ರಾಜ್ಯ ಕೋಟಾದಲ್ಲಿ ಪಿಜಿ ವೈದ್ಯಕೀಯ ಕೋರ್ಸ್​ಗಳಿಗೆ ಪ್ರಾದೇಶಿಕ ಮೀಸಲಾತಿ ನೀಡಲಾಗದು ಎಂದ ಸುಪ್ರೀಂಕೋರ್ಟ್​

ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಯುತ್ತಿರುವ ಮೀಸಲಾತಿ ವ್ಯವಸ್ಥೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳಲ್ಲಿ ನಿವಾಸದ ಆಧಾರದ ಮೇಲೆ ಮೀಸಲಾತಿಯ ಪ್ರಯೋಜನ ಲಭ್ಯವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇದನ್ನು ಅಸಂವಿಧಾನಿಕ ಎಂದು ನ್ಯಾಯಾಲಯ ಪರಿಗಣಿಸಿದೆ.

ರಾಜ್ಯ ಕೋಟಾದಲ್ಲಿ  ಪಿಜಿ ವೈದ್ಯಕೀಯ ಕೋರ್ಸ್​ಗಳಿಗೆ ಪ್ರಾದೇಶಿಕ ಮೀಸಲಾತಿ ನೀಡಲಾಗದು ಎಂದ ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​

Updated on: Jan 29, 2025 | 2:10 PM

ರಾಜ್ಯ ಕೋಟಾದೊಳಗೆ  ಪಿಜಿ ವೈದ್ಯಕೀಯ ಕೋರ್ಸ್​ಗಳಿಗೆ ಪ್ರಾದೇಶಿಕ ಮೀಸಲಾತಿ ನೀಡಲಾಗದು ಎಂದು ಸುಪ್ರೀಂಕೋರ್ಟ್​ ಸ್ಪಷ್ಟಪಡಿಸಿದೆ. ಪಿಜಿ ವೈದ್ಯಕೀಯ ಸೀಟುಗಳಲ್ಲಿ ವಾಸಸ್ಥಳ ಆಧಾರಿತ ಮೀಸಲಾತಿಯನ್ನು ಅನುಮತಿಸಲಾಗುವುದಿಲ್ಲ ಏಕೆಂದರೆ ಇದು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘಿಸುವುದರಿಂದ ಅಸಂವಿಧಾನಿಕವಾಗಿದೆ ಎಂದು ಹೇಳಿದೆ.

ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ. ರಾಜ್ಯ ಕೋಟಾದೊಳಗೆ ಪಿಜಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶದಲ್ಲಿ ಪ್ರಾದೇಶಿಕ ಮೀಸಲಾತಿಯನ್ನು ನೀಡುವುದು ಸಾಂವಿಧಾನಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪೀಠ ಹೇಳಿದೆ.

ಸಂವಿಧಾನದ 19 ನೇ ವಿಧಿಯ ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕನಿಗೆ ಭಾರತದ ಯಾವುದೇ ಭಾಗದಲ್ಲಿ ವಾಸಿಸುವ, ವ್ಯಾಪಾರ ಮಾಡುವ ಮತ್ತು ವೃತ್ತಿಪರ ಕೆಲಸ ಮಾಡುವ ಹಕ್ಕಿದೆ ಎಂದು ಪೀಠವು ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ನಾವೆಲ್ಲರೂ ಭಾರತದ ನಿವಾಸಿಗಳು ರಾಜ್ಯ, ಪ್ರದೇಶ ಎನ್ನುವ ವ್ಯತ್ಯಾಸವಿಲ್ಲ, ನಾವೆಲ್ಲರೂ ಭಾರತದ ನಿವಾಸಿಗಳು ಎಂಬುದಷ್ಟೇ ಸತ್ಯ. ಭಾರತದಲ್ಲಿ ಎಲ್ಲಿಯಾದರೂ ಒಂದು ನಿರ್ದಿಷ್ಟ ರಾಜ್ಯದಲ್ಲಿ ವಾಸಿಸುವವರಿಗೆ ಮಾತ್ರ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಆಯ್ಕೆ ಮಾಡುವ ಹಕ್ಕನ್ನು ಸಂವಿಧಾನವು ನೀಡುತ್ತದೆ. ನೀಟ್ ಪರೀಕ್ಷೆಯಲ್ಲಿನ ಅರ್ಹತೆಯ ಆಧಾರದ ಮೇಲೆ ರಾಜ್ಯ ಕೋಟಾದ ಸೀಟುಗಳನ್ನು ಭರ್ತಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ

ನೀಟ್ ಪರೀಕ್ಷೆಯಲ್ಲಿನ ಮೆರಿಟ್ ಆಧಾರದ ಮೇಲೆ ರಾಜ್ಯ ಕೋಟಾದ ಸೀಟುಗಳನ್ನು ಭರ್ತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರತಿಕ್ರಿಯಿಸಿದ ತ್ರಿಸದಸ್ಯ ಪೀಠ, ಹಿಂದಿನ ತೀರ್ಪುಗಳಲ್ಲಿ ನೀಡಲಾದ ಕಾನೂನನ್ನು ಪುನರುಚ್ಚರಿಸುತ್ತಿರುವುದಾಗಿ ಹೇಳಿದೆ.

ಮತ್ತಷ್ಟು ಓದಿ: ನೀಟ್ ಪರೀಕ್ಷೆ ವಿವಾದ; ಮೆಡಿಕಲ್, ಎಂಜಿನಿಯರಿಂಗ್ ಸೀಟ್​ ಗೊಂದಲ, ಈ ವಾರದಲ್ಲಿ ಕೌನ್ಸೆಲಿಂಗ್ ದಿನಾಂಕ ಪ್ರಕಟ

ಪಿಜಿ ವೈದ್ಯಕೀಯ ಕೋರ್ಸ್‌ಗಳಿಗೆ – ವಿವಿಧ ರಾಜ್ಯಗಳಿಗೆ ಮೀಸಲಾದ ಕೋಟಾಗಳ ಅಡಿಯಲ್ಲಿ – ಕೇವಲ ಅರ್ಹತೆಯ ಮೇಲೆ, ಅಂದರೆ, NEET ಅಥವಾ ರಾಷ್ಟ್ರೀಯ ಅರ್ಹತೆ / ಪ್ರವೇಶ ಪರೀಕ್ಷೆ, ಅಂಕಗಳ ಮೇಲೆ ಮಾತ್ರ ಪ್ರವೇಶವನ್ನು ಖಚಿತಪಡಿಸಿಕೊಳ್ಳಬಹುದು. ಸಂವಿಧಾನವು ನಮಗೆ ಭಾರತದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವನ್ನು ಆಯ್ಕೆ ಮಾಡುವ ಹಕ್ಕನ್ನು ಸಹ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಲಯವು ಇಂದಿನ ತೀರ್ಪು ಈಗಾಗಲೇ ನೀಡಿರುವ ವಸತಿ ಆಧಾರಿತ ಮೀಸಲಾತಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಅಂತಹ ಆಯ್ಕೆ ಮಾನದಂಡಗಳ ಆಧಾರದ ಮೇಲೆ ತಮ್ಮ ಪದವಿಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಆದಾಗ್ಯೂ, ಪರಿಸ್ಥಿತಿಯ ಮಹತ್ವವನ್ನು ಮರುಪರಿಶೀಲಿಸಿದ ನ್ಯಾಯಾಲಯ, ದ್ವಿಸದಸ್ಯ ಪೀಠವು ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ