ಭಾರತೀಯ ರೈಲ್ವೇಯಲ್ಲಿ ಉಂಟಾಗಿರುವ ಬೃಹತ್ ಲೋಪಗಳಿಗೆ ಪಿಎಂ ಮೋದಿ ಹೊಣೆ ಹೊರಬೇಕು: ಖರ್ಗೆ

ಸ್ವಂತ ಪ್ರಚಾರಕ್ಕಾಗಿ ಯಾವುದೇ ಅವಕಾಶವನ್ನು ಬಿಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ರೈಲ್ವೆ ಸಚಿವರು ಭಾರತೀಯ ರೈಲ್ವೇಯನ್ನು ಬಾಧಿಸಿರುವ ಬೃಹತ್ ಲೋಪಗಳಿಗೆ ನೇರ ಹೊಣೆಗಾರಿಕೆಯನ್ನು ಹೊರಬೇಕು. ನಮ್ಮ ಒಂದೇ ಬೇಡಿಕೆ ಕವಚ್ ವಿರೋಧಿ ಘರ್ಷಣೆ ವ್ಯವಸ್ಥೆಯನ್ನು ತ್ವರಿತವಾಗಿ ಅಳವಡಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭಾರತೀಯ ರೈಲ್ವೇಯಲ್ಲಿ ಉಂಟಾಗಿರುವ ಬೃಹತ್ ಲೋಪಗಳಿಗೆ ಪಿಎಂ ಮೋದಿ ಹೊಣೆ ಹೊರಬೇಕು: ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us
ರಶ್ಮಿ ಕಲ್ಲಕಟ್ಟ
|

Updated on:Jul 18, 2024 | 7:23 PM

ದೆಹಲಿ ಜುಲೈ 18: ಚಂಡೀಗಢ-ದಿಬ್ರುಗಢ ರೈಲು ಅಪಘಾತದ (Chandigarh-Dibrugarh accident)ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದ್ದು, “ಭಾರತೀಯ ರೈಲ್ವೇಯಲ್ಲಿ ಉಂಟಾಗಿರುವ ಬೃಹತ್ ಲೋಪಗಳಿಗೆ” ಪ್ರಧಾನಿ ಹೊಣೆಯಾಗಬೇಕು ಎಂದು ಹೇಳಿದ್ದಾರೆ. ರೈಲು ಹಳಿ ತಪ್ಪಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದು 60 ಮಂದಿ ಗಾಯಗೊಂಡಿದ್ದಾರೆ. ಯುಪಿಯಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪಿರುವುದು ಮೋದಿ ಸರ್ಕಾರವು ರೈಲು ಸುರಕ್ಷತೆಯನ್ನು ಹೇಗೆ ವ್ಯವಸ್ಥಿತವಾಗಿ ಅಪಾಯಕ್ಕೆ ತಳ್ಳಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ದುಃಖತಪ್ತರ ಕುಟುಂಬಗಳಿಗೆ ನಮ್ಮ ತೀವ್ರ ಸಂತಾಪಗಳು. ಗಾಯಾಳುಗಳು ಗುಣಮುಖವಾಲಿ ಎಂದು ನಾವು ಪಾರ್ಥಿಸುತ್ತೇವೆ ಎಂದು ಖರ್ಗೆ ಎಕ್ಸ್‌ನಲ್ಲಿ ಬರೆದಿದ್ದಾರೆ.

“ಒಂದು ತಿಂಗಳ ಹಿಂದೆ, ಸೀಲ್ದಾ-ಅಗರ್ತಲಾ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು 11 ಜನರು ಪ್ರಾಣ ಕಳೆದುಕೊಂಡರು. ಅಪಘಾತ ಸಂಭವಿಸುವ ಸಾಧ್ಯತೆ ಇತ್ತು ಎಂದು ರೈಲ್ವೆ ಸುರಕ್ಷತಾ ಆಯುಕ್ತರು ಹೇಳಿದ್ದಾರೆ. ಸ್ವಯಂಚಾಲಿತ ಸಿಗ್ನಲ್‌ನ ವೈಫಲ್ಯ, ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ಬಹು ಹಂತಗಳಲ್ಲಿನ ಲೋಪಗಳು ಮತ್ತು ಲೊಕೊ ಪೈಲಟ್ ಮತ್ತು ರೈಲು ವ್ಯವಸ್ಥಾಪಕರೊಂದಿಗೆ ವಾಕಿ-ಟಾಕಿಯಂತಹ ನಿರ್ಣಾಯಕ ಸುರಕ್ಷತಾ ಸಾಧನಗಳ ಲಭ್ಯತೆಯಿಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.

ಖರ್ಗೆ ಟ್ವೀಟ್

ಎಲ್ಲಾ ಮಾರ್ಗಗಳಲ್ಲಿ ಕವಚ ವಿರೋಧಿ ಘರ್ಷಣೆ ವ್ಯವಸ್ಥೆ ಅಳವಡಿಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

“ಸ್ವಂತ ಪ್ರಚಾರಕ್ಕಾಗಿ ಯಾವುದೇ ಅವಕಾಶವನ್ನು ಬಿಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ರೈಲ್ವೆ ಸಚಿವರು ಭಾರತೀಯ ರೈಲ್ವೇಯನ್ನು ಬಾಧಿಸಿರುವ ಬೃಹತ್ ಲೋಪಗಳಿಗೆ ನೇರ ಹೊಣೆಗಾರಿಕೆಯನ್ನು ಹೊರಬೇಕು. ನಮ್ಮ ಒಂದೇ ಬೇಡಿಕೆ ಕವಚ್ ವಿರೋಧಿ ಘರ್ಷಣೆ ವ್ಯವಸ್ಥೆಯನ್ನು ತ್ವರಿತವಾಗಿ ಅಳವಡಿಸಬೇಕು. ವರ್ಧಿತ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿ ಅಪಘಾತಗಳನ್ನು ತಡೆಗಟ್ಟಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜಕಾರಣಿ ರಾಜಕೀಯ ಮಾಡದಿದ್ದರೆ ಮತ್ತೇನು ಗೋಲ್ಗಪ್ಪಾ ಮಾರುತ್ತಾರೆಯೇ?: ಕಂಗನಾ ರಣಾವತ್

ವರದಿಗಳ ಪ್ರಕಾರ, ಯುಪಿಯ ಗೊಂಡಾ ಬಳಿ ರೈಲಿನ ಎಂಟು ಬೋಗಿಗಳು ಹಳಿತಪ್ಪಿದವು. ಉತ್ತರ ಪ್ರದೇಶ ಆಡಳಿತವು ಎನ್‌ಡಿಆರ್‌ಎಫ್‌ನ ಎರಡು ತಂಡಗಳನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಕಳುಹಿಸಿದೆ. ಹಲವಾರು ಹಿರಿಯ ರೈಲ್ವೇ ಮತ್ತು ಯುಪಿ ಸರ್ಕಾರದ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:20 pm, Thu, 18 July 24