ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನ ಇನ್ಮುಂದೆ ’ಪರಾಕ್ರಮ ದಿವಸ್‘: 23ರಂದು ಮೋದಿ-ದೀದಿ ಮುಖಾಮುಖಿ?
ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು ಕೋಲ್ಕತ್ತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಕ್ಟೋರಿಯಲ್ ಮೆಮೋರಿಯಲ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ನಂತರ ಅಲಿಪೋರ್ನ ಬೆಲ್ವೆಡೆರೆ ಎಸ್ಟೇಟ್ನಲ್ಲಿರುವ ನ್ಯಾಷನಲ್ ಲೈಬ್ರರಿಗೂ ಭೇಟಿಕೊಡಲಿದ್ದಾರೆ.
ಕೋಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನದ ನಿಮಿತ್ತ ಇನ್ನು ಮುಂದೆ ಪ್ರತಿವರ್ಷ ಜನವರಿ 23ರಂದು ಪರಾಕ್ರಮ ದಿವಸ್ ಆಚರಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಇಂದು ಘೋಷಿಸಿದೆ. ಅದಮ್ಯ ಚೇತನ ನೇತಾಜಿಯವರ ಸ್ಮರಣಾರ್ಥ, ಗೌರವಾರ್ಥವಾಗಿ ಹಾಗೂ ಅವರು ದೇಶಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ನೆನಪಿಸಿಕೊಳ್ಳುವ ಸಲುವಾಗಿ ಇನ್ನು ಪ್ರತಿವರ್ಷ ಜನವರಿ 23 ಅಂದರೆ ನೇತಾಜಿಯವರ ಜನ್ಮದಿನವನ್ನು ಪರಾಕ್ರಮ ದಿವಸ್ ಎಂದು ಪರಿಗಣಿಸುವುದಾಗಿ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಈ ಬಾರಿ ನೇತಾಜಿಯವರ 125ನೇ ಜನ್ಮದಿನ. ಕಾಲಗಳು ಉರುಳುತ್ತಿದ್ದರೂ ದೇಶದ ಜನರು ನೇತಾಜಿ ಸುಭಾಷ್ ಚಂದ್ರ ಬೋಸ್ರು ದೇಶಕ್ಕೆ ನೀಡಿದ ಅದ್ವಿತೀಯ ಕೊಡುಗೆಯನ್ನು ಜನರು ಸದಾ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ನೇತಾಜಿಯವರ 125ನೇ ಜನ್ಮದಿನವನ್ನು ಇಡೀ ವರ್ಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ರೀತಿಯಲ್ಲಿ ಆಚರಿಸಲಾಗುವುದು ಎಂದು ಹೇಳಿದೆ.
ಜನವರಿ 23ಕ್ಕೆ ಕೋಲ್ಕತ್ತಕ್ಕೆ ಪ್ರಧಾನಿ ಮೋದಿ ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು ಕೋಲ್ಕತ್ತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಕ್ಟೋರಿಯ ಮೆಮೋರಿಯಲ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ನಂತರ ಅಲಿಪೋರ್ನ ಬೆಲ್ವೆಡೆರೆ ಎಸ್ಟೇಟ್ನಲ್ಲಿರುವ ನ್ಯಾಷನಲ್ ಲೈಬ್ರರಿಗೂ ಭೇಟಿಕೊಡಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಇನ್ನೊಂದು ಆಸಕ್ತಿಕರ ವಿಚಾರವೆಂದರೆ ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದ ನಿಮಿತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾದಯಾತ್ರೆ ನಡೆಸಲಿದ್ದಾರೆ ಎಂದೂ ಅಲ್ಲಿನ ಸರ್ಕಾರದ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಪಕ್ಷಾಂತರ ಮಾಡಿರುವ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸುವೆ: ಮಮತಾ ಬ್ಯಾನರ್ಜಿ ಘೋಷಣೆ