
ಚಂಡೀಗಢ, ಡಿಸೆಂಬರ್ 8: ಕ್ರಿಕೆಟಿಗ-ರಾಜಕಾರಣಿ, ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಪತ್ನಿ ನವಜೋತ್ ಕೌರ್ ಸಿಧು ಸಿಎಂ ಸ್ಥಾನಕ್ಕೆ “500 ಕೋಟಿ ರೂ.ಗಳ ಸೂಟ್‌ಕೇಸ್” ನೀಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ತಂದಿದ್ದರು. ಅವರ ವಿವಾದಾತ್ಮಕ ಹೇಳಿಕೆಯ ಬಳಿಕ ಕಾಂಗ್ರೆಸ್ ಪಕ್ಷ ಅವರನ್ನು ಅಮಾನತುಗೊಳಿಸಿದೆ.
“500 ಕೋಟಿ ರೂ. ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿಯಾಗುತ್ತಾರೆ” ಎಂಬ ಅವರ ಹೇಳಿಕೆಯಿಂದ ನವಜೋತ್ ಕೌರ್ ಭಾರಿ ವಿವಾದಕ್ಕೀಡಾಗಿದ್ದರು. ಇದರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆರೋಪಗಳನ್ನು ಮಾಡಿತ್ತು. ಆಮ್ ಆದ್ಮಿ ಪಕ್ಷ ಕೂಡ ಕಾಂಗ್ರೆಸ್ ವಿರುದ್ಧ ಈ ಹೇಳಿಕೆಯನ್ನು ದಾಳವಾಗಿಸಿಕೊಂಡಿತ್ತು.
ಇದನ್ನೂ ಓದಿ: ವಿವಾದಕ್ಕೀಡಾದ ನವಜೋತ್ ಸಿಂಗ್ ಸಿಧು ಪತ್ನಿಯ ಸಿಎಂ ಸ್ಥಾನಕ್ಕೆ 500 ಕೋಟಿ ರೂ. ಹೇಳಿಕೆ; ಬಿಜೆಪಿ ಆಕ್ರೋಶ
ತನ್ನ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್ ನಾಯಕಿಯೂ ಆಗಿರುವ ನವಜೋತ್ ಕೌರ್, “ನಮ್ಮ ಕಾಂಗ್ರೆಸ್ ಪಕ್ಷವು ನಮ್ಮಿಂದ ಎಂದಿಗೂ ಏನನ್ನೂ ಬೇಡಿಕೆ ಇಟ್ಟಿಲ್ಲ. ಬೇರೆ ಪಕ್ಷದಿಂದ ನಮಗೆ ಸಿಎಂ ಸ್ಥಾನದ ಆಮಿಷವಿದೆಯೇ ಎಂದು ಕೇಳಿದಾಗ ನಾನು ಸಿಎಂ ಹುದ್ದೆಗೆ ನೀಡಲು ನಮ್ಮಲ್ಲಿ 500 ಕೋಟಿ ರೂ. ಹಣವಿಲ್ಲ ಎಂದು ಹೇಳಿದ್ದೆ. ನಮ್ಮ ಪಕ್ಷದ ಬಗ್ಗೆ ನಾನು ಮಾತಾಡಿಲ್ಲ, ಬೇರೆ ಪಕ್ಷಕ್ಕೆ ಆ ಮಾತು ಹೇಳಿದ್ದೆ” ಎಂದು ಸ್ಪಷ್ಟನೆ ನೀಡಿದ್ದರು.
Why all Jokers 🤡 want to be CM of Punjab. ??
“Navjot Sidhu will return to active politics if he is declared CM face.”
– His wife Navjot Kaur
(There are so many brilliant Punjabi Civil Servants, Army Officers, all are good administrators) pic.twitter.com/LXtxfdkBdo
— Oxomiya Jiyori 🇮🇳 (@SouleFacts) December 7, 2025
ಇದನ್ನೂ ಓದಿ: ವಂದೇ ಮಾತರಂ ಕುರಿತ ನೆಹರು ಪತ್ರ ಓದಿದ ಪ್ರಿಯಾಂಕಾ ಗಾಂಧಿ, ಬಿಜೆಪಿಗೆ ತರಾಟೆ
ಸಾಮಾಜಿಕ ಮಾಧ್ಯಮದಲ್ಲಿ ಅವರು ಸ್ಪಷ್ಟೀಕರಣ ನೀಡಿದ್ದರೂ ಅದು ಕಾಂಗ್ರೆಸ್ಗೆ ಸಮಾಧಾನ ತರಲಿಲ್ಲ. ಅವರ ಹೇಳಿಕೆಯಿಂದ ಕಾಂಗ್ರೆಸ್ ಹೈಕಮಾಂಡ್ ಮುಜುಗರಕ್ಕೀಡಾಗಿದ್ದರಿಂದ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ