ದೆಹಲಿ: ದೇಶದ 15 ನೇ ರಾಷ್ಟ್ರಪತಿಯಾಗಿ (President of India) ದ್ರೌಪದಿ ಮುರ್ಮು (Draupadi Murmu)
ಆಯ್ಕೆ ಘೋಷಣೆಯಾಗುತ್ತಿದ್ದಂತೆ ದೇಶದಾದ್ಯಂತ ಸಂಭ್ರಮಾಚರಣೆ ಶುರುವಾಗಿದೆ. ಬಿಜೆಪಿ(BJP) ಕಚೇರಿಗಳಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರಿದ ಎರಡನೇ ಮಹಿಳೆ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರವಾಗಿದ್ದಾರೆ. ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುರ್ಮು ಒಡಿಶಾ ಮೂಲದವರು. ಜಾರ್ಖಂಡ್ ನ ಮಾಜಿ ಗವರ್ನರ್ ಆಗಿದ್ದ ಅವರು ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಸರ್ಕಾರವಿದ್ದಾಗ ರಾಜ್ಯ ಸಚಿವೆಯಾಗಿದ್ದರು.
ರಾಷ್ಟ್ರ ನಾಯಕರಿಂದ ಅಭಿನಂದನೆ
ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿ ಹೊಸ ದಾಖಲೆ ಬರೆದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು. ಸಮಾಜದ ಕೆಳಸ್ತರದಿಂದ ಬಂದು ರಾಷ್ಟ್ರದ ಪರಮೋನ್ನತ ಹುದ್ದೆಯನ್ನು ಅವರು ಅಲಂಕರಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ ಎಂದು ಕರ್ನಾಟಕ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ನಿರ್ಬಿಢೆ ಮತ್ತು ಯಾರ ಪರವೂ ವಹಿಸದೆ ಅವರು ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಲಿ ನಾನು ಮತ್ತು ಭಾರತದ ಜನರು ಆಶಿಸುತ್ತೇನೆ. ಆಕೆಗೆ ಶುಭಹಾರೈಕೆಗಳು ಎಂದು ಯಶವಂತ ಸಿನ್ಹಾ ಹೇಳಿದ್ದಾರೆ.
ದೇಶದ 15ನೇ ರಾಷ್ಟ್ರಪತಿ ಆಗಿರುವ ಒಡಿಶಾದ ಮಗಳಿಗೆ ಅಭಿನಂದನೆಗಳು. ದೇಶದ ಅತ್ಯುನ್ನತ ಹುದ್ದೆಗೇರಿರುವುದಕ್ಕೆ ಒಡಿಶಾದ ಜನರ ಹೆಮ್ಮೆಯ ಕ್ಷಣಗಳಿವು- ಒಡಿಶಾ ಸಿಎಂ ನವೀನ್ ಪಟ್ನಾಯಿಕ್
ಮುರ್ಮು ಅವರನ್ನು ಬೆಂಬಲಿಸಿದ ಎಲ್ಲ ಸಂಸದ, ಶಾಸಕರಿಗೆ ಧನ್ಯವಾದಗಳು. ಆಕೆಯ ಭರ್ಜರಿ ಗೆಲುವು ನಮ್ಮ ಪ್ರಜಾತಂತ್ರಕ್ಕೆ ಶುಭಸೂಚನೆ- ಮೋದಿ
ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು-ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್
ನಾನು ಗೌರವಾನ್ವಿತ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಲು ಬಯಸುತ್ತೇನೆ. ನಮ್ಮ ಸಂವಿಧಾನದ ಆದರ್ಶಗಳನ್ನು ರಕ್ಷಿಸಲು ಮತ್ತು ನಮ್ಮ ಪ್ರಜಾಪ್ರಭುತ್ವದ ಪಾಲಕರಾಗಿ, ವಿಶೇಷವಾಗಿ ರಾಷ್ಟ್ರವು ಹಲವಾರು ಭಿನ್ನಾಭಿಪ್ರಾಯಗಳಿಂದ ಬಳಲುತ್ತಿರುವಾಗ ರಾಷ್ಟ್ರದ ಮುಖ್ಯಸ್ಥರಾಗಿ ದೇಶವು ನಿಮ್ಮನ್ನು ಪ್ರಾಮಾಣಿಕವಾಗಿ ಎದುರು ನೋಡುತ್ತದೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
I would like to congratulate Hon’ble Presidential Elect Smt Draupadi Murmu.
The country will sincerely look up to you as the Head of State to protect the ideals of our Constitution & be the custodian of our democracy, especially when nation is plagued with so many dissensions.
— Mamata Banerjee (@MamataOfficial) July 21, 2022
ದ್ರೌಪದಿ ಮುರ್ಮುಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅಭಿನಂದನೆ
Bihar Chief Minister Nitish Kumar extends greetings to the new President of the country, #DroupadiMurmu and congratulates her on her election.
(File photo) pic.twitter.com/M5F9CMjtW3
— ANI (@ANI) July 21, 2022
ಸರಳ ಮತ್ತು ವಿನಮ್ರರಾಗಿರುವ ಬುಡಕಟ್ಟು ವ್ಯಕ್ತಿಯೊಬ್ಬರು ಭಾರತದ ರಾಷ್ಟ್ರಪತಿಯಾಗುವ ಗೌರವವನ್ನು ಪಡೆಯುತ್ತಿದ್ದಾರೆ. ದ್ರೌಪದಿ ಮುರ್ಮು ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
Uttarakhand | A tribal person with simple and humble beginnings is getting the honour of becoming the President of India. The election of Droupadi Murmu has further bolstered the faith of the public in democracy and the Constitution: CM Pushkar Singh Dhami pic.twitter.com/i6mFLxlnFd
— ANI UP/Uttarakhand (@ANINewsUP) July 21, 2022
ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಗೌರವಾನ್ವಿತ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಅರವಿಂದ ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ದ್ರೌಪದಿ ಮುರ್ಮು ಜಿ ಅವರು ಭಾರತದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಅಭಿನಂದನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Published On - 8:46 pm, Thu, 21 July 22