ಮೈಕ್ ಮ್ಯೂಟ್ ಮಾಡಿದ್ದೇಕೆ ಎಂದು ಸಭಾಪತಿಯಲ್ಲಿ ಕೇಳಿದ ರಾಹುಲ್ ಗಾಂಧಿ; ವಿಡಿಯೊ ಟ್ವೀಟ್ ಮಾಡಿದ ಕಾಂಗ್ರೆಸ್

ರಾಹುಲ್ ಗಾಂಧಿಯವರು ತಮ್ಮ ಮೈಕ್ರೊಫೋನ್ ಆನ್ ಮಾಡಿ ಎಂದು ಸ್ಪೀಕರ್‌ ಓಂ ಬಿರ್ಲಾ ಅವರಲ್ಲಿ ವಿನಂತಿಸುತ್ತಿರುವುದನ್ನು ತೋರಿಸುವ ವಿಡಿಯೊವನ್ನು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಲಕ್ಷಾಂತರ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದರೂ, ಪ್ರತಿಪಕ್ಷಗಳು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಸಂಚು ನಡೆದಿದೆ ಎಂದು ಕಾಂಗ್ರೆಸ್ ವಿಡಿಯೊವನ್ನು ಹಂಚಿಕೊಂಡಿದೆ.

ಮೈಕ್ ಮ್ಯೂಟ್ ಮಾಡಿದ್ದೇಕೆ ಎಂದು ಸಭಾಪತಿಯಲ್ಲಿ ಕೇಳಿದ ರಾಹುಲ್ ಗಾಂಧಿ; ವಿಡಿಯೊ ಟ್ವೀಟ್ ಮಾಡಿದ ಕಾಂಗ್ರೆಸ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 28, 2024 | 9:07 PM

ದೆಹಲಿ ಜೂನ್ 28: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪತ್ರಿಕೆ ಸೋರಿಕೆ ಸಂಬಂಧ ಶುಕ್ರವಾರ ಲೋಕಸಭೆಯಲ್ಲಿ (Lok sabha) ಗದ್ದಲ ಉಂಟಾಗಿದೆ. ನೀಟ್ ವಿವಾದ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ನಿಲುವಳಿ ಸೂಚನೆ ಮಂಡಿಸಿದ್ದು, ಅದಕ್ಕೆ ಸ್ಪೀಕರ್ ಅನುಮತಿ ನೀಡದೇ ಇದ್ದಾಗ ಗದ್ದಲವುಂಟಾಗಿದೆ. ಕೊನೆಗೆ ಸ್ಪೀಕರ್ ಸದನದ ಕಲಾಪವನ್ನು ಮುಂದೂಡಿದ್ದಾರೆ. ಗದ್ದಲದ ನಡುವೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಸ್ಪೀಕರ್  ಓಂ ಬಿರ್ಲಾ ನಡುವಿನ ಸಣ್ಣ ತಿಕ್ಕಾಟ ಗಮನ ಸೆಳೆಯಿತು.

ಒಂದು ವೈರಲ್ ವಿಡಿಯೊದಲ್ಲಿ ರಾಹುಲ್ ಗಾಂಧಿ ತಮ್ಮ ಮೈಕ್ರೊಫೋನ್ ಆಫ್ ಮಾಡಲಾಗಿದೆ. ಅದನ್ನು ಆನ್ ಮಾಡಿ ಎಂದು ಸ್ಪೀಕರ್ ಅವರಲ್ಲಿ ಹೇಳುತ್ತಿರುವುದು ಕಾಣಿಸುತ್ತದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಮತ್ತು ಬಿರ್ಲಾ ವಾಗ್ದಾಳಿ ನಡೆಸುತ್ತಿರುವುದನ್ನು ತೋರಿಸುತ್ತದೆ.

ಕಾಂಗ್ರೆಸ್ ಟ್ವೀಟ್

ಲೋಕಸಭೆ ಕಲಾಪ ಮಧ್ಯಾಹ್ನ ಮತ್ತೆ ಮುಂದುವರಿದಾಗ, ನೀಟ್ ವಿಷಯದ ಬಗ್ಗೆ ‘ಗೌರವಯುತ’ ಚರ್ಚೆಗೆ ರಾಹುಲ್ ಗಾಂಧಿ ಒತ್ತಾಯಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನ ನಿಯಮಗಳಿಗೆ ಬದ್ಧರಾಗಿರಲು ಮತ್ತು ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯದ ನಂತರ ಚರ್ಚೆಗೆ ವಿನಂತಿಸುವಂತೆ ಸಲಹೆ ನೀಡಿದ್ದಾರೆ. ಸಲಹೆಯ ಹೊರತಾಗಿಯೂ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷಗಳು ತಮ್ಮ ಬೇಡಿಕೆಯನ್ನು ಮುಂದುವರೆಸಿದರು.

ರಾಹುಲ್ ಗಾಂಧಿಯವರು ತಮ್ಮ ಮೈಕ್ರೊಫೋನ್ ಆನ್ ಮಾಡಿ ಎಂದು ಸ್ಪೀಕರ್‌ಗೆ ವಿನಂತಿಸುತ್ತಿರುವುದನ್ನು ತೋರಿಸುವ ವಿಡಿಯೊವನ್ನು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಲಕ್ಷಾಂತರ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದರೂ, ಪ್ರತಿಪಕ್ಷಗಳು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಸಂಚು ನಡೆದಿದೆ ಎಂದು ಕಾಂಗ್ರೆಸ್ ವಿಡಿಯೊವನ್ನು ಹಂಚಿಕೊಂಡಿದೆ.

ನೀಟ್ ಕುರಿತು ನರೇಂದ್ರ ಮೋದಿ ಮೌನವಹಿಸಿದರೆ, ರಾಹುಲ್ ಗಾಂಧಿ ಸದನದಲ್ಲಿ ಯುವಜನರ ಪರವಾಗಿ ಹೋರಾಡುತ್ತಿದ್ದಾರೆ. ಆದರೆ, ಇಂತಹ ಗಂಭೀರ ವಿಚಾರದಲ್ಲಿ ಸಂಸತ್ತಿನಲ್ಲಿ ಮೈಕ್ ಸ್ವಿಚ್ ಆಫ್ ಮಾಡುವ ಮೂಲಕ ಯುವಕರ ಧ್ವನಿಯನ್ನು ಹತ್ತಿಕ್ಕುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಪೋಸ್ಟ್ ನಲ್ಲಿ ಹೇಳಿದೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ

NEET (UG) 2024 ಪರೀಕ್ಷೆಗಳು ಮೇ 5 ರಂದು , ವಿದೇಶದಲ್ಲಿ 14 ನಗರಗಳು ಸೇರಿದಂತೆ ಸುಮಾರು 570 ನಗರಗಳಲ್ಲಿ ನಡೆದವು 23 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ಇದರಲ್ಲಿ ಭಾಗವಹಿಸಿದ್ದರು. ಆದಾಗ್ಯೂ, ಪ್ರಶ್ನೆಪತ್ರಿಕೆಗಳ ಸೋರಿಕೆ ಆರೋಪವನ್ನು ಒಳಗೊಂಡ ವಿವಾದದಿಂದ ಪರೀಕ್ಷೆಗಳು ರದ್ದಾಗಿದ್ದು ಇದು ಅನೇಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯವನ್ನುಂಟುಮಾಡಿದೆ.

ಇದರ ಮಧ್ಯೆ, 67 ಅಭ್ಯರ್ಥಿಗಳು 720 ರಲ್ಲಿ 720 ಅಂಕಗಳನ್ನು ಗಳಿಸಿದ್ದಾರೆ, ಇದು ಶೈಕ್ಷಣಿಕ ವಲಯಗಳಲ್ಲಿ ಟೀಕೆಗಳನ್ನು ಹುಟ್ಟುಹಾಕಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ಆರಂಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳನ್ನು ತಳ್ಳಿಹಾಕಿದಾಗ ಈ ವಿಷಯವು ಶೀಘ್ರವಾಗಿ ರಾಜಕೀಯಕ್ಕೆ ತಿರುಗಿತು. ಆದರೆ ನಂತರ ಅಕ್ರಮಗಳ ತನಿಖೆ ಮತ್ತು ಪರೀಕ್ಷಾ ವ್ಯವಸ್ಥೆಗೆ ಸುಧಾರಣೆಗಳನ್ನು ಪ್ರಸ್ತಾಪಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಗದ್ದಲ: ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಖರ್ಗೆ ವಿರುದ್ಧ ಜಗದೀಪ್ ಧನ್ಖರ್ ಗರಂ 

ಜೂನ್ 23 ರಂದು, ಕೇಂದ್ರೀಯ ತನಿಖಾ ದಳ (ಸಿಬಿಐ) NEET (UG) ಮತ್ತು UGC-NET ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿತು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಈ ಪರೀಕ್ಷೆಗಳ ನಿರ್ವಹಣೆಯಲ್ಲಿನ ದೋಷಗಳ ಮೇಲೆ ಕೇಂದ್ರೀಕರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ