ಇಂದು ಸಿಡಿ ಸಂತ್ರಸ್ತೆ ವಿಚಾರಣೆ ಇಲ್ಲ; ಮೂರು ದಿನ ರೆಸ್ಟ್ ನೀಡಿದ ಎಸ್ಐಟಿ
ಸಂತ್ರಸ್ತೆ ಯುವತಿ ತಾಯಿಗೆ ಶುಗರ್ ಏರುಪೇರಾಗಿದ್ದ ಹಿನ್ನೆಲೆ ವಿಜಯಪುರದ ಅಜ್ಜಿ ಮನೆಯಲ್ಲಿ ಪೋಷಕರು ಇದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ಯುವತಿಯ ತಾಯಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರು ನಿನ್ನೆಯಿಂದ ಕಟ್ಟುನಿಟ್ಟಾಗಿ ಡಯಾಬಿಟಿಸ್ಗೆ ಸಂಬಂಧಿಸಿದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ಗೆ ಸಂಬಂಧಿಸಿ ಇಂದು ಎಸ್ಐಟಿಯಿಂದ ಸಂತ್ರಸ್ತ ಯುವತಿಯ ವಿಚಾರಣೆ ನಡೆಯಲ್ಲ. ಮೂರು ದಿನಗಳ ಕಾಲ ಯುವತಿಗೆ ಎಸ್ಐಟಿ ವಿಶ್ರಾಂತಿಯನ್ನು ನೀಡಿದೆ. ಈಗಾಗಲೇ ಎಸ್ಐಟಿ ಯುವತಿ ವಿಚಾರಣೆಯನ್ನು ಬಹುತೇಕ ಮುಗಿಸಿದೆ. ಅವಶ್ಯಕತೆ ಇದ್ದರೆ ಮೂರು ದಿನಗಳ ಬಳಿಕ ಮತ್ತೆ ನೋಟಿಸ್ ನೀಡಬಹುದಾಗಿದೆ. ಮತ್ತೆ ವಿಚಾರಣೆಗೆ ಕರೆದರೆ ಬರುವಂತೆ ಸಂತ್ರಸ್ತೆಗೆ ತನಿಖಾಧಿಕಾರಿಗಳು ಹೇಳಿ ಕಳಿಸಿದ್ದಾರೆ. ರಮೇಶ್ ಜಾರಕಿಹೊಳಿ ಹೇಳಿಕೆ ಪಡೆದ ಮೇಲೆ ಮತ್ತೆ ಯುವತಿಯನ್ನು ವಿಚಾರಣೆ ಮಾಡುವ ಸಾಧ್ಯತೆಯಿದೆ.
ಯುವತಿ ತಾಯಿಗೆ ಶುಗರ್ ಏರುಪೇರಾಗಿದ್ದ ಹಿನ್ನೆಲೆ ವಿಜಯಪುರದ ಅಜ್ಜಿ ಮನೆಯಲ್ಲಿ ಪೋಷಕರು ಇದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ಯುವತಿಯ ತಾಯಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರು ನಿನ್ನೆಯಿಂದ ಕಟ್ಟುನಿಟ್ಟಾಗಿ ಡಯಾಬಿಟಿಸ್ಗೆ ಸಂಬಂಧಿಸಿದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ.
ನಾವು ಸತ್ಯದ ಪರ; ಬಸವರಾಜ ಬೊಮ್ಮಾಯಿ ಸಿಡಿ ಲೇಡಿಗೆ ಎಸ್ಐಟಿ ವಿಚಾರಣೆಯ ಬಗ್ಗೆ ಅತೃಪ್ತಿ ವಿಚಾರಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಮಾತನಾಡಿದ ಗೃಹಸಚಿವ ಬಸವರಾಜ ಬೊಮ್ಮಾಯಿ ನ್ಯಾಯಸಮ್ಮತ ಕೆಲಸ ಮಾಡಲು ಎಸ್ಐಟಿಗೆ ಸೂಚಿಸಿದ್ದೇನೆ. ನಾವು ಸತ್ಯದ ಪರ, ಇನ್ಯಾರೋ ಪರ ಅಥವಾ ವಿರೋಧವಿಲ್ಲ. ಎಸ್ಐಟಿ ವಿದ್ಯಮಾನಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು. ನಂತರ ಹೈಕೋರ್ಟ್ ತನಿಖೆ ಪ್ರಗತಿಯ ಮಾಹಿತಿ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬೊಮ್ಮಾಯಿ ಎಲ್ಲ ಪ್ರಕ್ರಿಯೆಗಳನ್ನು ಕಾನೂನು ಪ್ರಕಾರ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ
ಟೊಮ್ಯಾಟೊ ದರ ಒಮ್ಮೆಲೆ ಕುಸಿತ: ಬೆಳೆದ ಟೊಮ್ಯಾಟೊವನ್ನೆಲ್ಲಾ ರಸ್ತೆಗೆ ಸುರಿದು ರೈತರ ಆಕ್ರೋಶ
ನೂರಾರು ತಳಿಯ ಬಿತ್ತನೆ ಬೀಜಗಳ ಸಂಗ್ರಹಣೆ; ಕೋಲಾರದ ಮಹಿಳೆ ಮನೆಯಲ್ಲಿ ಇದೆ ಪುರಾತನ ಕಾಲದ ಬಿತ್ತನೆ ಬೀಜಗಳು
(CD Case lady inquiry is not there today and SIT gives 3 days relief)