Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪಾಟ್ನಾ ಏಮ್ಸ್‌ನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ

ಈ ವಿದ್ಯಾರ್ಥಿಗಳು ಏಮ್ಸ್ ನಂಥಾ ಪ್ರಮುಖ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಸಾಲ್ವರ್ ಗ್ಯಾಂಗ್ ಅವರನ್ನು ತೊಡಗಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಂಧನದಲ್ಲಿರುವ ನಾಲ್ಕು ವಿದ್ಯಾರ್ಥಿಗಳಲ್ಲಿ ಮೂವರು ಮೂರನೇ ವರ್ಷದವರಾಗಿದ್ದರೆ, ಒಬ್ಬರು ಎರಡನೇ ವರ್ಷದ ವಿದ್ಯಾರ್ಥಿ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪಾಟ್ನಾ ಏಮ್ಸ್‌ನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ
ಸಿಬಿಐ
Follow us
ರಶ್ಮಿ ಕಲ್ಲಕಟ್ಟ
|

Updated on:Jul 18, 2024 | 8:07 PM

ದೆಹಲಿ ಜುಲೈ 18: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ) ಪ್ರಶ್ನೆಪತ್ರಿಕೆ ಸೋರಿಕೆ (NEET UG Paper Leak) ಆರೋಪಕ್ಕೆ ಸಂಬಂಧಿಸಿದಂತೆ ಪಾಟ್ನಾ ಏಮ್ಸ್​​​ನ (AIIMS) ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಸಿಬಿಐ (CBI) ಬಂಧಿಸಿದೆ. “ಸಿಬಿಐ ನಮ್ಮ ಕೆಲವು ವಿದ್ಯಾರ್ಥಿಗಳ ಫೋನ್ ನಂಬರ್ ಮತ್ತು ಫೋಟೋಗಳನ್ನು ಹಂಚಿಕೊಂಡಿದೆ. ನಂತರ ಏಜೆನ್ಸಿಯು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಬಂಧನಕ್ಕೆ ಒಳಪಡಿಸಿತು ಎಂದು ಎಐಐಎಂಎಸ್ ಪಾಟ್ನಾದ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್ ಕೃಷ್ಣ ಪಾಲ್ ಹೇಳಿದ್ದಾರೆ. ವಿದ್ಯಾರ್ಥಿಗಳು ಸಿಬಿಐಗೆ ಸಹಕರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪರಿಹರಿಸಲು ಪೇಪರ್ ಲೀಕ್ ಕಿಂಗ್‌ಪಿನ್ ಸಂಜೀವ್ ಮುಖಿಯಾ ಅವರ ಗ್ಯಾಂಗ್‌ನಿಂದ ತೊಡಗಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

“ಸೋರಿಕೆಯಾದ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಅನ್ನು ಹಜಾರಿಬಾಗ್ ಕೇಂದ್ರದಿಂದ ಮುಖಿಯಾ ಅವರ ಸಾಲ್ವರ್ ಗ್ಯಾಂಗ್‌ನ ಸದಸ್ಯರಿಗೆ ಕಳುಹಿಸಿದ ನಂತರ, ಮೇ 4 ಮತ್ತು ಮೇ 5 ರ ಮಧ್ಯರಾತ್ರಿ ಪಾಟ್ನಾದ ಹೊರವಲಯದಲ್ಲಿರುವ ಖೆಮ್ನಿಚಕ್ ಪ್ಲೇ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳು ಉತ್ತರಗಳನ್ನು ನೆನಪಿಟ್ಟುಕೊಳ್ಳುವ ಪ್ರಶ್ನೆ ಪತ್ರಿಕೆಗೆ ಉತ್ತರ ಕಂಡು ಹಿಡಿಯಲು ಈ ವಿದ್ಯಾರ್ಥಿಗಳನ್ನು ನೇಮಿಸಿರಬಹುದು ಎಂದು ಮೂಲವೊಂದು ತಿಳಿಸಿದೆ. ಮೇ 5 ರಂದು NEET-UG ಪರೀಕ್ಷೆ ನಡೆದಿತ್ತು.

ಸಿಬಿಐ ಎಲ್ಲಾ ನಾಲ್ವರು ವಿದ್ಯಾರ್ಥಿಗಳ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದೆ ಮತ್ತು ಅವರ ಹಾಸ್ಟೆಲ್ ಕೊಠಡಿಗಳನ್ನು ಸಹ ಸೀಲ್ ಮಾಡಿದೆ.

ಈ ವಿದ್ಯಾರ್ಥಿಗಳು ಏಮ್ಸ್ ನಂಥಾ ಪ್ರಮುಖ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಸಾಲ್ವರ್ ಗ್ಯಾಂಗ್ ಅವರನ್ನು ತೊಡಗಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಂಧನದಲ್ಲಿರುವ ನಾಲ್ಕು ವಿದ್ಯಾರ್ಥಿಗಳಲ್ಲಿ ಮೂವರು ಮೂರನೇ ವರ್ಷದವರಾಗಿದ್ದರೆ, ಒಬ್ಬರು ಎರಡನೇ ವರ್ಷದ ವಿದ್ಯಾರ್ಥಿ.

ವಿದ್ಯಾರ್ಥಿಗಳನ್ನು ತನಿಖೆಗೊಳಪಡಿಸಬೇಕು ಎಂದು ಮುಂಚಿತವಾಗಿ ತಿಳಿಸಿ ಹಿರಿಯ ಏಮ್ಸ್ ಅಧ್ಯಾಪಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಬುಧವಾರ ತಮ್ಮ ಹಾಸ್ಟೆಲ್ ಕೊಠಡಿಗಳಿಂದ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಹಜಾರಿಬಾಗ್‌ನ ಎನ್ ಟಿಎ ಟ್ರಂಕ್‌ನಿಂದ NEET-UG ಪೇಪರ್ ಅನ್ನು ಕದ್ದ ಆರೋಪದ ಮೇಲೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜಮ್‌ಶೆಡ್‌ಪುರದ 2017 ರ ಬ್ಯಾಚ್ ಸಿವಿಲ್ ಇಂಜಿನಿಯರ್ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಅವರನ್ನು ಸಿಬಿಐ ಬಂಧಿಸಿದ ಎರಡು ದಿನಗಳ ನಂತರ ಈ ಕ್ರಮವು ಬಂದಿದೆ.

ಬೊಕಾರೊ ನಿವಾಸಿ ಕುಮಾರ್ ಅವರನ್ನು ಪಾಟ್ನಾದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಕದಿಯಲು ಕುಮಾರ್‌ಗೆ ಸಹಾಯ ಮಾಡಿದ ರಾಜು ಸಿಂಗ್‌ ಎಂಬಾತನನ್ನೂ ಸಿಬಿಐ ಬಂಧಿಸಿತ್ತು, ಸಿಂಗ್‌ನನ್ನು ಹಜಾರಿಬಾಗ್‌ನಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಬಿಹಾರದ ಎಫ್‌ಐಆರ್ ಆಪಾದಿತ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದೆ. ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಉಳಿದವು ಅಭ್ಯರ್ಥಿಗಳ ಸೋಗು ಮತ್ತು ವಂಚನೆಗೆ ಸಂಬಂಧಿಸಿವೆ.

ಇದನ್ನೂ ಓದಿ: ಭಾರತೀಯ ರೈಲ್ವೇಯಲ್ಲಿ ಉಂಟಾಗಿರುವ ಬೃಹತ್ ಲೋಪಗಳಿಗೆ ಪಿಎಂ ಮೋದಿ ಹೊಣೆ ಹೊರಬೇಕು: ಖರ್ಗೆ

ಕೇಂದ್ರ ಶಿಕ್ಷಣ ಸಚಿವಾಲಯದ ಉಲ್ಲೇಖದ ಮೇಲೆ ಏಜೆನ್ಸಿಯ ಸ್ವಂತ ಎಫ್‌ಐಆರ್ NEET-UG 2024 ರಲ್ಲಿನ ಆಪಾದಿತ ಅಕ್ರಮಗಳ ಕುರಿತು “ಸಮಗ್ರ ತನಿಖೆ” ಗೆ ಸಂಬಂಧಿಸಿದೆ. ಸಿಬಿಐ ಕಳೆದ ತಿಂಗಳು ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧ ಘಟಕದಿಂದ (ಇಒಯು) ಪ್ರಕರಣವನ್ನು ವಹಿಸಿಕೊಂಡಿತ್ತು.

NEET-UG ಅನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್, ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:07 pm, Thu, 18 July 24

ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ