ಜೊಮ್ಯಾಟೋ ವಿವಾದದಲ್ಲಿ ಯಾರು ಯಾರಿಗೆ ಹೊಡೆದರು? ನೆಟ್ಟಿಗರು ಹರಿಬಿಟ್ಟ ತಮಾಷೆ ವಿಡಿಯೋ

ಈ ಪ್ರಕರಣದಲ್ಲಿ ಯಾರು ಸರಿ? ಯಾರು ತಪ್ಪು? ಎಂಬ ಚರ್ಚೆಗೆ ತಾರ್ಕಿಕ ಅಂತ್ಯ ಸಿಗುವ ಮೊದಲೇ ಹೀಗೊಂದು ವಿಡಂಬನಾತ್ಮಕ ವಿಡಿಯೋ ಹರಿಬಿಟ್ಟು ಈ ಸಮಾಜ ಯಾವೆಲ್ಲಾ ರೀತಿಯಲ್ಲಿ ಯೋಚಿಸುತ್ತದೆ, ಒಂದು ಘಟನೆಗೆ ಎಷ್ಟೆಲ್ಲಾ ಆಯಾಮ ಇರಬಹುದು ಎಂಬುದನ್ನು ತಮಾಷೆಯಾಗಿಯೇ ತೋರಿಸಿದ್ದಾರೆ.

ಜೊಮ್ಯಾಟೋ ವಿವಾದದಲ್ಲಿ ಯಾರು ಯಾರಿಗೆ ಹೊಡೆದರು? ನೆಟ್ಟಿಗರು ಹರಿಬಿಟ್ಟ ತಮಾಷೆ ವಿಡಿಯೋ
ವೈರಲ್​​ ವಿಡಿಯೋ
Follow us
Skanda
| Updated By: ganapathi bhat

Updated on:Mar 17, 2021 | 7:18 PM

ಬೆಂಗಳೂರು: ಜೊಮ್ಯಾಟೋ ಡೆಲಿವರಿ ಬಾಯ್​ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಹಿತೇಶಾ ಚಂದ್ರಾಣಿ ಎಂಬ ಯುವತಿ ಮಾಡಿದ್ದ ಆರೋಪ ಇದೀಗ ಬೇರೆ ಬೇರೆ ರೂಪ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಟ್ರೋಲ್ ಪೇಜ್​ಗಳು ತರಹೇವಾರಿ ರೀತಿಯಲ್ಲಿ ಬಣ್ಣಿಸುತ್ತಿದ್ದು, ಈ ಘಟನೆ ಹೇಗಾಗಿರಬಹುದು? ಇದಕ್ಕೆ ಯಾವೆಲ್ಲಾ ಆಯಾಮಗಳಿರಬಹುದು? ಎಂದು ತಮಾಷೆಯ ವಿಡಿಯೋ ಮಾಡಿ ಹರಿಬಿಟ್ಟಿವೆ.

ಜೊಮ್ಯಾಟೋ ಹುಡುಗನೇ ಹುಡುಗಿಗೆ ಹಲ್ಲೆ ಮಾಡಿದನಾ? ಹುಡುಗಿಯೇ ಆತನ ಮೇಲೆ ಮೊದಲು ಕೈ ಮಾಡಿದಳಾ? ಹುಡುಗ ಬೇಕಂತಲೇ ಆಕೆಯ ಕೈಯಿಂದ ಹೊಡೆಸಿಕೊಂಡನಾ? ಅಥವಾ ಆಕೆಯೇ ಹಾಗೆ ತಂತ್ರ ಉಪಯೋಗಿಸಿದಳಾ? ಎಂಬಲ್ಲಿಂದ ಹಿಡಿದು ಒಂದು ಘಟನೆಯ ಬಗ್ಗೆ ಮೂಡಬಹುದಾದ ಅನುಮಾನದ ಎಲ್ಲಾ ಆಯಾಮಗಳನ್ನಿಟ್ಟುಕೊಂಡು ವಿಡಿಯೋ ಮಾಡಲಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಪ್ರಕರಣದ ಗಂಭೀರತೆ ಮಾಯವಾಗಿ ತಮಾಷೆಯಾಗಿ ಪರಿವರ್ತನೆಗೊಂಡಿದೆ. ಈ ಹಿಂದೆಯೂ ಎಷ್ಟೋ ಗಂಭೀರ ಘಟನೆಗಳನ್ನು ಟ್ರೋಲ್​ ಪೇಜ್​ಗಳು ಅಥವಾ ಕೆಲವೊಂದಷ್ಟು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಾಸ್ಯಾಸ್ಪದ ಮಾಡಿದ ನಿದರ್ಶನಗಳಿವೆ. ಹೀಗಾಗಿಯೇ ಕೆಲವರು ಭಾರತೀಯರಿಗೆ ಎಂತಹ ಗಂಭೀರ ವಿಷಯ ಸಿಕ್ಕರೂ ಅದಕ್ಕೆ ಹಾಸ್ಯ ಲೇಪಿಸುವ ಚಾಕಚಕ್ಯತೆ ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದಲ್ಲಿ ಯಾರು ಸರಿ? ಯಾರು ತಪ್ಪು? ಎಂಬ ಚರ್ಚೆಗೆ ತಾರ್ಕಿಕ ಅಂತ್ಯ ಸಿಗುವ ಮೊದಲೇ ಹೀಗೊಂದು ವಿಡಂಬನಾತ್ಮಕ ವಿಡಿಯೋ ಹರಿಬಿಟ್ಟು ಈ ಸಮಾಜ ಯಾವೆಲ್ಲಾ ರೀತಿಯಲ್ಲಿ ಯೋಚಿಸುತ್ತದೆ, ಒಂದು ಘಟನೆಗೆ ಎಷ್ಟೆಲ್ಲಾ ಆಯಾಮ ಇರಬಹುದು ಎಂಬುದನ್ನು ತಮಾಷೆಯಾಗಿಯೇ ತೋರಿಸಿದ್ದಾರೆ. ಇನ್​ಸ್ಟಾಗ್ರಾಂ, ಫೇಸ್​ಬುಕ್​ ಸೇರಿದಂತೆ ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ತರಹೇವಾರಿ ಕಮೆಂಟ್​ ಮಾಡಿದ್ದಾರೆ. ಅಂದಹಾಗೆ ನೀವಿನ್ನೂ ವಿಡಿಯೋ ನೋಡಿಲ್ಲವಾದರೆ, ಒಮ್ಮೆ ಇಲ್ಲಿ ಕಣ್ಣು ಹಾಯಿಸುವುದನ್ನು ಮರೆಯಬೇಡಿ.

View this post on Instagram

A post shared by Chudarshan (@chudarshan)

ಇದನ್ನೂ ಓದಿ: ಅವರೇ, ಇವರಾ? ಜೊಮ್ಯಾಟೋ ಪ್ರಕರಣದಲ್ಲಿ ಸದ್ದು ಮಾಡಿದ ಯುವತಿ ನಿಜ ಜೀವನದಲ್ಲಿ ಹೀಗಿದ್ದಾರಾ? 

ಊಟ ಕೊಡ್ರಪ್ಪಾ, ಹೊಡೀಬೇಡಿ: ಜೊಮ್ಯಾಟೋಗೆ ಪಾಠ ಹೇಳಿದ ನೆಟ್ಟಿಗರು

Published On - 6:51 pm, Wed, 17 March 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ