ದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗಿನ ಮಾತುಕತೆಗೆ ಯತ್ನಿಸುತ್ತಿರುವ ಕೇಂದ್ರ ಸರ್ಕಾರ ಈಗ ಹೊಸದೊಂದು ಹೆಜ್ಜೆ ಇಟ್ಟಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರು ಪ್ರತಿಭಟನಾ ನಿರತ ರೈತರಿಗೆ ಬರೋಬ್ಬರಿ ಎಂಟು ಪುಟಗಳ ಪತ್ರ ಬರೆದಿದ್ದಾರೆ.
ಕೃಷಿ ಕಾಯ್ದೆಗಳ ಬಗ್ಗೆ ಹರಡುತ್ತಿರುವ ಸುಳ್ಳುಗಳಲ್ಲಿ ದಯವಿಟ್ಟು ನಂಬಿಕೆ ಇಡಬೇಡಿ..ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಲ್ಲಿಸಲಿದೆ ಎಂದು ಕೆಲವು ನಿಮ್ಮ ದಾರಿ ತಪ್ಪಿಸುತ್ತಿದ್ದಾರೆ. ಆದರೆ ನಾವದನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಪತ್ರದಲ್ಲಿ ಕೃಷಿ ಸಚಿವರು ಉಲ್ಲೇಖಿಸಿದ್ದಾರೆ. ಕೆಲವು ರೈತರ ಗುಂಪು ಗಾಳಿಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದು ಹೇಳಿದ್ದಾರೆ.
ತಪ್ಪುತಪ್ಪು ಮಾಹಿತಿಗಳನ್ನು ಇಂಥದ್ದೇ ರೈತರ ಗುಂಪು ಉಳಿದವರಿಗೂ ಹಂಚುತ್ತಿದೆ. ನಮ್ಮ ಗಡಿ ಕಾಯುತ್ತಿರುವ ಯೋಧರಿಗೆ ರೇಷನ್ ಕೊಂಡೊಯ್ಯುವ ರೈಲುಗಳು ಚಲಿಸುವ, ಹಳಿಗಳ ಮೇಲೆ ಕುಳಿತು ಪ್ರತಿಭಟನೆ ಮಾಡುವ ಮೂಲಕ, ರೈಲು ಸಂಚಾರ ನಿಲ್ಲಿಸುತ್ತಿರುವವರೆಲ್ಲ ಕೃಷಿಕರು ಅಲ್ಲ. ಅವರನ್ನೆಲ್ಲ ರೈತರೆಂದು ಪರಿಗಣಿಸುವುದೂ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ರೈತರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಸಿದ್ಧ: ಹರ್ದೀಪ್ ಸಿಂಗ್ ಪುರಿ