ಯುಎಇ, ಕತಾರ್ ಇಂದು ಭಾರತವನ್ನು ಗೌರವಿಸುತ್ತಿದೆ, ಇದು ಪ್ರತಿಯೊಬ್ಬರಿಗೂ ಸಂದ ಮನ್ನಣೆ: ಮೋದಿ

ಹರ್ಯಾಣದ ರೇವಾರಿಯಲ್ಲಿ ಶುಕ್ರವಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಬೇಕಿತ್ತು. ಇಂದು ಇದು ನಿಜವಾಗಿದೆ, ಕಾಂಗ್ರೆಸ್ ಎಂದಿಗೂ ದೇವಾಲಯವನ್ನು ಬಯಸುವುದಿಲ್ಲ ಏಕೆಂದರೆ ಅವರಿಗೆ ಭಗವಾನ್ ರಾಮನು ಕಾಲ್ಪನಿಕನಾಗಿದ್ದಾನೆ. ಆದರೆ ಇಂದು ಅವರೂ ಜೈ ಸಿಯಾ ರಾಮ್ ಹೇಳುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದನ್ನು ಕಾಂಗ್ರೆಸ್ ತಡೆದಿದೆ ಎಂದಿದ್ದಾರೆ

ಯುಎಇ, ಕತಾರ್ ಇಂದು ಭಾರತವನ್ನು ಗೌರವಿಸುತ್ತಿದೆ, ಇದು ಪ್ರತಿಯೊಬ್ಬರಿಗೂ ಸಂದ ಮನ್ನಣೆ: ಮೋದಿ
ನರೇಂದ್ರ ಮೋದಿ

Updated on: Feb 16, 2024 | 3:37 PM

ರೇವಾರಿ ಫೆಬ್ರುವರಿ 16: ಹರ್ಯಾಣದ (Haryana) ರೇವಾರಿಯಲ್ಲಿ (Rewari) ಶುಕ್ರವಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಈ ಬಾರಿ ಎನ್‌ಡಿಎ 400 ಸ್ಥಾನಗಳನ್ನು ದಾಟಲಿದೆ, ನಮ್ಮ ಸರ್ಕಾರ ಮೂರನೇ ಅವಧಿಗೆ ಬರಲಿದೆ ಎಂದು ಹೇಳಿದ್ದಾರೆ. ತಮ್ಮ ಇತ್ತೀಚಿನ ಯುಎಇ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಯುಎಇ ಮತ್ತು ಕತಾರ್ ಇಂದು ಭಾರತವನ್ನು ಗೌರವಿಸುತ್ತದೆ. ಈ ಗೌರವ ಪ್ರಧಾನಿಗೆ ಮಾತ್ರವಲ್ಲ, ದೇಶ ಮತ್ತು ಪ್ರತಿಯೊಬ್ಬ ನಾಗರಿಕನಿಗೂ ಸಂದ ಗೌರವವಾಗಿದೆ ಎಂದು ಹೇಳಿದರು.

ದೇಶಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಬೇಕಿತ್ತು. ಇಂದು ಇದು ನಿಜವಾಗಿದೆ, ಕಾಂಗ್ರೆಸ್ ಎಂದಿಗೂ ದೇವಾಲಯವನ್ನು ಬಯಸುವುದಿಲ್ಲ ಏಕೆಂದರೆ ಅವರಿಗೆ ಭಗವಾನ್ ರಾಮನು ಕಾಲ್ಪನಿಕನಾಗಿದ್ದಾನೆ. ಆದರೆ ಇಂದು ಅವರೂ ಜೈ ಸಿಯಾ ರಾಮ್ ಹೇಳುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದನ್ನು ಕಾಂಗ್ರೆಸ್ ತಡೆದಿದೆ. ನಾನು ಅದನ್ನು ರದ್ದುಗೊಳಿಸುತ್ತೇನೆ ಎಂದು ನಾನು ಭರವಸೆ ನೀಡಿದ್ದೆ ಇಂದು ಇದು ಇತಿಹಾಸ” ಎಂದು ಪ್ರಧಾನಿ ಮೋದಿ ಹೇಳಿದರು.


ಈಗ ಎಲ್ಲರೂ ಹೇಳುತ್ತಿದ್ದಾರೆ, 370ನೇ ವಿಧಿಯನ್ನು ತೆಗೆದುಹಾಕಿದ್ದವರು ಚುನಾವಣೆಯಲ್ಲಿ 370 ಸ್ಥಾನಗಳನ್ನು ಪಡೆಯುತ್ತಾರೆ. ಬಿಜೆಪಿ 370 ಸ್ಥಾನಗಳನ್ನು ಪಡೆಯಲಿದೆ ಮತ್ತು ಎನ್‌ಡಿಎ 400 ದಾಟಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕತಾರ್ ಇತ್ತೀಚೆಗೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಬಿಡುಗಡೆ ಮಾಡಿದೆ. ಭಾರತದ ಮನವಿಯನ್ನು ಸ್ವೀಕರಿಸಿದ ಕತಾರ್, ಮಾಜಿ ನಾವಿಕರ ಮರಣದಂಡನೆಯನ್ನು ವಿವಿಧ ಅವಧಿಯ ಜೈಲುಶಿಕ್ಷೆಯಾಗಿ ಪರಿವರ್ತಿಸಲಾಯಿತು. ಕತಾರ್ ಮಾಜಿ ನಾವಿಕರನ್ನು ಬಿಡುಗಡೆ ಮಾಡಿದ ನಂತರ, ನರೇಂದ್ರ ಮೋದಿ ಕತಾರ್‌ಗೆ ಭೇಟಿ ನೀಡಿದರು. ಅಲ್ಲಿ ಮೋದಿ ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ಧನ್ಯವಾದ ತಿಳಿಸಿದ್ದರು.

ಇದನ್ನೂ ಓದಿ: In Pics: ಅಬುಧಾಬಿಯಲ್ಲಿ BAPS ಹಿಂದೂ ದೇಗುಲ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಎಲ್ಲರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ

ಕಾಂಗ್ರೆಸ್‌ನ ಪರಿಸ್ಥಿತಿ ಬಗ್ಗೆ ವಿಷಾದ ವ್ಯಕ್ತಪಡಿಸಿದ ನರೇಂದ್ರ ಮೋದಿ, ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ದಾಖಲೆಯನ್ನು ಹೊಂದಿದೆ. ಇದು ವರ್ಷಗಳಿಂದ ಬದಲಾಗಿಲ್ಲ. ಏಕೆಂದರೆ ನಾಯಕರು ಅವರೇ ಮತ್ತು ಅವರು ಒಂದೇ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. “ಕಾಂಗ್ರೆಸ್ ನಾಯಕರು ಸ್ಟಾರ್ಟಪ್ ಅನ್ನು ಸಹ ನಿಭಾಯಿಸಲು ಸಾಧ್ಯವಿಲ್ಲ ಮತ್ತು ಅವರು ದೇಶವನ್ನು ನಿಭಾಯಿಸಲು ಯೋಚಿಸುತ್ತಾರೆ. ಅವರ ಎಲ್ಲಾ ನಾಯಕರು ಒಬ್ಬೊಬ್ಬರಾಗಿ ಪಕ್ಷವನ್ನು ತೊರೆಯುತ್ತಿದ್ದಾರೆ. ಕಾಂಗ್ರೆಸ್ ವರ್ಷಗಳ ದುರಾಡಳಿತಕ್ಕೆ ವ್ಯತಿರಿಕ್ತವಾಗಿ, ನಾವು ಬಿಜೆಪಿಯ ಉತ್ತಮ ಆಡಳಿತವನ್ನು ಹೊಂದಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.