ICC Rankings: ಪುರುಷರ ಟಿ20 ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಪುನಃ 5 ನೇ ಸ್ಥಾನಕ್ಕೆ ಮರಳಿದ ವಿರಾಟ್ ಕೊಹ್ಲಿ
ಮೂರನೇ ಪಂದ್ಯದಲ್ಲಿ ಅಜೇಯ 83 ರನ್ ಗಳಿಸಿ ಇಂಗ್ಲೆಂಡ್ಗೆ 8 ವಿಕೆಟ್ಗಳ ಜಯ ದೊರಕಿಸಿಕೊಟ್ಟ ಟೀಮಿನ ವಿಕೆಟ್ಕೀಪರ್/ಬ್ಯಾಟ್ಸಮನ್ ರ್ಯಾಂಕಿಂಗ್ನಲ್ಲಿ ಟಾಪ್ 20ರೊಳಗೆ ವಾಪಸ್ಸು ಬಂದಿದ್ದಾರೆ. ಈಗ 19 ನೇ ಸ್ಥಾನದಲ್ಲಿರುವ ಬಟ್ಲರ್ ತಮ್ಮ ಟಿ20 ಕರೀಯರ್ನ ಗರಿಷ್ಠ ರ್ಯಾಂಕಿಂಗ್ಗಿಂತ ಕೇವಲ ಎರಡು ಸ್ಥಾನ ದೂರದಲ್ಲಿದ್ದಾರೆ.

ದುಬೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಅಮೋಘ ಅಜೇಯ ಅರ್ಧ ಶತಕಗಳನ್ನು ಬಾರಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಪುರುಷರ ಟಿ20 ಅಟಗಾರರ ರ್ಯಾಂಕಿಂಗ್ನಲ್ಲಿ ತಮ್ಮ 5 ನೇ ಸ್ಥಾನವನ್ನು ವಾಪಸ್ಸು ಪಡೆದಿದ್ದಾರೆ. ಈ ಎರಡು ಅದ್ಭುತ ಇನ್ನಿಂಗ್ಸ್ಗಳು ಅವರಿಗೆ 47 ರ‍್ಯಾಂಕಿಂಗ್ ಪಾಯಿಂಟ್ಗಳನ್ನು ಒದಗಿಸಿವೆ.
ಮೂರನೇ ಪಂದ್ಯದಲ್ಲಿ ಅಜೇಯ 83 ರನ್ ಗಳಿಸಿ ಇಂಗ್ಲೆಂಡ್ಗೆ 8 ವಿಕೆಟ್ಗಳ ಜಯ ದೊರಕಿಸಿಕೊಟ್ಟ ಟೀಮಿನ ವಿಕೆಟ್ಕೀಪರ್/ಬ್ಯಾಟ್ಸಮನ್ ರ್ಯಾಂಕಿಂಗ್ನಲ್ಲಿ ಟಾಪ್ 20ರೊಳಗೆ ವಾಪಸ್ಸು ಬಂದಿದ್ದಾರೆ. ಈಗ 19 ನೇ ಸ್ಥಾನದಲ್ಲಿರುವ ಬಟ್ಲರ್ ತಮ್ಮ ಟಿ20 ಕರೀಯರ್ನ ಗರಿಷ್ಠ ರ್ಯಾಂಕಿಂಗ್ಗಿಂತ ಕೇವಲ ಎರಡು ಸ್ಥಾನ ದೂರದಲ್ಲಿದ್ದಾರೆ. ಅಕ್ಟೋಬರ್ 2018ರಲ್ಲಿ ಅವರು 17 ನೇ ರ‍್ಯಾಂಕಿಂಗ್ ಪಡೆದಿದ್ದರು.
ಸದರಿ ಸರಣಿಯಲ್ಲಿ ಆಡುತ್ತಿರುವ ಬೇರೆ ಆಟಗಾರರು ಸಹ ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿ ತಮ್ಮ ರ‍್ಯಾಂಕಿಂಗ್ ಉತ್ತಮಪಡಿಸಿಕೊಂಡಿದ್ದಾರೆ.
Back-to-back fifties in the ongoing #INDvENG series have helped Virat Kohli reclaim the No.5 spot in the @MRFWorldwide ICC T20I Player Rankings ?
Full list: https://t.co/iM96Oe6eu6 pic.twitter.com/JkxEyZGTLr
— ICC (@ICC) March 17, 2021
ಮಂಗಳವಾರದಂದು ಅಜೇಯ 40 ರನ್ ಬಾರಿಸಿ ಮೂರನೇ ವಿಕೆಟ್ಗೆ ಬಟ್ಲರ್ ಜೊತೆ ಮುರಿಯದ 77-ರನ್ ಜೊತೆಯಾಟದಲ್ಲಿ ಪಾಲ್ಗೊಂಡ ಜಾನಿ ಬೇರ್ಸ್ಟೋ ಎರಡು ಸ್ಥಾನಗಳ ಬಡ್ತಿ ಪಡೆದು 14 ನೇ ಸ್ಥಾನಕ್ಕೆ ಬಂದಿದ್ದಾರೆ. ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ ಅವರ ದೇಶದವರೇ ಆಗಿರುವ ಡೇವಿಡ್ ಮಲಾನ್ ಮೊದಲ ಸ್ಥಾನದಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ 49 ಮತ್ತು 46 ರನ್ ಬಾರಿಸಿದ ಜೇಸನ್ ರಾಯ್ ನಾಲ್ಕು ಸ್ಥಾನಗಳ ಜಿಗಿತದೊಂದಿಗೆ 24 ನೇ ಸ್ಥಾನಕ್ಕೆ ಬಂದಿದ್ದಾರೆ. ಉತ್ತಮ ಬೌಲಿಂಗ್ ಪ್ರದರ್ಶನಗಳನ್ನು ನೀಡುತ್ತಿರುವ ಜೊಫ್ರಾ ಆರ್ಚರ್ 43 ಸ್ಥಾನಗಳನ್ನು ಮುನ್ನುಗ್ಗಿ 34 ಸ್ಥಾನಕ್ಕೆ ಬಂದರೆ, ಮಾರ್ಕ್ ವುಡ್ 59 ಸ್ಥಾನಗಳ ಜಿಗಿತದೊಂದಿಗೆ 39ನೇ ಸ್ಥಾನಕ್ಕೆ ಬಂದಿದ್ದಾರೆ. ಗುರುವಾರ ಬಿಡುಗಡೆಯಾಗಿರುವ ರ‍್ಯಾಂಕಿಂಗ್ ಪ್ರಕಾರ ಇಂಗ್ಲೆಂಡ್ನ ಮತ್ತೊಬ್ಬ ವೇಗದ ಬೌಲರ್ ಸ್ಯಾಮ್ ಕರನ್ 74ನೇ ಸ್ಥಾನದಲ್ಲಿದ್ದಾರೆ.
ಭಾರತದ ಆಟಗಾರರರ ಪೈಕಿ ಶ್ರೇಯಸ್ ಅಯ್ಯರ್ 32 ಸ್ಥಾನಗಳ ಜಿಗಿತ ಕಂಡು 31 ನೇ ಸ್ಥಾನ, ರಿಷಬ್ ಪಂತ್ 30 ಸ್ಥಾನಗಳ ಜಿಗಿತದೊಂದಿಗೆ 80ನೇ ಸ್ಥಾನಕ್ಕೆ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 2 ಸ್ಥಾನ ಮೇಲಕ್ಕೆ ಹೋಗಿ 11 ಸ್ಥಾನವನ್ನು ಅಲಂಕರಿಸಿದ್ದಾರೆ. ಬೌಲರ್ಗಳ ಪೈಕಿ ಶಾರ್ದುಲ್ ಠಾಕೂರ್ 41 ರಿಂದ 27ನೇ ಸ್ಥಾನಕ್ಕೆ ಜಿಗಿದಿದ್ದರೆ, ಭುವನೇಶ್ವರ್ ಕುಮಾರ್ 52ರಿಂದ 45 ಸ್ಥಾನಕ್ಕೆ ಬಂದಿದ್ದಾರೆ.
ಹಾಗೆಯೇ, ಪುರುಷರ ಐಸಿಸಿ ಒಡಿಐ ರ್ಯಾಂಕಿಂಗ್ಗಳಲ್ಲಿ 870 ಅಂಕಗಳೊಂದಿಗೆ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದ್ದಾರೆ. ರೋಹಿತ್ ಶರ್ಮ 842 ಅಂಕಗಳೊಂಮದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ 837 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
Shai Hope was the highest run-scorer in the #WIvSL ODIs with 258 runs at 86.00 ?
His brilliant performance has helped him break into the top 10 of the @MRFWorldwide ICC ODI Player Rankings.
Full list: https://t.co/9XBRp67hlj pic.twitter.com/7VTCuse11v
— ICC (@ICC) March 17, 2021
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವೆಸ್ಟ್ ಇಂಡೀಸ್ನ ವಿಕೆಟ್ಕೀಪರ್/ಬ್ಯಾಟ್ಸ್ಮನ್ ಶಾಯ ಹೋಪ್ 5 ಸ್ಥಾನಗಳ ಜಿಗಿತ ಕಂಡು 8ನೇ ಸ್ಥಾನಕ್ಕೆ ಬಂದಿದ್ದಾರೆ.
ಇದನ್ನೂ ಓದಿ: India vs England: ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಟೀಂ ಇಂಡಿಯಾದ 4 ಆಟಗಾರರು ಇವರೆ!
Published On - 7:21 pm, Wed, 17 March 21




