Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ಕೊರೊನಾ ಅಟ್ಟಹಾಸ; ಅಂತರ ಪಾಲಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದ ಮೋದಿ ಕೊರೊನಾ ನಿಯಂತ್ರಣದಲ್ಲಿ ನಾವು ಸಾಧಿಸಿರುವ ಮುನ್ನಡೆಯನ್ನು ಬೇಜವಾಬ್ದಾರಿಯಾಗಿ ಬದಲಾಯಿಸುವುದು ಬೇಡ. ಮಾಸ್ಕ್ ಧರಿಸುವುದು ಮತ್ತು ಅಂತರ ಪಾಲಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಆತ್ಮವಿಶ್ವಾಸವು ಅತಿವಿಶ್ವಾಸವಾಗಿ ಅಪಾಯಕಾರಿ ಮಟ್ಟಕ್ಕೆ ಏರುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದರು. Link: ಮಾಸ್ಕ್ ಕಡ್ಡಾಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ
2) ಅಶ್ಲೀಲ ಸಿಡಿ ಪ್ರಕರಣ: ಆರೋಪ ಹೊತ್ತಿರುವ ನರೇಶ್ ಮನೆ ಮೇಲೆ ಎಸ್ಐಟಿ ದಾಳಿ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಎಂಬ ಆರೋಪ ಹೊತ್ತಿರುವ ನರೇಶ್ ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. Link: ರಮೇಶ್ ಜಾರಕಿಹೊಳಿ ‘ಸಿಡಿ’ ಮಾಸ್ಟರ್ ಮೈಂಡ್ ಮನೆ ಮೇಲೆ ಎಸ್ಐಟಿ ಅಧಿಕಾರಿಗಳ ದಾಳಿ
3) ಬಿಎಸ್‌ವೈ ಹಾಗೂ ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಸಂಕಷ್ಟ ಡಿನೋಟಿಫಿಕೇಷನ್ ಭೂತ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಕಾಡಲು ಮುಂದಾಗಿದೆ. ಇದೀಗ, ಇದೇ ವಿಚಾರದಲ್ಲಿ ಸಿಎಂ ಬಿಎಸ್‌ವೈ ಹಾಗೂ ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಸಂಕಷ್ಟ ಎದುರಾಗಿದೆ. Link: ಸಿಎಂ ಬಿಎಸ್‌ವೈ, ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಎದುರಾಯ್ತು ಸಂಕಷ್ಟ
4) ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸಲು ಸರ್ಕಾರ ಚಿಂತನೆ ಮಹಾಮಾರಿ ಕೊರೊನಾದಿಂದಾಗಿ ಒಂದು ವರ್ಷದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರೌಢ ಶಿಕ್ಷಣ ತಕ್ಕಮಟ್ಟಿಗೆ ಶುರುವಾಗಿದ್ರೂ ಪ್ರಾಥಮಿಕ ಶಿಕ್ಷಣ ಆರಂಭವಾಗಿಲ್ಲ. ಇನ್ನು ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕೊರೊನಾ ಎರಡನೇ ಅಲೆ ಶುರುವಾಗಿದೆ. Link: ಮುಂದಿನ ಶೈಕ್ಷಣಿಕ ವರ್ಷ ಜುಲೈ 15ರಿಂದ ಆರಂಭ – ಶಿಕ್ಷಣ ಸಚಿವ ಸುರೇಶ್ ಕುಮಾರ್
5) ಮತದಾರರ ಓಲೈಕೆಗೆ ಟಿವಿ, ವಾಷಿಂಗ್ ಮೆಷೀನ್ ನೀಡಲು ಮುಂದಾದ ರಾಜಕೀಯ ಪಕ್ಷಗಳು ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ವಿವಿಧ ರಾಜಕೀಯ ಪಕ್ಷಗಳು ಟಿವಿ, ವಾಷಿಂಗ್ ಮೆಷೀನ್, ಉಚಿತ ಕೇಬಲ್ ಸಂಪರ್ಕ ನೀಡಲು ಮುಂದಾಗಿವೆ. ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆಗಾಗಿ ಇಲ್ಲಿನ ರಾಜಕೀಯ ಪಕ್ಷಗಳು ಉಚಿತವಾಗಿ ನೀಡುವ ವಸ್ತುಗಳ ಪಟ್ಟಿಯನ್ನು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿವೆ. Link: ಮತದಾರರ ಓಲೈಕೆಗಾಗಿ ಟಿವಿ, ವಾಷಿಂಗ್ ಮೆಷೀನ್ ಏನೇ ಕೇಳಿದರೂ ಕೊಡುತ್ತಿವೆ ರಾಜಕೀಯ ಪಕ್ಷಗಳು
6) ಸಿಡಿ ಪ್ರಕರಣ; ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಟ್ವಿಟರ್ ಸಮರ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯ ಹಿಂದಿರುವ ‘ಮಹಾನಾಯಕ’ ಯಾರು ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇದೇ ವಿಚಾರವಾಗಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಟ್ವಿಟರ್ ಸಮರ ಕೂಡ ಶುರುವಾಗಿದೆ. Link: ಸಿಡಿ ಷಡ್ಯಂತ್ರದ ‘ಮಹಾನಾಯಕ’ ಡಿ.ಕೆ.ಶಿವಕುಮಾರ್ ಎಂಬ ಅನುಮಾನದಲ್ಲಿ ಬಿಜೆಪಿ
7) ‘ಬಾಹುಬಲಿ’ ನಂಬಿದ ನೆಟ್ಫ್ಲಿಕ್ಸ್ಗೆ 100 ಕೋಟಿ ರೂ. ನಷ್ಟ! ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದ ಬಾಹುಬಲಿ ಸಿನಿಮಾ ಎರಡು ಪಾರ್ಟ್ಗಳಲ್ಲಿ ಮೂಡಿಬಂದಿತ್ತು. ಎರಡೂ ಪಾರ್ಟ್ಗೆ ಸಿಕ್ಕಾಪಟ್ಟೆ ಕಮಾಯಿ ಆಗಿತ್ತು. ಆದರೆ ಬಾಹುಬಲಿಯ ಕಥೆ ಅಷ್ಟಕ್ಕೇ ಮುಗಿಯುವಂಥದ್ದಲ್ಲ. ಮೊದಲ ಪಾರ್ಟ್ಗಿಂತಲೂ ಮುಂಚಿನ ಕಥೆ ಏನು ಎಂಬುದನ್ನು ತೋರಿಸಲು ಒಂದು ಹೊಸ ಯೋಜನೆ ರೂಪಿಸಲಾಗಿತ್ತು. ಆದರೆ ಅದರಲ್ಲಿ ಈಗ ದೊಡ್ಡ ಬದಲಾವಣೆ ಆಗಿದೆ. Link: ‘ಬಾಹುಬಲಿ’ ನಂಬಿ 100 ಕೋಟಿ ರೂ. ಕಳೆದುಕೊಂಡ ನೆಟ್ಫ್ಲಿಕ್ಸ್! 200 ಕೋಟಿಯಲ್ಲಿ ಈಗ ಇನ್ನೊಂದು ಪ್ಲ್ಯಾನ್
8) ವಾಹನಗಳ ನವೀಕರಣ ಶುಲ್ಕ ಏರಿಕೆಗೆ ಪ್ರಸ್ತಾಪ ವಾಹನಗಳ ನವೀಕರಣ ಶುಲ್ಕ ಏರಿಕೆಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಕೇಳಿಬಂದಿದೆ. ಅಂದ ಹಾಗೆ, ಪ್ರಸ್ತಾವನೆಯಲ್ಲಿ ದ್ವಿಚಕ್ರ ವಾಹನಗಳ ನವೀಕರಣ ಶುಲ್ಕ 1,000 ರೂ, ತ್ರಿಚಕ್ರ ವಾಹನಗಳ ನವೀಕರಣ ಶುಲ್ಕ 2,500 ರೂ, ಲಘು ವಾಹನಗಳ ನವೀಕರಣ ಶುಲ್ಕ 5,000 ರೂ, ಗೂಡ್ಸ್ ವಾಹನಗಳ ನವೀಕರಣ ಶುಲ್ಕ 1,000 ರೂ. ಹಾಗೂ ಭಾರಿ ವಾಹನಗಳ ನವೀಕರಣ ಶುಲ್ಕ 1,500 ರೂ. ಎಂದು ನಿಗದಿ ಮಾಡಲಾಗಿದೆ. Link: ಕೇಂದ್ರ ಸರ್ಕಾರದಿಂದ ವಾಹನಗಳ ನವೀಕರಣ ಶುಲ್ಕ ಏರಿಕೆಗೆ ಪ್ರಸ್ತಾಪ!
9) ಅಚ್ಚರಿಯ ಹೇಳಿಕೆ ನೀಡಿದ ನಟ ದರ್ಶನ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಯಶಸ್ಸು ಕಂಡಿದೆ. ಸ್ಯಾಂಡಲ್ವುಡ್ ಇತಿಹಾಸದಲ್ಲೇ ಯಾವ ಚಿತ್ರವೂ ಮಾಡದಷ್ಟು ಗಳಿಕೆಯನ್ನು ರಾಬರ್ಟ್ ಮಾಡಿದೆ. ಸದ್ಯದಲ್ಲೇ ಈ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡುವ ಎಲ್ಲಾ ಲಕ್ಷಣ ಕಾಣುತ್ತಿದೆ. Link: ಹಾಗೆ ನೋಡಿದ್ರೆ ನನಗೆ ಡಬಲ್ ಸಂಭಾವನೆ ಕೊಡಬೇಕು: ರಾಬರ್ಟ್ ಸಕ್ಸಸ್ ಮೀಟ್ನಲ್ಲಿ ದರ್ಶನ್ ಹೀಗೆ ಅಂದಿದ್ಯಾಕೆ?
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.