ದೆಹಲಿ: 1.84 ಕೋಟಿಗೂ ಹೆಚ್ಚು ಡೋಸ್ ಕೊವಿಡ್ -19 ಲಸಿಕೆ ಇನ್ನೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ. ಅದೇ ವೇಳೆ ಆದರೆ ಸುಮಾರು 51 ಲಕ್ಷ ಡೋಸ್ ಮೂರು ದಿನಗಳಲ್ಲಿ ರಾಜ್ಯಗಳಿಗೆ ಪೂರೈಕೆ ಆಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಕೇಂದ್ರವು ಈವರೆಗೆ 20 ಕೋಟಿಗೂ ಹೆಚ್ಚು ಲಸಿಕೆ ಡೋಸ್ ನ್ನು (20,28,09,250) ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ ಎಂದು ಸಚಿವಾಲಯ ಹೇಳಿದೆ. ಶನಿವಾರ ಸಂಜೆ 7 ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ವ್ಯರ್ಥವಾಗಿರುವ ಡೋಸ್ ಸೇರಿದಂತೆ ಮೇ 14 ರವರೆಗೆ ಸರಾಸರಿ ಆಧರಿಸಿ ಲೆಕ್ಕಹಾಕಲಾದ ಒಟ್ಟು ಬಳಕೆ 18,43,67,772 ಡೋಸ್ ಆಗಿದೆ.
1.84 ಕೋಟಿಗಿಂತಲೂ ಹೆಚ್ಚು ಕೊವಿಡ್ ಲಸಿಕೆ ಡೋಸ್ ಗಳು(1,84,41,478) ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಲಭ್ಯವಿದೆ. ಋಣಾತ್ಮಕ ಸಮತೋಲನ ಹೊಂದಿರುವ ರಾಜ್ಯಗಳು ಲಸಿಕೆಗಿಂತ ಹೆಚ್ಚಿನ ಬಳಕೆಯನ್ನು (ವ್ಯರ್ಥ ಸೇರಿದಂತೆ) ತೋರಿಸುತ್ತಿವೆ ಏಕೆಂದರೆ ಅವುಗಳು ಲಸಿಕೆಯನ್ನು ಸಮನ್ವಯಗೊಳಿಸಲಿಲ್ಲ. 50,95,640 ಲಸಿಕೆ ಡೋಸ್ ಗಳು ಸಿಗಲಿದ್ದು ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅದನ್ನು ಸ್ವೀಕರಿಸಲಿವೆ ಎಂದು ಸಚಿವಾಲಯ ಹೇಳಿದೆ.
ಲಸಿಕೆ ವಿತರಣೆಯು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಯ (ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೊವಿಡ್ ಸೂಕ್ತ ವರ್ತನೆ ಸೇರಿದಂತೆ) ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಒಂದು ಅವಿಭಾಜ್ಯ ಅಂಗವಾಗಿದೆ.
18.44 Crore #COVID19 Vaccine doses consumed in India since the beginning of the #LargestVaccineDrive pic.twitter.com/SYKCH1tcp1
— Ministry of Health (@MoHFW_INDIA) May 16, 2021
ಕೊವಿಡ್ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡುವ ಮೂಲಕ ಕೇಂದ್ರವು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಬೆಂಬಲಿಸುತ್ತಿದೆ.ಅದರ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.
State-wise details of Total Confirmed #COVID19 cases (till 16 May, 2021, 8 AM)
➡️States with 1-60000 confirmed cases
➡️States with 60001-680000 confirmed cases
➡️States with 680000+ confirmed cases
➡️Total no. of confirmed cases so far #StaySafe pic.twitter.com/JnPWW3b2GB— #IndiaFightsCorona (@COVIDNewsByMIB) May 16, 2021
ಕೊವಿಡ್ ವ್ಯಾಕ್ಸಿನೇಷನ್‌ನ ಉದಾರೀಕರಣ ಮತ್ತು ವೇಗವರ್ಧಿತ ಹಂತ 3 ಕಾರ್ಯತಂತ್ರದ ಅನುಷ್ಠಾನವು ಮೇ 1 ರಿಂದ ಪ್ರಾರಂಭವಾಗಿದೆ, ಇದರ ಭಾಗವಾಗಿ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಣೆ ಆರಂಭಿಸಿದೆ.
ಈ ಕಾರ್ಯತಂತ್ರದ ಅಡಿಯಲ್ಲಿ, ಪ್ರತಿ ತಿಂಗಳು ಒಟ್ಟು ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿ ( CDL) ಅನುಮೋದಿಸಿದ ಯಾವುದೇ ಉತ್ಪಾದಕರು ಉತ್ಪಾದಿಸಿದ ಲಸಿಕೆಯನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತದೆ. ಈ ಲಸಿಕೆಗಳನ್ನು ಕೇಂದ್ರವು ಈ ಹಿಂದೆ ಮಾಡಿದಂತೆ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತದೆ.
ಇದನ್ನೂ ಓದಿ: 2021ರ ಏಪ್ರಿಲ್‌ನಿಂದ ಕೊವಿಡ್‌ಗೆ ಬಲಿಯಾದ ಶಿಕ್ಷಕರು, ಉಪನ್ಯಾಸಕ ಕುರಿತು ವರದಿ ಸಲ್ಲಿಸಲು ಸೂಚಿಸಿದ ಸಚಿವ ಸುರೇಶ್ ಕುಮಾರ್
(Nearly 51 lakh Covid 19 vaccine doses are in the pipeline and will be received by States within the next three day says Union Health Ministry)
Published On - 4:48 pm, Sun, 16 May 21