AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

35 ಸೊಮಾಲಿಯನ್ ಕಡಲ್ಗಳ್ಳರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ ನೌಕಾಪಡೆ

ಮಾರ್ಚ್ 15 ರಂದು ಐಎನ್‌ಎಸ್ ಕೋಲ್ಕತ್ತಾದಲ್ಲಿ ಎಂವಿ ರುಯೆನ್ ಹಡಗನ್ನು ಪತ್ತೆ ಮಾಡಿ, ಅದರಲ್ಲಿದ್ದ ಜನರನ್ನು ರಕ್ಷಣೆ ಮಾಡಿದೆ. ಇದರ ಜತೆಗೆ ಈ ಹಡಗಿನ ಪತ್ತೆಗಾಗಿ ಬಳಸಿದ್ದ ಭಾರತೀಯ ಡ್ರೋನ್​​ನ್ನು ಕಡಲ್ಗಳ್ಳರು ಹೊಡೆದುರುಳಿಸಿದರು. ಇನ್ನು ಈ ರಕ್ಷಣಾ ಕಾರ್ಯಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಇದೀಗ ಬಂಧನವಾಗಿರುವ 35 ಕಡಲ್ಗಳ್ಳರನ್ನು ಮುಂಬೈಗೆ ತರಲಾಗಿದೆ.

35 ಸೊಮಾಲಿಯನ್ ಕಡಲ್ಗಳ್ಳರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ ನೌಕಾಪಡೆ
ಅಕ್ಷಯ್​ ಪಲ್ಲಮಜಲು​​
|

Updated on: Mar 23, 2024 | 9:58 AM

Share

ಮುಂಬೈ, ಮಾ.23: ಭಾರತೀಯ ನೌಕಾಪಡೆಯು ಕೋಲ್ಕತ್ತಾದ ಅರಬ್ಬಿ ಸಮುದ್ರದ ಬಳಿ 35 ಸೊಮಾಲಿಯನ್ ಕಡಲ್ಗಳ್ಳರನ್ನು ಬಂಧಿಸಲಾಗಿತ್ತು. ಕಡಲ್ಗಳ್ಳತನ ನಿಗ್ರಹ ಇಂದು (ಮಾ.23) ಬೆಳಗ್ಗೆ ಮುಂಬೈಗೆ ಕರೆತಂದು ಮುಂಬೈನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಭಾರತೀಯ ದಂಡ ಸಂಹಿತೆ, ಕಡಲ ಕಳ್ಳತನ ವಿರೋಧಿ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 40 ಗಂಟೆಗಳ ಕಾಲ ನಿರಂತರವಾದ ಹೈ-ಟೆಂಪೋ ಕಾರ್ಯಾಚರಣೆಗಳ ನಂತರ ಮಾರ್ಚ್ 16 ರಂದು ಕಡಲುಗಳ್ಳರ MV ರುಯೆನ್ ಹಡಗುನ್ನು ತಡೆದು ಅದರಲ್ಲಿದ್ದ ಭಾರತೀಯ ಹಾಗೂ ಬಲ್ಗೇರಿಯಾದ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ.

ಈ ಹಡಗನ್ನು 2023 ಡಿಸೆಂಬರ್​​ನಲ್ಲಿ ಅಪಹರಣ ಮಾಡಲಾಗಿತ್ತು. ಭಾರತೀಯ ನೌಕಾಪಡೆಯು ಸಮುದ್ರ ಭದ್ರತಾ ಕಾರ್ಯಾಚರಣೆಗಳ ಭಾಗವಾಗಿ ಈ ಸಮುದ್ರದಲ್ಲಿ ಭಾರೀ ಕಾರ್ಯಚರಣೆಯನ್ನು ನಡೆಸಿ, MV ರುಯೆನ್ ಹಡಗುನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೊಮಾಲಿಯಾದಿಂದ ಪೂರ್ವಕ್ಕೆ 260 ನಾಟಿಕಲ್ ಮೈಲಿ (ಎನ್‌ಎಂ) ದೂರದಲ್ಲಿ ಹಡಗನ್ನು ತಡೆಹಿಡಿಯಲು ಐಎನ್‌ಎಸ್ ಕೋಲ್ಕತ್ತಾಗೆ ನಿರ್ದೇಶನ ನೀಡಿತ್ತು. ಈ ಮೂಲಕ 35 ಕಡಲ್ಗಳ್ಳರನ್ನು ಪತ್ತೆ ಮಾಡಲಾಗಿತ್ತು.

ವಿಡಿಯೋ ಇಲ್ಲಿದೆ ನೋಡಿ

ಮಾರ್ಚ್ 15 ರಂದು ಐಎನ್‌ಎಸ್ ಕೋಲ್ಕತ್ತಾದಲ್ಲಿ ಎಂವಿ ರುಯೆನ್ ಹಡಗನ್ನು ಪತ್ತೆ ಮಾಡಿ, ಅದರಲ್ಲಿದ್ದ ಜನರನ್ನು ರಕ್ಷಣೆ ಮಾಡಿದೆ. ಇದರ ಜತೆಗೆ ಈ ಹಡಗಿನ ಪತ್ತೆಗಾಗಿ ಬಳಸಿದ್ದ ಭಾರತೀಯ ಡ್ರೋನ್​​ನ್ನು ಕಡಲ್ಗಳ್ಳರು ಹೊಡೆದುರುಳಿಸಿದರು. ಇನ್ನು ಈ ರಕ್ಷಣಾ ಕಾರ್ಯಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಇದೀಗ ಬಂಧನವಾಗಿರುವ 35 ಕಡಲ್ಗಳ್ಳರನ್ನು ಮುಂಬೈಗೆ ತರಲಾಗಿದೆ.

ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ ತಿಳಿಸಿದ ಬಲ್ಗೇರಿಯ ಅಧ್ಯಕ್ಷ ರುಮೆನ್ ರಾದೇವ್

ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ಮತ್ತು ಅದರಲ್ಲಿದ್ದ ನಾಗಕರಿಕರ ಸಹಿತ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ. ಈ ಬಗ್ಗೆ ಬಲ್ಗೇರಿಯ ದೇಶದ ಅಧ್ಯಕ್ಷ ರುಮೆನ್ ರಾದೇವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಲ್ಗೇರಿಯದ ಅಧ್ಯಕ್ಷ ರುಮೆನ್ ರಾದೇವ್, 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು “ರುಯೆನ್” ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತದ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳತನ, ಭಯೋತ್ಪಾದನೆ ಎದುರಿಸಲು ಭಾರತ ಬದ್ಧ: ಪ್ರಧಾನಿ ಮೋದಿ

ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಪ್ರಮುಖ ಕ್ರಮ ತೆಗೆದುಕೊಂಡು ಭಾರತೀಯ ನೌಕಾಪಡೆ ಹಾಗೂ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ತಿಳಿಸಿದ ಬಲ್ಗೇರಿಯ ಅಧ್ಯಕ್ಷ ರುಮೆನ್ ರಾದೇವ್ ಅವರನ್ನು ಹೇಳಿಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದರು ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬದ್ಧತೆವಾಗಿದೆ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ