ನವಜೋತ್ ಸಿಂಗ್ ಸಿಧು ಪತ್ನಿಗೆ ಕ್ಯಾನ್ಸರ್ ; ಜೈಲಿನಲ್ಲಿರುವ ಪತಿಗೆ ಟ್ವೀಟ್ ಪತ್ರ
ನಿನಗಾಗಿ ಕಾಯುತ್ತಿದ್ದೆ, ನಿನಗೆ ನ್ಯಾಯವನ್ನು ಪದೇ ಪದೇ ನಿರಾಕರಿಸುವುದನ್ನು ನೋಡಿರುವೆ. ಸತ್ಯ ತುಂಬಾ ಶಕ್ತಿಯುತವಾಗಿದೆ. ಆದರೆ ಅದು ನಿಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸುತ್ತಿದೆ, ಕಲಿಯುಗ...
ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಪತ್ನಿಗೆ ಕ್ಯಾನ್ಸರ್ (Cancer) ಇರುವುದು ಪತ್ತೆಯಾಗಿದೆ. ನವಜೋತ್ ಕೌರ್ (Navjot Kaur) ಟ್ವಿಟರ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ನವಜೋತ್ ಎಸ್ ಸಿಧು ಮಾಡದ ಅಪರಾಧಕ್ಕಾಗಿ ಜೈಲಿನಲ್ಲಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನು ಕ್ಷಮಿಸಿ. ಹೊರಗೆ ಪ್ರತಿ ದಿನ ನಿಮಗಾಗಿ ಕಾಯುತ್ತಿರುವವರು ಬಹುಶಃ ನಿಮಗಿಂತ ಹೆಚ್ಚು ಬಳಲುತ್ತಿದ್ದಾರೆ. ಎಂದಿನಂತೆ ನಿಮ್ಮ ನೋವನ್ನು ದೂರ ಮಾಡಲು ಪ್ರಯತ್ನಿಸುತ್ತಾ, ನೋವನ್ನು ಹಂಚಿಕೊಳ್ಳುವೆ. ಸಣ್ಣದೊಂದು ಗಡ್ಡೆ ಕಂಡಿದೆ, ಅದು ಒಳ್ಳೆಯದಲ್ಲ ಎಂದು ಗೊತ್ತಿತ್ತು.
ನಿನಗಾಗಿ ಕಾಯುತ್ತಿದ್ದೆ, ನಿನಗೆ ನ್ಯಾಯವನ್ನು ಪದೇ ಪದೇ ನಿರಾಕರಿಸುವುದನ್ನು ನೋಡಿರುವೆ. ಸತ್ಯ ತುಂಬಾ ಶಕ್ತಿಯುತವಾಗಿದೆ. ಆದರೆ ಅದು ನಿಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸುತ್ತಿದೆ, ಕಲಿಯುಗ. ಕ್ಷಮಿಸಿ ನಿಮಗಾಗಿ ಕಾಯಲು ಸಾಧ್ಯವಿಲ್ಲ ಏಕೆಂದರೆ ಇದು 2ನೇ ಹಂತದ ಗಂಭೀರ ಕ್ಯಾನ್ಸರ್ ಆಗಿದೆ. ಇಂದು ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದೇನೆ. ಯಾರನ್ನೂ ದೂಷಿಸಬೇಕಾಗಿಲ್ಲ ಏಕೆಂದರೆ ಇದು ದೈವ ನಿಶ್ಚಯ,ಅದು ಸರಿಯಾಗಿದೆ ಎಂದು ಕೌರ್ ಟ್ವೀಟ್ ಮಾಡಿದ್ದಾರೆ.
He is in the prison for a crime he has not committed.Forgive all those involved.Waiting for you each day outside probably suffering more than you. As usual trying to take your pain away,asked for sharing it. Happened to see a small growth, knew it was bad.1/2
— DR NAVJOT SIDHU (@DrDrnavjotsidhu) March 22, 2023
ಕಾಂಗ್ರೆಸ್ ಪಂಜಾಬ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಟ್ವೀಟ್ ಮಾಡಿ, “ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದ್ದಕ್ಕಾಗಿ ಕ್ಷಮಿಸಿ. ಅದೃಷ್ಟವಶಾತ್ ಇದು ಸಮಯಕ್ಕೆ ಪತ್ತೆಯಾಯಿತು. ನಿಮ್ಮ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ದೋಷಿ ಎಂದ ಸೂರತ್ ಕೋರ್ಟ್; ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿದೆ
ನವಜೋತ್ ಸಿಂಗ್ ಸಿಧು 1988 ರ ರೋಡ್ ಜಗಳ ಸಾವಿನ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದು ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.2018 ರಲ್ಲಿ ₹ 1,000 ಸಣ್ಣ ದಂಡದೊಂದಿಗೆ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ