NEET PG 2021 Admit Card: ನೀಟ್​ ಸ್ನಾತಕೋತ್ತರ ಪದವಿ ಪರೀಕ್ಷೆ ಪ್ರವೇಶ ಪತ್ರ ಏಪ್ರಿಲ್​ 12ರಂದು ಬಿಡುಗಡೆ; ಡೌನ್​ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ

|

Updated on: Apr 06, 2021 | 2:27 PM

NEET PG 2021 ಪರೀಕ್ಷೆ ಏಪ್ರಿಲ್​ 18ರಂದು ನಿಗದಿಯಾಗಿದ್ದು, ಒಂದೇ ಶಿಫ್ಟ್​ನಲ್ಲಿ ಅಂದರೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ನಡೆಯಲಿದೆ. ಪ್ರವೇಶ ಪತ್ರದೊಂದಿಗೆ ಪರೀಕ್ಷಾರ್ಥಿಗಳು ಐಡಿ ಕಾರ್ಡ್​ ಕೂಡ ತೆಗೆದುಕೊಂಡು ಹೋಗಲೇಬೇಕು.

NEET PG 2021 Admit Card: ನೀಟ್​ ಸ್ನಾತಕೋತ್ತರ ಪದವಿ ಪರೀಕ್ಷೆ ಪ್ರವೇಶ ಪತ್ರ ಏಪ್ರಿಲ್​ 12ರಂದು ಬಿಡುಗಡೆ; ಡೌನ್​ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ
ಪ್ರಾತಿನಿಧಿಕ ಚಿತ್ರ
Follow us on

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಸ್ನಾತಕೋತ್ತರ ಪದವಿ (NEET PG) ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ಏಪ್ರಿಲ್ 12ರಂದು ಅದರ ಅಧಿಕೃತ ವೆಬ್​ಸೈಟ್​​ನಲ್ಲಿ ಬಿಡುಗಡೆ ಮಾಡಲಿದೆ. ನೀಟ್​ ಪಿಜಿ -2021ರ ಪರೀಕ್ಷೆಗೆ ಈಗಾಗಲೇ ನೋಂದಣಿ ಮಾಡಿಕೊಂಡವರು ತಮ್ಮ ಪ್ರವೇಶ ಪತ್ರವನ್ನು ಎನ್​ಬಿಇ ವೆಬ್​ಸೈಟ್​ nbe.edu.in ನಲ್ಲಿ ಪಡೆಯಬಹುದು. ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರವನ್ನು ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.

NEET PG 2021 ಪರೀಕ್ಷೆ ಏಪ್ರಿಲ್​ 18ರಂದು ನಿಗದಿಯಾಗಿದ್ದು, ಒಂದೇ ಶಿಫ್ಟ್​ನಲ್ಲಿ ಅಂದರೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರದ ಹಾರ್ಡ್ ಕಾಪಿಯನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಎನ್​ಬಿಇ ತಿಳಿಸಿದೆ. ಇನ್ನು ಪ್ರವೇಶ ಪತ್ರದೊಂದಿಗೆ ಪರೀಕ್ಷಾರ್ಥಿಗಳು ಐಡಿ ಕಾರ್ಡ್​ ಕೂಡ ತೆಗೆದುಕೊಂಡು ಹೋಗಲೇಬೇಕು.

ಪ್ರವೇಶ ಪತ್ರ ಡೌನ್​ಲೋಡ್ ಹೇಗೆ?

  • ಎನ್​ಬಿಇ ವೆಬ್​ಸೈಟ್nbe.edu.in. ಗೆ ಭೇಟಿ ನೀಡಿ
  • ಹೋಂ ಪೇಜ್​ನಲ್ಲಿ ಕಾಣುವ ‘NEET PG 2021 admit card download’ ಎಂಬಲ್ಲಿ ಕ್ಲಿಕ್ ಮಾಡಿ.
  • ಬಳಿಕ ಒಂದು ಹೊಸ ಪೇಜ್​ ತೆರೆಯುತ್ತದೆ
  • ಅದರಲ್ಲಿ ನಿಮ್ಮ ಲಾಗಿನ್​ ಐಡಿ, ಪಾಸ್​ವರ್ಡ್ ಹಾಕಿ
  • ಆಗ ನಿಮ್ಮ ಅಡ್ಮಿಟ್ ಕಾರ್ಡ್​ ಸ್ಕ್ರೀನ್​ ಮೇಲೆ ಕಾಣಿಸಿಕೊಳ್ಳುತ್ತದೆ
  • ಅದನ್ನು ಡೌನ್​ಲೋಡ್ ಮಾಡಿಕೊಳ್ಳುವ ಆಯ್ಕೆ ಅಲ್ಲೇ ಕಾಣಿಸುತ್ತದೆ. ಡೌನ್​ಲೋಡ್ ಮಾಡಿಕೊಂಡು ಪ್ರಿಂಟ್​ ತೆಗೆದುಕೊಳ್ಳಿ

NEET PG 2021 ಪರೀಕ್ಷೆಯ ಪ್ರವೇಶ ಪತ್ರದಲ್ಲಿ ನೀವು ಪರೀಕ್ಷೆ ಬರೆಯಬೇಕಾಗಿರುವ ಪರೀಕ್ಷಾ ಕೇಂದ್ರದ ವಿಳಾಸ, ಸ್ಥಳ ನಮೂದಾಗಿರುತ್ತದೆ. 1200 ಅಂಕಗಳಿಗೆ ಪರೀಕ್ಷೆ ನಡೆಯಲಿದ್ದು, 200 ಪ್ರಶ್ನೆಗಳು ಇರಲಿವೆ.

ಇದನ್ನೂ ಓದಿ: ಮಿತಿಮೀರಿದ ಕೊರೊನಾ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೈಟ್​ ಕರ್ಫ್ಯೂ ಜಾರಿ

ಇಂದು ಸಿಡಿ ಸಂತ್ರಸ್ತೆ ವಿಚಾರಣೆ ಇಲ್ಲ; ಮೂರು ದಿನ ರೆಸ್ಟ್ ನೀಡಿದ ಎಸ್ಐಟಿ

 

(NEET PG 2021 admit card to be released on April 12)