ಗೃಹ ಸಚಿವ ಅಮಿತ್ ಶಾ ವರ್ಚ್ಯುಯಲ್ ಸಮ್ಮುಖದಲ್ಲಿ ಎನ್ ಸಿ ಬಿ 30,000 ಕೇಜಿ ನಿಷೇಧಿತ ಪದಾರ್ಥಗಳನ್ನು ಸುಟ್ಟು ಭಸ್ಮಮಾಡಿತು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2022 | 6:53 PM

ಡ್ರಗ್ಸ್ ಯುವಜನಾಂಗದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿ ಗೆದ್ದಲು ಹುಳುವಿನ ಹಾಗೆ ಅವರ ಬದುಕನ್ನು ನಾಶ ಮಾಡುತ್ತಾ ಹೋಗುತ್ತದೆ ಎಂದು ಹೇಳಿದ ಶಾ, ಈ ಪೀಡೆಯನ್ನು ತೊಲಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

ಗೃಹ ಸಚಿವ ಅಮಿತ್ ಶಾ ವರ್ಚ್ಯುಯಲ್ ಸಮ್ಮುಖದಲ್ಲಿ ಎನ್ ಸಿ ಬಿ 30,000 ಕೇಜಿ ನಿಷೇಧಿತ ಪದಾರ್ಥಗಳನ್ನು ಸುಟ್ಟು ಭಸ್ಮಮಾಡಿತು
ಅಮಿತ್ ಶಾ, ಕೇಂದ್ರ ಗೃಹ ಸಚಿವ
Follow us on

ದೆಹಲಿ, ಚೆನ್ನೈ, ಗುವಹಾಟಿ ಮತ್ತು ಕೊಲ್ಕತ್ತಾ ಮೊದಲಾದ 4 ನಗರಗಳಲ್ಲಿ ಸುಮಾರು 30,000 ಕೇಜಿಗಳಷ್ಟು ನಿಷೇಧಿತ ಪದಾರ್ಥಗಳನ್ನು ಚಂಡೀಗಡ್ ನಲ್ಲಿದ್ದ ಗೃಹ ಸಚಿವ ಅಮಿತ್ ಶಾ ಅವರ ವರ್ಚ್ಯಯುಲ್ ಸಮ್ಮುಖದಲ್ಲಿ ಮಾದಕ ವಸ್ತು ನಿಯ್ಯಂತ್ರಣ ಬ್ಯುರೋ ಶನಿವಾರ ಕೊಳ್ಳಿಯಿಟ್ಟು ಭಸ್ಮ ಮಾಡಿತು.

ಟ್ರೈಸಿಟಿಯಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಮೇಲಿನ ರಾಷ್ಟ್ರೀಯ ಸಮಾವೇಶವೊಂದರಲ್ಲಿ ಕೇಂದ್ರ ಗೃಹ ಸಚಿವ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಸಚಿವರು, ‘ಡ್ರಗ್ಸ್ ಕಳ್ಳಸಾಗಣೆ ಸಮಾಜಕ್ಕೆ ಪಿಡುಗಾಗಿದೆ. ಪ್ರಗತಿಪಥದಲ್ಲಿರುವ ಯಾವುದೇ ದೇಶ ಡ್ರಗ್ಸ್ ಕಳ್ಳಸಾಗಣೆಯನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಇದನ್ನು ಹತ್ತಿಕ್ಕುವ ಮೂಲಕ ನಮ್ಮ ಮುಂದಿನ ಪೀಳಿಗೆಯನ್ನು ಸಂರಕ್ಷಿಸಬೇಕಿದೆ,’ ಎಂದರು.

ಡ್ರಗ್ಸ್ ಯುವಜನಾಂಗದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿ ಗೆದ್ದಲು ಹುಳುವಿನ ಹಾಗೆ ಅವರ ಬದುಕನ್ನು ನಾಶ ಮಾಡುತ್ತಾ ಹೋಗುತ್ತದೆ ಎಂದು ಹೇಳಿದ ಶಾ, ಈ ಪೀಡೆಯನ್ನು ತೊಲಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.

ಡ್ರಗ್ಸ್ ಹಾವಳಿ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಶಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಮಾದಕ ದ್ರವ್ಯಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದೆ ಮತ್ತು ಅದರ ಫಲಿತಾಂಶ ಎಲ್ಲರ ಮುಂದಿದೆ ಎಂದು ಹೇಳಿದರು. ‘2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಕೂಡಲೇ, ಭಾರತ ಸರ್ಕಾರವು ಡ್ರಗ್ಸ್ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿತು’ ಎಂದು ಅವರು ಹೇಳಿದರು.

ಡ್ರಗ್ಸ್ ಮೂಲಕ ಉತ್ಪತ್ತಿಯಾಗುವ ಕೊಳಕು ಹಣವನ್ನು ಭಾರತದ ವಿರುದ್ಧ ನಡೆಸುವ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ,’ ಎಂದು ಶಾ ಹೇಳಿದರು.

‘ಡ್ರಗ್ಸ್ ಸೇವೆನೆ ಅದರ ಚಟಕ್ಕೆ ಬಿದ್ದ ವ್ಯಕ್ತಿ ಮಾತ್ರವಲ್ಲದೆ ಸಮಾಜ, ಆರ್ಥಿಕತೆ ಮತ್ತು ರಾಷ್ಟ್ರದ ಭದ್ರತೆ ಮೇಲೂ ಪರಿಣಾಮ ಬೀರುತ್ತದೆ. ನಾವಿದನ್ನು ಬೇರು ಸಮೇತ ಕಿತ್ತುಹಾಕಬೇಕು,’ ಎಂದು ಶಾ ಹೇಳಿದರು.

ಪ್ರಧಾನಿ ಮೋದಿಯವರು ಕರೆ ನೀಡಿರುವ ಆಜಾದಿ ಕಾ ಅಮೃತ್ ಮಹೋತ್ಸವ್  ಅಂಗವಾಗಿ ಎನ್ ಸಿ ಬಿ ಡ್ರಗ್ಸ್ ನಾಶಮಾಡುವ ಅಭಿಯಾನವನ್ನು ಜೂನ್ 1 ರಂದು ಆರಂಭಿಸಿತು. ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಗೌರವಾರ್ಥ ಎನ್ ಸಿ ಬಿ 75,000 ಕೆಜಿ ನಿಷೇಧಿತ ಪದಾರ್ಥಗಳನ್ನು ನಾಶಮಾಡುವ ಪಣತೊಟ್ಟಿದೆ.

Published On - 6:53 pm, Sat, 30 July 22