NEET scam: ಬಿಹಾರದ ‘ಸಾಲ್ವರ್ ಗ್ಯಾಂಗ್’ ಮಾಸ್ಟರ್ ಮೈಂಡ್ ಸಿಕಂದರ್ ಯಾದವೇಂದು ಮಕ್ಕಳು ಎಂಬಿಬಿಎಸ್ ವಿದ್ಯಾರ್ಥಿಗಳು
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವ ಸಾಲ್ವರ್ ಗ್ಯಾಂಗ್ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅತಿಥಿ ಗೃಹದಲ್ಲಿ ಉಳಿದುಕೊಂಡಿದೆ ಎಂದು ಟಿವಿ9 ಭಾರತ್ವರ್ಷ್ ತನಿಖೆಯಿಂದ ತಿಳಿದುಬಂದಿದೆ. ಮೇ 4ರ ರಾತ್ರಿ ಅತಿಥಿ ಗೃಹದ ಕೊಠಡಿ ಸಂಖ್ಯೆ 404ರಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನೀಟ್ ಪತ್ರಿಕೆಯನ್ನು ಮನನ ಮಾಡಿಕೊಳ್ಳುವಂತೆ ಮಾಡಲಾಗಿತ್ತು
ದೆಹಲಿ ಜೂನ್ 19: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- ನೀಟ್ (NEET UG 2024) ಪ್ರಶ್ನೆ ಪತ್ರಿಕೆ ಸೋರಿಕೆ(Paper Leak) ಪ್ರಕರಣದಲ್ಲಿ ಬಿಹಾರದ (Bihar) ‘ಸಾಲ್ವರ್ ಗ್ಯಾಂಗ್’ ಸದಸ್ಯರು ಸೇರಿದಂತೆ ಒಟ್ಟು 14 ಸಹಚರರನ್ನು ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ (EOU) ಬಂಧಿಸಿದೆ. ವರದಿಗಳ ಪ್ರಕಾರ, ನೀಟ್ ಹಗರಣದಲ್ಲಿ ಬಂಧಿತನಾಗಿರುವ ಸಿಕಂದರ್ ಯಾದವೇಂದು ಈ ‘ಸಾಲ್ವರ್ ಗ್ಯಾಂಗ್’ನ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಈ ಸಿಕಂದರ್ ಯಾದವೇಂದು ಅವರ ಮಗ ಮತ್ತು ಮಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಅಳಿಯ ಪ್ರಸ್ತುತ ವೈದ್ಯಕೀಯದಲ್ಲಿ ಪಿಜಿ ಕೋರ್ಸ್‌ಗೆ ದಾಖಲಾಗಿದ್ದಾರೆ.
ಬಿಹಾರದ ಸಮಸ್ತಿಪುರ ನಿವಾಸಿಯಾಗಿರುವ ಸಿಕಂದರ್ ಕೂಡ 3 ಕೋಟಿ ಎಲ್‌ಇಡಿ ಹಗರಣದ ಆರೋಪಿಯಾಗಿದ್ದು, ಜೈಲಿನಲ್ಲಿ ದಿನಗಳನ್ನು ಕಳೆದಿದ್ದರು. ನೀಟ್ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಸಿಕಂದರ್ ಅವರನ್ನು ನಿಯೋಜಿಸಿದ ಪುರಸಭೆಯ ವಸತಿ ಇಲಾಖೆ ಡಣಾಪುರ ಅವರನ್ನು ಅಮಾನತುಗೊಳಿಸಿದೆ.
ಏತನ್ಮಧ್ಯೆ, ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವ ಸಾಲ್ವರ್ ಗ್ಯಾಂಗ್ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅತಿಥಿ ಗೃಹದಲ್ಲಿ ಉಳಿದುಕೊಂಡಿದೆ ಎಂದು ಟಿವಿ9 ಭಾರತ್ವರ್ಷ್ ತನಿಖೆಯಿಂದ ತಿಳಿದುಬಂದಿದೆ. ಮೇ 4ರ ರಾತ್ರಿ ಅತಿಥಿ ಗೃಹದ ಕೊಠಡಿ ಸಂಖ್ಯೆ 404ರಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ನೀಟ್ ಪತ್ರಿಕೆಯನ್ನು ಮನನ ಮಾಡಿಕೊಳ್ಳುವಂತೆ ಮಾಡಲಾಗಿತ್ತು. ಅಂದ ಹಾಗೆ ಸಾಲ್ವರ್ ಗ್ಯಾಂಗ್ ನೀಟ್ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ 30-35 ಲಕ್ಷ ರೂ.ಗೆ ಮಾರಾಟ ಮಾಡಿದೆ.
ಸಚಿವರ ಶಿಫಾರಸಿನ ಮೇರೆಗೆ ಅತಿಥಿ ಗೃಹದಲ್ಲಿ ಕೊಠಡಿ ಸಂಖ್ಯೆ 404 ನೀಡಲಾಗಿದ್ದು, ನೀಟ್ ಹಗರಣದಲ್ಲಿ ರಾಜ್ಯ ಸಚಿವರೊಬ್ಬರ ಕೈವಾಡವಿದೆ ಎಂದು ಟಿವಿ9 ಭಾರತ್ವರ್ಷ್ ಪತ್ತೆ ಹಚ್ಚಿದೆ. ಎನ್‌ಎಚ್‌ಎಐ ಗೆಸ್ಟ್ ಹೌಸ್ ರಿಜಿಸ್ಟರ್‌ನ ಪ್ರಕಾರ, ಕೊಠಡಿ ಸಂಖ್ಯೆ 404 ಅನ್ನು ಸಾಲ್ವರ್ ಗ್ಯಾಂಗ್‌ಗೆ ಒದಗಿಸುವಂತೆ ಸಚಿವರು ಪತ್ರ ಬರೆದಿದ್ದಾರೆ.
ಎನ್‌ಎಚ್‌ಎಐ ಟ್ವೀಟ್
#FactCheck: Some sections of the media have reported that accused related to NEET paper leak case stayed at #NHAI guest house in Patna. NHAI clarifies that it does not have any guest house facility in Patna.
— NHAI (@NHAI_Official) June 19, 2024
ಆದಾಗ್ಯೂ, NHAI ತನ್ನ ಅಧಿಕೃತ ‘X’ ಹ್ಯಾಂಡಲ್‌ನಲ್ಲಿ ಪಾಟ್ನಾದಲ್ಲಿ ಯಾವುದೇ ಅತಿಥಿ ಗೃಹವಿಲ್ಲ ಎಂದು ಉಲ್ಲೇಖಿಸಿದೆ. “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಪಾಟ್ನಾದ NHAI ಅತಿಥಿ ಗೃಹದಲ್ಲಿ ತಂಗಿದ್ದಾರೆ ಎಂದು ಮಾಧ್ಯಮದ ಕೆಲವು ವಿಭಾಗಗಳು ವರದಿ ಮಾಡಿವೆ. ಪಾಟ್ನಾದಲ್ಲಿ ಯಾವುದೇ ಅತಿಥಿ ಗೃಹ ಸೌಲಭ್ಯವನ್ನು ಹೊಂದಿಲ್ಲ ಎಂದು ಎನ್‌ಎಚ್‌ಎಐ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಗ್ರೇಸ್ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಭಾನುವಾರ, ಜೂನ್ 23 ರಂದು ಮರು ಪರೀಕ್ಷೆ ಬರೆಯಲಿದ್ದು ಫಲಿತಾಂಶ ಜೂನ್ 30 ರಂದು ಪ್ರಕಟವಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ