ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ (Parag Agarwal) ಅವರಿಗೆ ಫಾಲೋವರ್ಗಳ ಸಂಖ್ಯೆ ಇಳಿಮುಖವಾಗುತ್ತಿರುವ ಕುರಿತಂತೆ ಪತ್ರ ಬರೆದಿದ್ದರು. ಸರ್ಕಾರದ ಒತ್ತಡದಿಂದ ಟ್ವಿಟರ್ ತಮ್ಮ ಫಾಲೋವರ್ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ ಎಂಬುದು ಅವರ ಆರೋಪವಾಗಿತ್ತು. ನಂತರದಲ್ಲಿ ಇದಕ್ಕೆ ಸ್ಪಷ್ಟನೆ ನೀಡಿದ ಟ್ವಿಟರ್ ವಕ್ತಾರರು, ರಾಹುಲ್ ಗಾಂಧಿ (Rahul Gandhi) ಆರೋಪವನ್ನು ತಳ್ಳಿ ಹಾಕಿದ್ದರು. ಟ್ವಿಟರ್ ಸ್ಪಾಮ್ ಹಾಗೂ ನಕಲಿ ಖಾತೆಗಳನ್ನು ತೆಗೆಯಲು ಆಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಇದರಿಂದ ಫಾಲೋವರ್ಗಳ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಆಗಬಹುದು ಎಂದು ಪ್ರತಿಕ್ರಿಯೆ ನೀಡಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ರಾಹುಲ್ ಗಾಂಧಿ ತಮ್ಮ ಫಾಲೋವರ್ಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದ ವಿಚಾರ ಸಖತ್ ಚರ್ಚೆಯಾಗುತ್ತಿದೆ. ಅದರಲ್ಲೂ ಹಲವರು ತಮಾಷೆಯಾಗಿ ಮತ್ತೆ ಕೆಲವರು ಖಾರವಾಗಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅಂತಹ ಟ್ವೀಟ್ಗಳು ಇಲ್ಲಿವೆ.
ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋತಾಗ ಇವಿಎಂ ಅನ್ನು ದೂಷಿಸಿದರು. ಚುನಾವಣೆಯಲ್ಲಿ ಪಾರ್ಟಿ ಸೋತಾಗ ಮತದಾರರನ್ನು ದೂಷಿಸಿದರು. ಇದೀಗ ಫಾಲೋವರ್ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಟ್ವಿಟರ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ರಿಶಿ ಬಾಗ್ರೀ ಎನ್ನುವವರು ಬರೆದಿದ್ದಾರೆ.
Blame EVM when he lost Amethi.
Blamed Twitter when he lost followers.
Blamed BJP when Leaders deserted his party.
Next :
Blame Voters when his party will lose state polls pic.twitter.com/ZRNa7gBmBQ— Rishi Bagree (@rishibagree) January 27, 2022
ರಾಹುಲ್ ಶಿವಶಂಕರ್ ಎಂಬುವವರು ಟ್ವೀಟ್ ಮಾಡಿ, ರಾಹುಲ್ ಗಾಂಧಿಯವರ ಆರೋಪವನ್ನು ಈ ಹಿಂದೆ ಚುನಾವಣಾ ಆಯೋಗ ಇವಿಎಂ ಕುರಿತ ಆರೋಪವನ್ನು ನಿರಾಕರಿಸಿದಂತೆಯೇ ಟ್ವಿಟರ್ ಕೂಡ ನಿರಾಕರಿಸಿದೆ ಎಂದು ಬರೆದಿದ್ದಾರೆ.
“Dear Parag…” Rahul Gandhi red flags sharp drop in Twitter followers warns SM platform against becoming a “pawn”. The signs for the Cong “chief-in-waiting” are ominous on-ground and on-line. Twitter also rejects bias charge much like EC has done in the past.
— Rahul Shivshankar (@RShivshankar) January 27, 2022
ರೋಹನ್ ದುವಾ ಎಂಬುವವರು ರಾಹುಲ್ ಗಾಂಧಿ ಟ್ವೀಟ್ ಅನ್ನು ಪತ್ರಿಕೆಯೊಂದು ವರದಿ ಮಾಡಿದ ಬಗೆಯ ಕುರಿತು ಅಚ್ಚರಿ ಹೊರಹಾಕಿದ್ದಾರೆ. ಅಲ್ಲದೇ ದೇಶವನ್ನು ಆಳಿದ, ದೊಡ್ಡ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರ ನುಡಿಯ ಬಗ್ಗೆಯೂ ಅಚ್ಚರಿ ಹೊರಹಾಕಿದ್ದಾರೆ.
Strange greed & shocking yearnings. Non stop rules of decades at Centre, now state govts in 5 big states with or w/o @Twitter & @paraga. Yet WSJ uses a letter to hammer duo knowing that one ecosystem will use it for even more gains. Twitter, pls be a level playing field. Always. pic.twitter.com/ns1b1jTxfu
— Rohan Dua (@rohanduaT02) January 27, 2022
ರಾಹುಲ್ ಗಾಂಧಿ ನಿಜ ಜೀವನದ ನಂತರ ವರ್ಚುವಲ್ ಜಗತ್ತಿನಲ್ಲೂ ಪ್ರಭಾವ ಕಳೆದುಕೊಳ್ಳುತ್ತಿದ್ದಾರೆಯೇ ಎಂದು ಅಮಿತ್ ಮಾಳವೀಯ ಎಂಬುವವರು ಪ್ರಶ್ನಿಸಿದ್ದಾರೆ. ಅಲ್ಲದೇ ಹಲವರು ರಾಹುಲ್ ಗಾಂಧಿ ಮುಂದೆ ಚುನಾವಣಾ ಅಧಿಕಾರಿಗಳನ್ನು ದೂಷಿಸಬಹುದು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
Rahul Gandhi has written to Twitter complaining that his followers count has not increased since his account was temporarily suspended in 2021…
Rahul doesn’t get audience in the real world and now virtual world too!
What next? Write to EC and complaint for not getting votes?
— Amit Malviya (@amitmalviya) January 27, 2022
Not long ago, @RahulGandhi went crying to @RNicholasBurns and asked for US support as he is unable to win elections; now he ran to @paraga complaining his followers are being restricted.
Next is Hague now- as he will go complaining to them that Indians are not voting him! https://t.co/HvARlcQG2F pic.twitter.com/cppsNrU3SJ
— Alok Bhatt (@alok_bhatt) January 27, 2022
ಟ್ವಿಟರ್ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ ಓರ್ವರು, ರಾಹುಲ್ ಗಾಂಧಿ ಅವರು ನಕಲಿ ಫಾಲೋವರ್ಗಳನ್ನು ಹೊಂದಿದ್ದರು ಎಂದು ಪರೋಕ್ಷವಾಗಿ ತಿಳಿಸಿದೆ ಎಂದು ಕಾಲೆಳೆದಿದ್ದಾರೆ.
पप्पू जी @RahulGandhi, Twitter, in short, is saying you have fake followers in bulk https://t.co/zIKGWqNjUx
— iMac_too (@iMac_too) January 27, 2022
ಒಟ್ಟಿನಲ್ಲಿ ರಾಹುಲ್ ಗಾಂಧಿ ಬರೆದ ಪತ್ರ ಹಾಗೂ ಟ್ವಿಟರ್ ವಕ್ತಾರರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿರುವುದಂತೂ ಹೌದು.
ಇದನ್ನೂ ಓದಿ:
Published On - 10:39 am, Fri, 28 January 22