ನ್ಯಾಷನಲ್ ಪೆನ್ಷನ್ ಸಿಸ್ಟಮ್, ಅಟಲ್ ಪೆನ್ಷನ್ ಯೋಜನಾ ಚಂದಾದಾರರ ಸಂಖ್ಯೆ ಶೇ 22ಹೆಚ್ಚಳ

| Updated By: ganapathi bhat

Updated on: Mar 17, 2021 | 9:35 PM

ನ್ಯಾಷನಲ್ ಪೆನ್ಷನ್ ಸ್ಕೀಮ್ ಹಾಗೂ ಅಟಲ್ ಪೆನ್ಷನ್ ಯೋಜನಾದಲ್ಲಿ ಚಂದಾದಾರರ ಸಂಖ್ಯೆಯಲ್ಲಿ 2021ರ ಫೆಬ್ರವರಿ ಕೊನೆ ಹೊತ್ತಿಗೆ ಶೇಕಡಾ 22ರಷ್ಟು ಹೆಚ್ಚಳವಾಗಿದೆ. ಈಗಿರುವ ಒಟ್ಟಾರೆ ಚಂದಾದಾರರ ಸಂಖ್ಯೆ 4.15 ಕೋಟಿ.

ನ್ಯಾಷನಲ್ ಪೆನ್ಷನ್ ಸಿಸ್ಟಮ್, ಅಟಲ್ ಪೆನ್ಷನ್ ಯೋಜನಾ ಚಂದಾದಾರರ ಸಂಖ್ಯೆ ಶೇ 22ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ನ್ಯಾಷನಲ್ ಪೆನ್ಷನ್ ಸಿಸ್ಟಮ್ ಮತ್ತು ಅಟಲ್ ಪೆನ್ಷನ್ ಯೋಜನಾ ಪಿಂಚಣಿ ಯೋಜನೆಗಳ ಚಂದಾದಾರರ ಸಂಖ್ಯೆಯಲ್ಲಿ 2021ರ ಫೆಬ್ರವರಿ ಕೊನೆಗೆ ಶೇಕಡಾ 22ರಷ್ಟು ಬೆಳವಣಿಗೆ ಕಂಡಿದ್ದು, 4.15 ಕೋಟಿಗೆ ತಲುಪಿದೆ ಎಂಬ ಮಾಹಿತಿಯು ಮಾರ್ಚ್ 17ರ ಸರ್ಕಾರದ ದತ್ತಾಂಶದಿಂದ ಗೊತ್ತಾಗಿದೆ. “ವಿವಿಧ ಯೋಜನೆಗಳಿಗೆ ಚಂದಾದಾರರ ಸಂಖ್ಯೆಯು 2020ರ ಫೆಬ್ರವರಿಯಲ್ಲಿ 340.34 ಲಕ್ಷ ಇದ್ದದ್ದು 2021ರ ಫೆಬ್ರವರಿ ಕೊನೆಗೆ 414.70 ಲಕ್ಷಕ್ಕೆ ಏರಿಕೆಯಾಗಿದೆ. ಆ ಮೂಲಕ ವರ್ಷದಿಂದ ವರ್ಷಕ್ಕೆ ಶೇ 21.85ರಷ್ಟು ಏರಿಕೆಯನ್ನು ತೋರಿಸುತ್ತಿದೆ,” ಎಂದು ಪಿಎಫ್​​ಆರ್​​ಡಿಎ ಹೇಳಿಕೆಯಲ್ಲಿ ತಿಳಿಸಿದೆ. 

ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್​ಪಿಎಸ್) ಮತ್ತು ಅಟಲ್ ಪೆನ್ಷನ್ ಯೋಜನಾ (ಎಪಿವೈ) ಅಡಿಯಲ್ಲಿ ವರ್ಷದ ಹಿಂದೆ 3.43 ಕೋಟಿ ಚಂದಾದಾರರಿದ್ದರು. ಫೆಬ್ರವರಿ 28, 2021ಕ್ಕೆ ಒಟ್ಟಾರೆ ಪೆನ್ಷನ್ ಅಸೆಟ್ಸ್ ಅಂಡರ್ ಮ್ಯಾನೇಜ್​ಮೆಂಟ್ ರೂ. 5,59,594 ಕೋಟಿ ಇದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 33.09ರಷ್ಟು ಬೆಳವಣಿಗೆ ತೋರಿಸುತ್ತಿದೆ ಎಂದು ಪಿಎಫ್​ಆರ್​ಡಿಎ ತಿಳಿಸಿದೆ.

ಸರ್ಕಾರಿ ನೌಕರರು, ಸ್ವಾಯತ್ತ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ವಲಯದ ಸಿಬ್ಬಂದಿಗಾಗಿ ಎನ್​ಪಿಎಸ್ ಇದೆ. ಇನ್ನು ದೇಶದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ವಯಸ್ಸಾದ ಮೇಲೆ ಪಿಂಚಣಿ ಒದಗಿಸುವುದನ್ನೇ ಗುರಿಯಾಗಿ ಇಟ್ಟುಕೊಂಡು ಅಟಲ್ ಪೆನ್ಷನ್ ಯೋಜನೆಯನ್ನು ರೂಪಿಸಲಾಗಿದೆ.

ಇದನ್ನೂ ಓದಿ: Income Tax Rules: ಏಪ್ರಿಲ್ 1ರಿಂದ ಬದಲಾಗಲಿದೆ ಆದಾಯ ತೆರಿಗೆಯ ಈ 5 ನಿಯಮ

Published On - 9:06 pm, Wed, 17 March 21