ರಾಜಕಾರಣಿ ರಾಜಕೀಯ ಮಾಡದಿದ್ದರೆ ಮತ್ತೇನು ಗೋಲ್ಗಪ್ಪಾ ಮಾರುತ್ತಾರೆಯೇ?: ಕಂಗನಾ ರಣಾವತ್

ರಾಜನು ತನ್ನ ಪ್ರಜೆಗಳನ್ನು ಶೋಷಿಸಲು ಪ್ರಾರಂಭಿಸಿದರೆ ದೇಶದ್ರೋಹವು ಅಂತಿಮ ಧರ್ಮ ಎಂದು ಧರ್ಮವು ಹೇಳುತ್ತದೆ. ಶಂಕರಾಚಾರ್ಯ ಜೀ ಅವರು ನಮ್ಮ ಗೌರವಾನ್ವಿತ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ದೇಶದ್ರೋಹಿ ಮತ್ತು ದ್ರೋಹಿ ಎಂದು ಆರೋಪಿಸಿ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಮ್ಮೆಲ್ಲರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

ರಾಜಕಾರಣಿ ರಾಜಕೀಯ ಮಾಡದಿದ್ದರೆ ಮತ್ತೇನು ಗೋಲ್ಗಪ್ಪಾ ಮಾರುತ್ತಾರೆಯೇ?: ಕಂಗನಾ ರಣಾವತ್
ಕಂಗನಾ ರಣಾವತ್
Follow us
ರಶ್ಮಿ ಕಲ್ಲಕಟ್ಟ
|

Updated on: Jul 18, 2024 | 5:57 PM

ದೆಹಲಿ ಜುಲೈ 18: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಂಚನೆಗೆ ಬಲಿಯಾಗಿದ್ದಾರೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಟೀಕಿಸಿದ ಕೆಲವೇ ದಿನಗಳಲ್ಲಿ, ಬಾಲಿವುಡ್ ನಟಿ ಮತ್ತು ಲೋಕಸಭಾ ಸಂಸದೆ ಕಂಗನಾ ರಣಾವತ್(Kangana Ranaut) ಶಿವಸೇನೆಯ ಏಕನಾಥ್ ಶಿಂಧೆ (Eknath Shinde) ಅವರನ್ನು ಸಮರ್ಥಿಸಿಕೊಂಡಿದ್ದಾರೆ. ರಾಜಕಾರಣಿ ರಾಜಕೀಯ ಮಾಡದಿದ್ದರೆ ಗೋಲ್ಗಪ್ಪಾ ಮಾರುತ್ತಾರೆಯೇ?ಎಂದು ಕಂಗನಾ ಕೇಳಿದ್ದಾರೆ.  ರಾಜಕೀಯದಲ್ಲಿ ಮೈತ್ರಿಗಳು, ಒಪ್ಪಂದಗಳು ಮತ್ತು ಪಕ್ಷ ವಿಭಜನೆಯಾಗುವುದು ತುಂಬಾ ಸಾಮಾನ್ಯ ಮತ್ತು ಸಾಂವಿಧಾನಿಕ ಎಂದಿದ್ದಾರೆ ಕಂಗನಾ.

ನಾವೆಲ್ಲರೂ ಸನಾತನ ಧರ್ಮದ ಅನುಯಾಯಿಗಳು. ನಮ್ಮಲ್ಲಿ ‘ಪಾಪ’ ಮತ್ತು ‘ಪುಣ್ಯ’ ವ್ಯಾಖ್ಯಾನಗಳಿವೆ. ವಿಶ್ವಾಸದ್ರೋಹ ಅತ್ಯಂತ ದೊಡ್ಡ ಪಾಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಉದ್ಧವ್ ಠಾಕ್ರೆಯವರಿಗೂ ಅದೇ ಸಂಭವಿಸಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯರು ಹೇಳಿದ್ದರು.

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರನ್ನು ಮುಂಬೈನ ಅವರ ನಿವಾಸದಲ್ಲಿ ಭಾನುವಾರ ಭೇಟಿಯಾಗಿದ್ದು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನಾದ ಹಿರಿಯ ನಾಯಕ ಏಕನಾಥ್ ಶಿಂಧೆ ಪಕ್ಷದಲ್ಲಿ ವಿಭಜನೆಯನ್ನು ಉಂಟುಮಾಡಿದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಒತ್ತಾಯಿಸಲ್ಪಟ್ಟ ಠಾಕ್ರೆ ಅವರಿಗೆ ತಮ್ಮ ಒಗ್ಗಟ್ಟು ವ್ಯಕ್ತಪಡಿಸಿದರು.

ಶಿಂಧೆ ಅವರನ್ನು ಬೆಂಬಲಿಸಿದ ಹಿಮಾಚಲ ಪ್ರದೇಶದ ಮಂಡಿಯ ಲೋಕಸಭಾ ಸಂಸದೆ ಕಂಗನಾ, “ರಾಜಕೀಯದಲ್ಲಿ, ಮೈತ್ರಿಗಳು, ಒಪ್ಪಂದಗಳು ಮತ್ತು ಪಕ್ಷದ ವಿಭಜನೆಯನ್ನು ಹೊಂದಿರುವುದು ತುಂಬಾ ಸಾಮಾನ್ಯ ಮತ್ತು ಸಾಂವಿಧಾನಿಕವಾಗಿದೆ. 1907ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಯಿತು, 1971ರಲ್ಲಿ ಮತ್ತೆ ಆಯ್ತು. ರಾಜಕಾರಣಿಗಳು ರಾಜಕೀಯ ಮಾಡದಿದ್ದರೆ ಮತ್ತೇನು ಗೋಲ್ಗಪ್ಪಾ ಮಾರುತ್ತಾರಾ?

“ಶಂಕರಾಚಾರ್ಯ ಜೀ” ಅವರು ತಮ್ಮ ಮಾತು, ಅವರ ಪ್ರಭಾವ ಮತ್ತು ಧಾರ್ಮಿಕ ಶಿಕ್ಷಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

“ರಾಜನು ತನ್ನ ಪ್ರಜೆಗಳನ್ನು ಶೋಷಿಸಲು ಪ್ರಾರಂಭಿಸಿದರೆ ದೇಶದ್ರೋಹವು ಅಂತಿಮ ಧರ್ಮ ಎಂದು ಧರ್ಮವು ಹೇಳುತ್ತದೆ. ಶಂಕರಾಚಾರ್ಯ ಜೀ ಅವರು ನಮ್ಮ ಗೌರವಾನ್ವಿತ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ದೇಶದ್ರೋಹಿ ಮತ್ತು ದ್ರೋಹಿ ಎಂದು ಆರೋಪಿಸಿ ಅವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ನಮ್ಮೆಲ್ಲರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಶಂಕರಾಚಾರ್ಯ ಜಿ ಅವರು ಇಂತಹ ಸಣ್ಣ ಮತ್ತು ಕ್ಷುಲ್ಲಕ ಮಾತುಗಳನ್ನು ಹೇಳುವ ಮೂಲಕ ಹಿಂದೂ ಧರ್ಮದ ಘನತೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ: Dibrugarh Express Derails: ಉತ್ತರ ಪ್ರದೇಶದ ಗೊಂಡಾದಲ್ಲಿ ಹಳಿತಪ್ಪಿದ ದಿಬ್ರುಗಢ ಎಕ್ಸ್‌ಪ್ರೆಸ್; ನಾಲ್ವರು ಸಾವು, 20 ಮಂದಿಗೆ ಗಾಯ

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮಹಾರಾಷ್ಟ್ರದ ಜನರು ಆ “ದ್ರೋಹ” ದಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿಯೂ ಇದು ಗೋಚರಿಸುತ್ತದೆ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ 30 ಸ್ಥಾನಗಳನ್ನು ಗೆದ್ದಿದ್ದರೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಕೇವಲ 17 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ಹಿಂದಿನ ಚುನಾವಣೆಗಿಂತ 20 ಸ್ಥಾನ ಕಡಿಮೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ