AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಷರ್​​ ಮೇಲೆ ಪೊಲೀಸ್ ದಾಳಿ; ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ 200 ಕೆಜಿ ಜಿಲೆಟಿನ್​ ಕಡ್ಡಿ, 700 ಡಿಟೋನೇಟರ್ ವಶ

ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ16,500 ರೂಪಾಯಿ ಮೌಲ್ಯದ ಜಿಲೆಟಿನ್ ಕಡ್ಡಿಗಳು ಸದ್ಯ ಪೊಲೀಸರ ಕೈ ಸೇರಿದ್ದು, ಮಾಲೀಕ ದಯಾನಂದ ಮಾಸೂರ, ಕ್ರಷರ್ ಸಿಬ್ಬಂದಿ ಶಂಕರಗೌಡ, ಹಾಗೂ ಜಿಲೆಟಿನ್ ಕಡ್ಡಿ ಕೊಟ್ಟಿದ್ದ ನವೀನಕುಮಾರರನ್ನು ಪೊಲೀಸರು ಬಂಧಿಸಿದ್ದಾರೆ.

ಕ್ರಷರ್​​ ಮೇಲೆ ಪೊಲೀಸ್ ದಾಳಿ; ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ 200 ಕೆಜಿ ಜಿಲೆಟಿನ್​ ಕಡ್ಡಿ, 700 ಡಿಟೋನೇಟರ್ ವಶ
ಪೊಲೀಸರು ನೆಲದಲ್ಲಿ ಹೂತಿಟ್ಟಿದ್ದ 200 ಕೆ.ಜಿ ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ಪಡೆಯುತ್ತಿರುವ ದೃಶ್ಯ
preethi shettigar
|

Updated on: Mar 17, 2021 | 6:41 PM

Share

ಧಾರವಾಡ: ಜಿಲ್ಲೆಯ ಅಮ್ಮಿನಬಾವಿಯಲ್ಲಿರುವ ಕ್ರಷರ್​​ ಮೇಲೆ ದಾಳಿ ಮಾಡಿರುವ ಪೊಲೀಸರು 200 ಕೆಜಿ ಜಿಲೆಟಿನ್​ ಕಡ್ಡಿ, 700 ಎಲೆಕ್ಟ್ರಾನಿಕ್ ಡಿಟೋನೇಟರ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಡಿ.ಬಿ.ಮಾಸೂರು ಕ್ರಷರ್​ನ ಮೇಲೆ ದಾಳಿ ಮಾಡಿದ್ದು, ಪೊಲೀಸರು ನೆಲದಲ್ಲಿ ಹೂತಿಟ್ಟಿದ್ದ 200 ಕೆಜಿ ಜಿಲೆಟಿನ್ ಕಡ್ಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಸಂಬಂಧ ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ​​ ದಾಖಲಾಗಿದೆ.

ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ 16,500 ರೂಪಾಯಿ ಮೌಲ್ಯದ ಜಿಲೆಟಿನ್ ಕಡ್ಡಿಗಳು ಸದ್ಯ ಪೊಲೀಸರ ಕೈ ಸೇರಿದ್ದು, ಮಾಲೀಕ ದಯಾನಂದ ಮಾಸೂರ, ಕ್ರಷರ್ ಸಿಬ್ಬಂದಿ ಶಂಕರಗೌಡ, ಹಾಗೂ ಜಿಲೆಟಿನ್ ಕಡ್ಡಿ ಕೊಟ್ಟಿದ್ದ ನವೀನಕುಮಾರರನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯಲ್ಲಿ ಕಲ್ಲುಕ್ವಾರಿ ಮೇಲೆ ಪೊಲೀಸರ ದಾಳಿ: ಪೊಲೀಸರು ಕಲ್ಲು ಕ್ವಾರಿ ಮೇಲೆ ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿರುವ ಘಟನೆ ದಾವಣಗೆರೆ ತಾಲೂಕಿನ ಈಚಘಟ್ಟ ಗ್ರಾಮದ ಬಳಿ ನಡೆದಿದೆ. ಓರ್ವ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು 30 ಜಿಲೆಟಿನ್ ಕಡ್ಡಿ, ಎರಡು ಎಲೆಕ್ಟ್ರಾನಿಕ್ ಡಿಟೋನೇಟರ್​ ಹಾಗೂ ಗನ್​ ಪೌಡರ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಇಬ್ಬರು ವಿದೇಶಿ ಡ್ರಗ್ಸ್ ಪೆಡ್ಲರ್‌ ಪೊಲೀಸ್ ವಶ: ಬೆಂಗಳೂರಿನ ಅಮೃತಹಳ್ಳಿ, ಜಕ್ಕೂರಿನಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನೈಜೀರಿಯಾದ ಯ್ಯುಚೋಹುಕ್ವು ಮಾರ್ಕ್ ಮೌರಿಸ್, ಜೋಸೆಫ್ ಡುಕ್ವೆ ಒಕಾಫಾರ್ ಬಂಧಿತ ಆರೋಪಿಗಳು. ಬಂಧಿತರಿಂದ 65 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಕೊಕೇನ್, ಎಕ್ಸ್ಟಸಿ, ಎಲ್‌ಎಸ್‌ಡಿ ಸ್ಟ್ರಿಪ್ಸ್, ಎಂಡಿಎಂ ಜಪ್ತಿ ಮಾಡಲಾಗಿದೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಇಂದು ಇಬ್ಬರು ನೈಜಿರಿಯನ್ ಡ್ರಗ್ ಪೆಡ್ಲರ್​ಗಳು ಅರೆಸ್ಟ್ ಆಗಿದ್ದಾರೆ. ಓರ್ವ ಬಿಸಿನೆಸ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ. ಮತ್ತೊಬ್ಬ ಟೂರಿಸ್ಟ್ ವೀಸಾದಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಇಬ್ಬರು ಡ್ರಗ್ ಪೆಡ್ಲರ್ ಸಂಬಂಧ ಅಮೃತಹಳ್ಳಿ, ಸಂಪಿಗೆಹಳ್ಳಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ನೈಜೀರಿಯಾದ ಯ್ಯುಚೋಹುಕ್ವು ಮಾರ್ಕ್ ಮೌರಿಸ್, ಬಿಸಿನೆಸ್ ವೀಸಾದಡಿ ಬಂದು ಅಕ್ರಮವಾಗಿ ಡ್ರಗ್ ಬಿಸಿನೆಸ್ ಮಾಡುತ್ತಿದ್ದ. ಸದ್ಯ ಈತ ಅಮೃತಹಳ್ಳಿ ಜಕ್ಕೂರ್ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನಿಂದ ₹50 ಲಕ್ಷ ಮೌಲ್ಯದ 500ಗ್ರಾಂ ಎಂಡಿಎಂ, 91 ಎಕ್ಸ್ ಟಸಿ ಮಾತ್ರೆ, 56 ಎಲ್​ಎಸ್​ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ.

ಇನ್ನು ಮತ್ತೋರ್ವ ಆರೋಪಿ ಜೋಸೆಫ್ ಡುಕ್ವೆ ಒಕಾಫಾರ್​ನನ್ನು ಯಲಹಂಕದಲ್ಲಿ ಬಂಧಿಸಿಲಾಗಿದ್ದು, ಈತ ಟೂರಿಸ್ಟ್ ವೀಸಾದಡಿ ಬಂದು ಅಕ್ರಮವಾಗಿ ನೆಲೆಸಿದ್ದ. ಬಂಧಿತನಿಂದ ₹15 ಲಕ್ಷ ಮೌಲ್ಯದ 65 ಗ್ರಾಂ ಕೊಕೇನ್, 50 ಎಕ್ಸ್ ಟಿಸಿ ಮಾತ್ರೆ, 58 ಎಲ್​ಎಸ್​ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ಅಮೃತಹಳ್ಳಿ ಹಾಗೂ ಸಂಪಿಗೆಹಳ್ಳಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ:

 New Mumbai Police Commissioner: ಮುಂಬೈ ಪೊಲೀಸ್​ ಆಯುಕ್ತ ಎತ್ತಂಗಡಿ.. ಮುಕೇಶ್​ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!

Gamblers jump into Malaprabha river ಜೂಜಾಡುತ್ತಿದ್ದ ವೇಳೆ ಪೊಲೀಸ್ ದಾಳಿಗೆ ಹೆದರಿ ಮಲಪ್ರಭಾ ನದಿಗೆ ಹಾರಿದ ಇಬ್ಬರು

ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ