ಸೌದಿ ಅರೇಬಿಯಾಕ್ಕೆ ಸಡ್ಡು ಹೊಡೆದ ಭಾರತ, ಮೇ ತಿಂಗಳಿಂದ ತೈಲ ಆಮದು ಶೇ 25ರಷ್ಟು ಕಡಿತಕ್ಕೆ ಯೋಜನೆ

ಭಾರತದ ಮನವಿಗೆ ಸ್ಪಂದಿಸದ ಸೌದಿ ಅರೇಬಿಯಾದ ವಿರುದ್ಧ ತೊಡೆ ತಟ್ಟಲು ನಿರ್ಧರಿಸಿರುವ ಭಾರತ ಮೇ ತಿಂಗಳಲ್ಲಿ ತೈಲ ಆಮದನ್ನು ಶೇಕಡಾ 25ರಷ್ಟು ಇಳಿಕೆ ಮಾಡಲು ಯೋಜನೆ ರೂಪಿಸಿದೆ. ಭಾರತದ ಮನವಿ ಏನಾಗಿತ್ತು, ಸೌದಿ ಅರೇಬಿಯಾದ ಪ್ರತಿಕ್ರಿಯೆ ಹೇಗಿತ್ತು?

ಸೌದಿ ಅರೇಬಿಯಾಕ್ಕೆ ಸಡ್ಡು ಹೊಡೆದ ಭಾರತ, ಮೇ ತಿಂಗಳಿಂದ ತೈಲ ಆಮದು ಶೇ 25ರಷ್ಟು ಕಡಿತಕ್ಕೆ ಯೋಜನೆ
ಕಚ್ಚಾ ತೈಲ (ಸಂಗ್ರಹ ಚಿತ್ರ)
Follow us
Srinivas Mata
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 17, 2021 | 6:52 PM

ಸೌದಿ ಅರೇಬಿಯಾದಿಂದ ಮಾಡಿಕೊಳ್ಳುವ ತೈಲದ ಆಮದನ್ನು ಮೇ ತಿಂಗಳಿನಿಂದ ಆಚೆಗೆ ಶೇ 25ರಷ್ಟು ಕಡಿತಗೊಳಿಸುವುದಕ್ಕೆ ಭಾರತ ಸರ್ಕಾರದ ತೈಲ ಸಂಸ್ಕರಣಾ ಘಟಕಗಳು ಯೋಜನೆ ಮಾಡುತ್ತಿವೆ. ತೈಲ ಪೂರೈಕೆಯನ್ನು ಹೆಚ್ಚು ಮಾಡುವ ಮೂಲಕ ಜಾಗತಿಕ ಆರ್ಥಿಕತೆಗೆ ಸಹಾಯ ಮಾಡಬೇಕು ಎಂದು ಭಾರತ ಮಾಡಿದ್ದ ಮನವಿಯನ್ನು ಆರ್ಗನೈಸೇಷನ್ ಆಫ್ ಪೆಟ್ರೋಲಿಯಂ ಎಕ್ಸ್​ಪೋರ್ಟಿಂಗ್ ಕಂಟ್ರೀಸ್ (ಒಪೆಕ್) ನಿರ್ಲಕ್ಷಿಸಿದ್ದವು. ಈ ಹಿನ್ನೆಲೆಯಲ್ಲಿ ರಿಯಾದ್ ಜತೆಗೆ ನವದೆಹಲಿಯ ಸಂಬಂಧ ಸ್ವಲ್ಪ ಮಟ್ಟಿಗೆ ಹಳಸಿದೆ. ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಎರಡು ಮೂಲಗಳು ಈ ಬಗ್ಗೆ ಹೇಳಿವೆ. ಮಧ್ಯಪ್ರಾಚ್ಯದ ಮೇಲೆ ಕಚ್ಚಾ ತೈಲದ ಅವಲಂಬನೆ ಕಡಿಮೆ ಆಗಬೇಕು ಎಂಬುದು ಸರ್ಕಾರದ ತೀರ್ಮಾನವಾಗಿದೆ ಎನ್ನಲಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್​ನಿಂದ ಮೇ ತಿಂಗಳಲ್ಲಿ 10.8 ಮಿಲಿಯನ್ ಬ್ಯಾರೆಲ್​ ಎತ್ತಲು ನಿರ್ಧರಿಸಿವೆ ಎಂದು ಹೆಸರು ಬಹಿರಂಗವಾಗಲು ಬಯಸದ ಮೂಲಗಳು ತಿಳಿಸಿವೆ. ಭಾರತದಲ್ಲಿನ ಪ್ರತಿ ದಿನದ 5 ಮಿಲಿಯನ್ ಬ್ಯಾರೆಲ್​ಗಳ ರೀಫೈನಿಂಗ್ ಸಾಮರ್ಥ್ಯದಲ್ಲಿ ಶೇಕಡಾ 60ರಷ್ಟನ್ನು ಸರ್ಕಾರಿ ಸ್ವಾಮ್ಯದ ಘಟಕಗಳು ನಿಯಂತ್ರಿಸುತ್ತವೆ. ಒಟ್ಟಾರೆಯಾಗಿ ಸರಾಸರಿ 14.7- 14.8 ಮಿಲಿಯನ್ ಬ್ಯಾರೆಲ್ ಸೌದಿ ತೈಲವು ಒಂದು ತಿಂಗಳಲ್ಲಿ ಆಮದು ಆಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದಲ್ಲೇ ಅತಿಹೆಚ್ಚು ತೈಲ ಬಳಸುವ ಮೂರನೇ ದೇಶ ಭಾರತ ವಿಶ್ವದಲ್ಲೇ ಅತಿ ಹೆಚ್ಚು ತೈಲ ಬಳಸುವ ಹಾಗೂ ಆಮದು ಮಾಡಿಕೊಳ್ಳುವ ಮೂರನೇ ದೊಡ್ಡ ದೇಶ ಭಾರತ. ಶೇ 80ಕ್ಕೂ ಹೆಚ್ಚಿನ ಅಗತ್ಯದ ಪೂರೈಕೆಗಾಗಿ ಮಧ್ಯಪ್ರಾಚ್ಯವನ್ನೇ ಭಾರತ ನೆಚ್ಚಿಕೊಂಡಿದೆ. ತೈಲ ಬೆಲೆಯಲ್ಲಿ ಭಾರೀ ಏರಿಕೆ ಆಗುತ್ತಿರುವ ಕಾರಣಕ್ಕೆ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಪೆಕ್ ಹಾಗೂ ಅದರ ಸಹವರ್ತಿ ದೇಶಗಳಿಗೆ ಮನವಿ ಮಾಡಿ, ಪೂರೈಕೆ ಮೇಲೆ ಮಿತಿ ತೆರವುಗೊಳಿಸುವಂತೆ ಪದೇಪದೇ ಕೇಳಿಕೊಂಡರು. ಇನ್ನು ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಗೆ ಸೌದಿಯು ಸ್ವಯಂಪ್ರೇರಿತವಾಗಿ ಉತ್ಪಾದನೆ ಕಡಿತ ಮಾಡಿದ್ದು ಕಾರಣ ಎಂದು ಅವರು ಆರೋಪಿಸಿದ್ದಾರೆ.

ಏಪ್ರಿಲ್​ವರೆಗೆ ಕಡಿತ ಪ್ರಮಾಣವನ್ನು ವಿಸ್ತರಿಸುವ ಬಗ್ಗೆ ಒಪೆಕ್+ ನಿರ್ಧರಿಸಿವೆ. ಧರ್ಮೇಂದ್ರ ಪ್ರಧಾನ್ ಮನವಿಗೆ ಉತ್ತರಿಸಿರುವ ಸೌದಿಯ ಸಚಿವರು, ಕಳೆದ ವರ್ಷ ಕಡಿಮೆ ದರದಲ್ಲಿ ಖರೀದಿ ಮಾಡಿರುವ ತೈಲವನ್ನು ಬಳಸಿಕೊಳ್ಳುವಂತೆ ಹೇಳಿದ್ದಾರೆ. ಇನ್ನು ಭಾರತದ ತೈಲ ಸಚಿವಾಲಯವು ರಿಫೈನರಿಗಳಿಗೆ ತಿಳಿಸಿರುವ ಪ್ರಕಾರ, ವಿವಿಧ ಮೂಲಗಳಿಂದ ಕಚ್ಚಾ ತೈಲವನ್ನು ಪಡೆಯುವಂತೆ ಸೂಚಿಸಿದ್ದು, ಮಧ್ಯಪ್ರಾಚ್ಯದ ಮೇಲಿನ ಅವಲಂಬನೆ ಕಡಿಮೆ ಮಾಡುವಂತೆ ಹೇಳಿದೆ.

ಏಷ್ಯಾದ ರಿಫೈನರಿಗಳಿಗೆ ಏಪ್ರಿಲ್ ತಿಂಗಳ ತೈಲ ಪೂರೈಕೆ ಕಡಿಮೆ ಭಾರತದ ರಿಫೈನರಿಗಳು ಏಪ್ರಿಲ್​ನಲ್ಲಿ ಸೌದಿ ಅರೇಬಿಯಾದ ತೈಲ ಆಮದು ಕಡಿತ ಮಾಡಲು ಸಾಧ್ಯವಿಲ್ಲ. ಏಕೆಂದರೆ ಮಾರ್ಚ್ ಆರಂಭದಲ್ಲೇ ತೈಲ ಬೇಡಿಕೆ ಬಗ್ಗೆ ಒಪೆಕ್ ರಾಷ್ಟ್ರಗಳ ಮುಂದೆ ಮನವಿ ಇಡಲಾಗಿದೆ. ಮೇ ತಿಂಗಳ ಬೇಡಿಕೆಯು ಪ್ರಾಥಮಿಕವಾದದ್ದು. ಅಂತಿಮವಾಗಿ ಮೇ ತಿಂಗಳ ಬೇಡಿಕೆ ವಿವರವು ಏಪ್ರಿಲ್ ತಿಂಗಳ ಆರಂಭದಲ್ಲಿ ಗೊತ್ತಾಗುತ್ತದೆ. ಅಂದಹಾಗೆ ಸೌದಿ ಅರೇಬಿಯಾವು ಏಪ್ರಿಲ್ ತಿಂಗಳ ತೈಲ ಪೂರೈಕೆಯನ್ನು ಏಷ್ಯಾದ ಕೆಲವು ರಿಫೈನರಿಗಳಿಗೆ ಕಡಿಮೆ ಮಾಡಿದೆ. ಆದರೆ ಭಾರತದ ಸರಾಸರಿ ತಿಂಗಳ ಪ್ರಮಾಣವನ್ನು ಹಾಗೇ ಉಳಿಸಿಕೊಂಡಿದೆ. ಆದರೆ ಹೆಚ್ಚುವರಿಯಾಗಿ ಪೂರೈಕೆ ಮಾಡಬೇಕು ಎಂಬ ಬೇಡಿಕೆಯನ್ನು ಸೌದಿ ಅರೇಬಿಯಾ ತಿರಸ್ಕರಿಸಿದೆ.

ಭಾರತವು ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ಒಟ್ಟಾರೆ ಆಮದು ಈಗಾಗಲೇ ಫೆಬ್ರವರಿಯಲ್ಲಿ 22 ತಿಂಗಳ ಕನಿಷ್ಠ ಮಟ್ಟವನ್ನು ಮುಟ್ಟಿದೆ. ಫೆಬ್ರವರಿಯಲ್ಲಿ ಇರಾಕ್ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕವು ಭಾರತದ ಎರಡನೇ ಅತಿ ದೊಡ್ಡ ಪೂರೈಕೆದಾರ ದೇಶವಾಗಿದೆ. ಆದರೆ ಸೌದಿ ಅರೇಬಿಯಾವು ನಿರಂತರವಾಗಿ ಭಾರತದ ಟಾಪ್ ಎರಡು ಸ್ಥಾನಗಳ ಪೈಕಿ ಒಂದಾಗಿರುತ್ತಿದ್ದ ಸೌದಿ ಅರೇಬಿಯಾವು 2006ರ ಜನವರಿ ನಂತರದಲ್ಲಿ ಮೊದಲ ಬಾರಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಭಾರತದ ಎರಡು ರಿಫೈನರಿಗಳಾದ ಐಒಸಿ ಹಾಗೂ ಎಂಆರ್​​ಪಿಎಲ್ ಈಗಾಗಲೇ ಮೇ ತಿಂಗಳ ತೈಲ ಡೆಲಿವರಿಗೆ ಟೆಂಡರ್​ಗಳನ್ನು ಸಲ್ಲಿಸಿವೆ. “ತೈಲ ಖರೀದಿ ವಿಚಾರದಲ್ಲಿ ತೈಲ ಕಂಪೆನಿಗಳು ತಾವೇ ತೀರ್ಮಾನ ಕೈಗೊಳ್ಳುತ್ತವೆ,” ಎಂದು ತೈಲ ಸಚಿವಾಲಯವು ಸುದ್ದಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತದ ವಿಚಾರದಲ್ಲಿ ಧರ್ಮಸಂಕಟದ ಸ್ಥಿತಿ: ನಿರ್ಮಲಾ ಸೀತಾರಾಮನ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ