ಎನ್‌ಸಿಸಿ ವಿಶ್ವದ ಅತಿದೊಡ್ಡ ಸಮವಸ್ತ್ರಧಾರಿ ಯುವ ಸಂಘಟನೆಯಾಗಿದೆ; ಪ್ರಧಾನಿ ಮೋದಿ
ದೇಶದ ಯುವಕರು 'ವಿಕಸಿತ ಭಾರತ'ದ ಉದ್ದೇಶದ ಮೇಲೆ ಗಮನಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ದೇಶದ ಯುವಕರನ್ನು ಒತ್ತಾಯಿಸಿದ್ದಾರೆ. ಏಕೆಂದರೆ, ಇದು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಗಣನೀಯ ದೇಶವಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಸೋಮವಾರ) ದೆಹಲಿಯ ಕರಿಯಪ್ಪ ಮೈದಾನದಲ್ಲಿ ನಡೆದ ಎನ್‌ಸಿಸಿ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತದ ಯುವಕರ ಕೊಡುಗೆ ಇಲ್ಲದೆ ಪ್ರಪಂಚದಾದ್ಯಂತ ಯಾವುದೇ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಕಳೆದ 1 ದಶಕದಲ್ಲಿ ಭಾರತ ದೇಶದ ಯುವಕರು ಎದುರಿಸುತ್ತಿರುವ ಅಡೆತಡೆಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಸರ್ಕಾರ ಎನ್‌ಸಿಸಿಯ ಅಭಿವೃದ್ಧಿಯತ್ತ ಕೆಲಸ ಮಾಡಿದೆ ಎಂದು ನನಗೆ ತೃಪ್ತಿ ಇದೆ. ಎನ್‌ಸಿಸಿ ಕೆಡೆಟ್‌ಗಳು ಸುಮಾರು 170 ಗಡಿ ಪ್ರದೇಶಗಳನ್ನು ತಲುಪಿದ್ದಾರೆ, ಇದು ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಪ್ರಯೋಜನವನ್ನು ನೀಡಿದೆ. ನಮ್ಮ ಗಡಿ ಪ್ರದೇಶಗಳು ಮತ್ತು ಸಮುದ್ರದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಎನ್‌ಸಿಸಿಯನ್ನು ವಿಸ್ತರಿಸಲಾಗಿದೆ. ಎನ್‌ಸಿಸಿ 170ಕ್ಕೂ ಹೆಚ್ಚು ಗಡಿ ತಾಲೂಕುಗಳು ಮತ್ತು ಸುಮಾರು 100 ಕರಾವಳಿ ತಾಲೂಕುಗಳನ್ನು ತಲುಪಿದೆ. 2014ರಲ್ಲಿ ಎನ್‌ಸಿಸಿ ಕೆಡೆಟ್‌ಗಳ ಸಂಖ್ಯೆ ಸುಮಾರು 14 ಲಕ್ಷವಾಗಿತ್ತು. ಇಂದು ಈ ಸಂಖ್ಯೆ 20 ಲಕ್ಷವನ್ನು ತಲುಪಿದೆ. ಅದರಲ್ಲಿ 8 ಲಕ್ಷಕ್ಕೂ ಹೆಚ್ಚು ಹುಡುಗಿಯರಿದ್ದಾರೆ. ಎನ್‌ಸಿಸಿ ವಿಶ್ವದ ಅತಿದೊಡ್ಡ ಸಮವಸ್ತ್ರಧಾರಿ ಯುವ ಸಂಘಟನೆಯಾಗಿದೆ ಎಂದು ಮೋದಿ ಹೇಳಿದ್ದಾರೆ.
VIDEO | Prime Minister Narendra Modi (@narendramodi) says, “The time when India got Independence, the formation of NCC also began at that time. In the 75 years of the Republic, India’s Constitution has consistently inspired the country with democratic values and emphasised the… pic.twitter.com/rdd0mNRMDI
— Press Trust of India (@PTI_News) January 27, 2025
ಇದನ್ನೂ ಓದಿ: ರಕ್ಷಣಾ, ವ್ಯಾಪಾರ ಸಂಬಂಧ ಗಟ್ಟಿಗೊಳಿಸಲು ಒಪ್ಪಿಗೆ; ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೊ ಜೊತೆ ಮೋದಿ ಮಾತುಕತೆ
#WATCH | Prime Minister Narendra Modi inspects the annual NCC PM rally at Cariappa Parade Ground in Delhi. pic.twitter.com/e2qgBNitbZ
— ANI (@ANI) January 27, 2025
ಇದೇ ವೇಳೆ ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ ಪ್ರಧಾನಿ ಮೋದಿ, “ಒಂದು ಚುನಾವಣೆ ಒಂದು ರಾಷ್ಟ್ರ” ಎಂಬ ಚರ್ಚೆಯನ್ನು ಮುಂದುವರಿಸಲು ಎನ್‌ಸಿಸಿ, ಎನ್‌ಎಸ್‌ಎಸ್ ಕೆಡೆಟ್‌ಗಳು ಮತ್ತು ಯುವಕರನ್ನು ಒತ್ತಾಯಿಸಿದರು. ಏಕೆಂದರೆ ಅದು ಯುವಕರ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.
#WATCH | Prime Minister Narendra Modi addresses the annual NCC PM Rally at the Cariappa Parade Ground, in Delhi.
(Source: DD News) pic.twitter.com/0cCl7ExL2O
— ANI (@ANI) January 27, 2025
“ಪ್ರತಿ ತಿಂಗಳು ಚುನಾವಣೆಗಳು ನಡೆದರೆ, ವಿದ್ಯಾರ್ಥಿಗಳು ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಹೆಚ್ಚು ಸಮಯ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಒಂದೇ ಬಾರಿ ಚುನಾವಣೆ ನಡೆಯುವುದರಿಂದ ಸಮಯದ ಉಳಿತಾಯವಾಗಲಿದೆ” ಎಂದು ಅವರು ಹೇಳಿದ್ದಾರೆ.
#WATCH | Addressing the annual NCC PM Rally at the Cariappa Parade Ground in Delhi, Prime Minister Narendra Modi says, “Today, India holds the biggest elections in the world. But in India, elections keep happening after every few months. For a very long time after Independence,… pic.twitter.com/dI43cFueZk
— ANI (@ANI) January 27, 2025
ಕಳೆದ ದಶಕಗಳಲ್ಲಿ 1.5 ಲಕ್ಷ ಯುನಿಕಾರ್ನ್‌ಗಳು ಮತ್ತು ಸ್ಟಾರ್ಟ್-ಅಪ್‌ಗಳು ಹುಟ್ಟಿಕೊಂಡಿವೆ. ಇದು ದೇಶದಲ್ಲಿ ಉದ್ಯಮಶೀಲ ವಲಯವನ್ನು ಉತ್ತೇಜಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ಪ್ರಾಮುಖ್ಯತೆಗೆ ಏರಲು ಸಹಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ