕ್ಸಿನ್​ ಪರ್ವಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ನಾಳೆಯಿಂದ (ಜ. 16) ದೇಶಾದ್ಯಂತ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ನಡೆಯಲಿದ್ದು ನಾಳೆ ಬೆಳಗ್ಗೆ 10.30 ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಚಾಲನೆಗೆ ದೆಹಲಿಯ ಎರಡು ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಳಿಕ ಕೆಲ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಶನಿವಾರದಿಂದ ದೇಶದಲ್ಲಿ 3 ಸಾವಿರ‌ ಸ್ಥಳಗಳಲ್ಲಿ ಲಸಿಕೆ ನೀಡಿಕೆ ಶುರುವಾಗುತ್ತೆ. ಜನವರಿ ಅಂತ್ಯದ ವೇಳೆಗೆ 5 ಸಾವಿರ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತೆ. ಹಾಗೂ ಮಾರ್ಚ್ ಅಂತ್ಯಕ್ಕೆ ದೇಶದ 12 ಸಾವಿರ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತೆ.

ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ ನೂರು ಮಂದಿಗೆ ಲಸಿಕೆ ಮೊದಲ ದಿನ ಪ್ರತಿಯೊಂದು ಸ್ಥಳದಲ್ಲಿ ನೂರು ಮಂದಿಗೆ ಲಸಿಕೆ ನೀಡಲಾಗುತ್ತೆ. ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಐದು ಮಂದಿ ಸಿಬ್ಬಂದಿ ನಿಯೋಜನೆ ಮಾಡಲಾಗಿರುತ್ತೆ. ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಯಾವುದಾದರೊಂದು ಬ್ರಾಂಡ್ ಲಸಿಕೆ ಮಾತ್ರ ಲಭ್ಯವಿರುತ್ತೆ. ಮೊದಲ ಡೋಸ್ ಬ್ರಾಂಡ್ ಲಸಿಕೆಯನ್ನ ಎರಡನೇ ಡೋಸ್ ಆಗಿ ನೀಡೋದ್ರಿಂದ ಲಸಿಕೆಯ ಬ್ರಾಂಡ್ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ಲಸಿಕೆ ಬಗೆಗಿನ ಮಾಹಿತಿಯನ್ನು ಕೋ ವಿನ್ ಆ್ಯಪ್​ನಲ್ಲಿ ದಾಖಲು ಮಾಡಲಾಗುತ್ತೆ.

ವಾರದಲ್ಲಿ ನಾಲ್ಕು ದಿನ ಅಂದ್ರೆ ಸೋಮವಾರ, ಬುಧವಾರ, ಗುರುವಾರ, ಶನಿವಾರ ಕೊರೊನಾ ಲಸಿಕೆ ನೀಡಿಕೆಗೆ ಮೀಸಲು. ಮತ್ತು ಮಂಗಳವಾರ, ಶುಕ್ರವಾರ ಇತರೆ ಆರೋಗ್ಯ ಕಾರ್ಯಕ್ರಮ, ಲಸಿಕೆ ನೀಡಿಕೆಗೆ ಮೀಸಲು. ಕೊರೊನಾ ಲಸಿಕೆ ನೀಡಿಕೆಯಿಂದ ಬೇರೆ ಹೆಲ್ತ್‌ಕೇರ್ ಚಟುವಟಿಕೆಗೆ ತೊಂದರೆ ಆಗಬಾರದು ಎಂದು ಈ ರೀತಿ ದಿನಗಳನ್ನು ಗುರುತು ಮಾಡಲಾಗಿದೆ. ಶನಿವಾರವೇ ದೇಶದ 3 ಸಾವಿರ ಸ್ಥಳಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ‌ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Published On - 11:50 am, Fri, 15 January 21

ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ