AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಕಾಶಿಯಲ್ಲಿ ಬೆಂಕಿ ಅವಘಡ; ಓರ್ವ ಮಹಿಳೆ ಸಾವು, 9 ಮನೆಗಳು ಸುಟ್ಟು ಭಸ್ಮ

ಉತ್ತರಾಖಂಡದ ಉತ್ತರಕಾಶಿಯ ಸಾವ್ನಿ ಗ್ರಾಮದಲ್ಲಿ ಸಂಭವಿಸಿದ ಭಾರಿ ಬೆಂಕಿ ಅನಾಹುತದಲ್ಲಿ 9 ಮನೆಗಳು ಸುಟ್ಟು ಭಸ್ಮವಾಗಿವೆ. 25 ಕುಟುಂಬಗಳು ನಿರಾಶ್ರಿತರಾಗಿವೆ. ಈ ದುರಂತದಲ್ಲಿ 76 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಕಿ ಆರಿಸಲು ಹಲವು ಗಂಟೆಗಳು ಬೇಕಾಯಿತು. 2018ರಲ್ಲಿ ಸಾವ್ನಿ ಗ್ರಾಮದಲ್ಲಿ ಇದೇ ರೀತಿಯ ಭಾರಿ ಬೆಂಕಿ ಸಂಭವಿಸಿದ್ದು, 39 ಮನೆಗಳು ಮತ್ತು 100 ಹಸುಗಳು ಸುಟ್ಟುಹೋಗಿತ್ತು.

ಉತ್ತರಕಾಶಿಯಲ್ಲಿ ಬೆಂಕಿ ಅವಘಡ; ಓರ್ವ ಮಹಿಳೆ ಸಾವು, 9 ಮನೆಗಳು ಸುಟ್ಟು ಭಸ್ಮ
Uttarkashi Fire Accident
ಸುಷ್ಮಾ ಚಕ್ರೆ
|

Updated on: Jan 27, 2025 | 4:56 PM

Share

ಉತ್ತರಾಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಬೆಂಕಿ ಅನಾಹುತದಲ್ಲಿ 9 ಮನೆಗಳು ಸುಟ್ಟು ಭಸ್ಮವಾಗಿದ್ದು, 25 ಕುಟುಂಬಗಳು ನಿರಾಶ್ರಿತರಾಗಿವೆ. 25 ಕುಟುಂಬಗಳು ನಿರಾಶ್ರಿತರಾಗಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಕಿ ಎಷ್ಟು ತೀವ್ರವಾಗಿತ್ತು ಎಂದರೆ ಅದನ್ನು ನಂದಿಸಲು ಹಲವು ಗಂಟೆಗಳು ಬೇಕಾಯಿತು. ಬೆಂಕಿ ಅವಘಡದಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ರೀತಿಯ ಸಹಾಯದ ಭರವಸೆ ನೀಡಲಾಗಿದೆ.

ಮೋರಿ ತಹಸಿಲ್ ಪ್ರಧಾನ ಕಚೇರಿಯಿಂದ 45 ಕಿ.ಮೀ. ದೂರದಲ್ಲಿರುವ ಸಾವ್ನಿ ಗ್ರಾಮದಲ್ಲಿ ಭಾನುವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 9 ಕಟ್ಟಡಗಳು ಸುಟ್ಟು ಬೂದಿಯಾಗಿವೆ. ಈ ಎಲ್ಲ ಕಟ್ಟಡಗಳು ದೇವದಾರು ಮತ್ತು ಪೈನ್ ಮರದಿಂದ ಮಾಡಲ್ಪಟ್ಟಿದ್ದು, ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದೆ. ಈ ಕಟ್ಟಡಗಳಲ್ಲಿ ಇರಿಸಲಾಗಿದ್ದ ಎಲ್ಲಾ ಸರಕುಗಳು ಸಹ ಸುಟ್ಟು ಭಸ್ಮವಾಗಿವೆ. ಬೆಂಕಿಯಲ್ಲಿ ಸುಟ್ಟು 76 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡ ಪ್ರಕರಣ: ಗಾಯಾಳುಗಳ ಚಿಕಿತ್ಸೆಗೆ ಚರ್ಮದ ಕೊರತೆ

ಗ್ರಾಮಸ್ಥರು ಸಾಕಷ್ಟು ಶ್ರಮವಹಿಸಿ ಬೆಂಕಿಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ರಾತ್ರಿ 3 ಗಂಟೆಯ ಹೊತ್ತಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಯಿತು. ಬೆಂಕಿಯನ್ನು ನಂದಿಸುವಾಗ ಕೆಲವು ಗ್ರಾಮಸ್ಥರು ಸುಟ್ಟಗಾಯಗಳಿಗೆ ಒಳಗಾಗಿದ್ದರು. 2018ರಲ್ಲಿ ಸಾವ್ನಿ ಗ್ರಾಮದಲ್ಲಿ ಇದೇ ರೀತಿಯ ಭಾರಿ ಬೆಂಕಿ ಸಂಭವಿಸಿದ್ದು, 39 ಮನೆಗಳು ಮತ್ತು 100 ಹಸುಗಳು ಸುಟ್ಟುಹೋಗಿತ್ತು.

ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸಾವ್ನಿಯಲ್ಲಿರುವ ಕಿತಾಬ್ ಸಿಂಗ್ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಮನೆ ಮರದಿಂದ ಮಾಡಲ್ಪಟ್ಟಿದ್ದರಿಂದ, ಬೆಂಕಿ ಬೇಗನೆ ಹರಡಿತು. ಬೆಂಕಿ ಒಂದು ಮನೆಯಿಂದ ಮತ್ತೊಂದು ಮನೆಗೆ ಹರಡಲು ಪ್ರಾರಂಭಿಸಿದಾಗ, ಜಖೋಲ್ ಗ್ರಾಮದ ಗ್ರಾಮಸ್ಥರು ರಾತ್ರಿ 11 ಗಂಟೆ ಸುಮಾರಿಗೆ ಜಿಲ್ಲಾ ವಿಪತ್ತು ನಿರ್ವಹಣೆ ಮತ್ತು ಆಡಳಿತಕ್ಕೆ ಅದರ ಬಗ್ಗೆ ಮಾಹಿತಿ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ