ನವದೆಹಲಿ, ಆಗಸ್ಟ್ 30: ಭಾರತದ ಸುದ್ದಿ ಮಾಧ್ಯಮ ಕ್ಷೇತ್ರದ ಅತಿದೊಡ್ಡ ಸಂಘಟನೆಯಾದ ನ್ಯೂಸ್ ಬ್ರಾಡ್ಕ್ಯಾಸ್ಟರ್ಸ್ ಫೆಡರೇಶನ್ (ಎನ್ಬಿಎಫ್) ಪರವಾಗಿ ಆರ್ನಾಬ್ ಗೋಸ್ವಾಮಿ ನೇತೃತ್ವದ ನಿಯೋಗವೊಂದು ಆಗಸ್ಟ್ 29ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ನವದೆಹಲಿಯ ಲೋಕ ಕಲ್ಯಾಣ್ ಮಾರ್ಗ್ನಲ್ಲಿರುವ ಪ್ರಧಾನಿಗಳ ನಿವಾಸದಲ್ಲಿ ನಡೆದ ಈ ಭೇಟಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಡಾ. ಅಶ್ವಿನಿ ವೈಷ್ಣವ್ ಕೂಡ ಇದ್ದರು. ಈ ನಿಯೋಗದಲ್ಲಿ ಟಿವಿ9 ನೆಟ್ವರ್ಕ್ನ ಸಿಇಒ ಬರುಣ್ ದಾಸ್ ಕೂಡ ಇದ್ದರು.
ಎನ್ಬಿಎಫ್ನ ಈ ನಿಯೋಗವು ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಮತ್ತು ಅವಕಾಶಗಳ ಬಗ್ಗೆ ಪ್ರಧಾನಿಗಳ ಗಮನಕ್ಕೆ ತರಲಾಯಿತು. ಒಂದು ಗಂಟೆಯ ಈ ಭೇಟಿಯ ವೇಳೆ ಪತ್ರಕರ್ತರ ಮಾತುಗಳನ್ನು ಪ್ರಧಾನಿಗಳು ಕುತೂಹಲದಿಂದ ಆಲಿಸಿದ್ದು ವಿಶೇಷ.
ಸುದ್ದಿ ಪ್ರಸಾರಕರ ಒಕ್ಕೂಟದ ಈ ನಿಯೋಗದಲ್ಲಿ ರಾಷ್ಟ್ರಾದ್ಯಂತ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳಿದ್ದರು. ಪ್ರಾದೇಶಿಕ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳ ಮುಖ್ಯಸ್ಥರಿದ್ದರು. ಭಾರತದ ಪ್ರಜಾತಂತ್ರೀಯ ಮೌಲ್ಯಗಳನ್ನು ಮಾಧ್ಯಮಗಳು ಎತ್ತಿ ಹಿಡಿಯುವ ಗುರುತರ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಿಷ್ಕರ್ಷೆಗಳಾಗಿವೆ. ಇದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪ್ರಧಾನಿಗಳ ಭೇಟಿ ಮಾಡಲಾಗಿದೆ.
ಪ್ರಧಾನಿ ಭೇಟಿಗೂ ಮುನ್ನ ಎನ್ಬಿಎಫ್ನ ಈ ನಿಯೋಗವು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿತ್ತು. ಸ್ವತಂತ್ರ ಸುದ್ದಿ ಪ್ರಸಾರಕರಿಗೆ ಇರುವ ಸಮಸ್ಯೆಗಳನ್ನು ಸಚಿವರ ಬಳಿ ನಿವೇದಿಸಲಾಯಿತು ಎನ್ನಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದೊಂದಿಗೆ ನಿರಂತರ ಮಾತುಕತೆಯ ಸಮಯ ಕೊನೆಗೊಂಡಿದೆ: ಎಸ್ ಜೈಶಂಕರ್
ನ್ಯೂಸ್ ಬ್ರಾಡ್ಕ್ಯಾಸ್ಟರ್ಸ್ ಫೆಡರೇಶನ್ನ ಸಂಸ್ಥಾಪಕರು ಮತ್ತು ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಛೇರ್ಮನ್ ಅರ್ನಾಬ್ ಗೋಸ್ವಾಮಿ ಅವರು ಪ್ರಧಾನಿ ಭೇಟಿ ಮಾಡಿದ ನಿಯೋಗದ ಅಧ್ಯಕ್ಷರಾಗಿದ್ದರು. ದೇಶದ 25 ರಾಜ್ಯಗಳ 14ಕ್ಕೂ ಹೆಚ್ಚು ಭಾಷೆಗಳ 70ಕ್ಕೂ ಹೆಚ್ಚು ಸುದ್ದಿ ಪ್ರಸಾರಕರು ಇರುವ ದೊಡ್ಡ ಸಂಘಟನೆಯಾಗಿದೆ ಎನ್ಬಿಎಫ್.
ಟಿವಿ9 ಗ್ರೂಪ್ನ ಎಂಡಿ ಮತ್ತು ಸಿಇಒ ಬರುಣ್ ದಾಸ್, ಪ್ರೈಡ್ ಈಸ್ಟ್ ಎಂಟರ್ಟೈನ್ಮೆಂಟ್ಸ್ನ ಛೇರ್ಮನ್ ರಿನಿಕಿ ಭುಯನ್ ಶರ್ಮಾ, ಐಟಿವಿ ನೆಟ್ವರ್ಕ್ನ ಸಂಸ್ಥಾಪಕ ಕಾರ್ತಿಕೇಯ ಶರ್ಮಾ, ಪುದಿಯತಲೈಮುರೈ ಮತ್ತು ವಿ6 ನ್ಯೂಸ್ ವಾಹಿನಿಗಳ ಸಿಇಒ ಶಂಕರ್ ಬಾಲಾ, ಪ್ರಾಗ್ ನ್ಯೂಸ್ನ ಸಂಜೀವ್ ನರೇನ್, ಇನ್ಸೈಟ್ ಮೀಡಿಯಾ ಸಿಟಿ ಎಂಡಿ ಶ್ರೀಕಂಡನ್ ನಾಯರ್, ನ್ಯೂಸ್7 ತಮಿಳ್ನ ಎಂಡಿ ಸುಬ್ರಮಣಿಯಂ, ಟಿವಿ5ನ ಅನಿಲ್ ಸಿಂಗ್, ಎನ್ಬಿಎಫ್ ಮಹಾಕಾರ್ಯದರ್ಶಿ ಜೈ ಕೃಷ್ಣ ಮೊದಲಾದವರು ನಿಯೋಗದಲ್ಲಿ ಇದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ