AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂಪಾಂತರಗೊಂಡ ಕೊರೊನಾ ವೈರಸ್ ಮಾರಕವಲ್ಲ: ಭಾರತ ಮೂಲದ ಅಮೆರಿಕ ವೈದ್ಯ ವಿವೇಕ್​ ಮೂರ್ತಿ ಸ್ಪಷ್ಟನೆ

ವಾಷಿಂಗ್ಟನ್​: ಇಂಗ್ಲೆಡ್​ನಲ್ಲಿ ಕೊರೊನಾ ವೈರಸ್​ ರೂಪಾಂತರಗೊಂಡಿರುವ ವಿಚಾರ ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ಆತಂಕವನ್ನು ಭಾರತ ಮೂಲದ ಅಮೆರಿಕ ವೈದ್ಯ ವಿವೇಕ್​ ಮೂರ್ತಿ ಅವರು ದೂರ ಮಾಡಿದ್ದಾರೆ. ರೂಪಾಂತರಗೊಂಡಿರುವ ವೈರಸ್​ನಿಂದ ಯಾವುದೇ ಹಾನಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್​ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ವೇಗವಾಗಿ ಹರಡಲಿದೆ. ಆದರೆ, ಇದು ಮಾರಕವಲ್ಲ ಎಂದು ಡಾ.ವಿವೇಕ್ ಹೇಳಿದ್ದಾರೆ. ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ತುಂಬಾನೇ ಅಪಾಯಕಾರಿ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಬೆನ್ನಲ್ಲೇ ವೈದ್ಯರಿಂದ ಸ್ಪಷ್ಟನೆ ಸಿಕ್ಕಿದ್ದು, ನಿಟ್ಟುಸಿರು ಬಿಡುವಂತಾಗಿದೆ. […]

ರೂಪಾಂತರಗೊಂಡ ಕೊರೊನಾ ವೈರಸ್ ಮಾರಕವಲ್ಲ: ಭಾರತ ಮೂಲದ ಅಮೆರಿಕ ವೈದ್ಯ ವಿವೇಕ್​ ಮೂರ್ತಿ ಸ್ಪಷ್ಟನೆ
ವೈದ್ಯ ವಿವೇಕ್​ ಮೂರ್ತಿ
ರಾಜೇಶ್ ದುಗ್ಗುಮನೆ
| Edited By: |

Updated on:Dec 21, 2020 | 9:50 PM

Share

ವಾಷಿಂಗ್ಟನ್​: ಇಂಗ್ಲೆಡ್​ನಲ್ಲಿ ಕೊರೊನಾ ವೈರಸ್​ ರೂಪಾಂತರಗೊಂಡಿರುವ ವಿಚಾರ ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ಆತಂಕವನ್ನು ಭಾರತ ಮೂಲದ ಅಮೆರಿಕ ವೈದ್ಯ ವಿವೇಕ್​ ಮೂರ್ತಿ ಅವರು ದೂರ ಮಾಡಿದ್ದಾರೆ. ರೂಪಾಂತರಗೊಂಡಿರುವ ವೈರಸ್​ನಿಂದ ಯಾವುದೇ ಹಾನಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೊನಾ ವೇಗವಾಗಿ ಹರಡಲಿದೆ. ಆದರೆ, ಇದು ಮಾರಕವಲ್ಲ ಎಂದು ಡಾ.ವಿವೇಕ್ ಹೇಳಿದ್ದಾರೆ. ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ತುಂಬಾನೇ ಅಪಾಯಕಾರಿ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಬೆನ್ನಲ್ಲೇ ವೈದ್ಯರಿಂದ ಸ್ಪಷ್ಟನೆ ಸಿಕ್ಕಿದ್ದು, ನಿಟ್ಟುಸಿರು ಬಿಡುವಂತಾಗಿದೆ.

ಕೊರೊನಾಗೆ ಈಗಾಗಲೇ ಔಷಧ ಕಂಡು ಹಿಡಿಯಲಾಗಿದೆ. ಆದರೆ, ಕೊರೊನಾ ರೂಪ ಬದಲಿಸಿದ್ದರಿಂದ ಅಭಿವೃದ್ಧಿಪಡಿಸಿರುವ ಔಷಧ ಪರಿಣಾಮಕಾರಿಯಾಗದು ಎಂದು ಹೇಳಲಾಗಿತ್ತು. ಈ ಬಗ್ಗೆಯೂ ಡಾ. ವಿವೇಕ್​ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ಈಗ ಅಭಿವೃದ್ಧಿಪಡಿಸಿರುವ ಲಸಿಕೆ ರೂಪಾಂತರಗೊಂಡಿರುವ ಕೊರೊನಾ ಮೇಲೆ ಪರಿಣಾಮಕಾರಿಯಾಗದು ಎಂದು ಹೇಳುವುದಕ್ಕೇ ಯಾವುದೇ ಸಾಕ್ಷ್ಯ ಇಲ್ಲ. ಹೀಗಾಗಿ, ಈ ಸುದ್ದಿಗಳನ್ನು ನಂಬಬೇಡಿ ಎಂದು ಕೋರಿದ್ದಾರೆ.

ರೂಪಾಂತರಗೊಂಡಿರುವ ಕೊರೊನಾ ವೈರಸ್​ ವೇಗವಾಗಿ ಹರಡಲಿದೆ. ಆದರೆ, ಸರಿಯಾಗಿ ಕೈ ತೊಳೆದುಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು, ಸದಾ ಮಾಸ್ಕ್​ ಧರಿಸಿದ್ದರೆ ಕೊರೊನಾದಿಂದ ದೂರ ಉಳಿಯಬಹುದು ಎನ್ನುವ ಕಿವಿಮಾತನ್ನು ಡಾ.ವಿವೇಕ್​ ಹೇಳಿದ್ದಾರೆ.

ಬರಾಕ್ ಒಬಾಮಾ ಅಮೇರಿಕದ ಅಧ್ಯಕ್ಷರಾಗಿದ್ದಾಗ ಸರ್ಜನ್ ಜನರಲ್ ಆಗಿ ಹೆಸರು ಮಾಡಿದ್ದ ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹೊಸದಾಗಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಜೋ ಬೈಡನ್ ಅವರು ರಚಿಸಿರುವ ಕೊರೊನಾ ಟಾಸ್ಕ್​ ಫೋರ್ಸ್​ನಲ್ಲಿ ಡಾ.ವಿವೇಕ್ ಮೂರ್ತಿ ಕೂಡ ಇದ್ದಾರೆ.

ಬ್ರಿಟನ್​ ವಿಮಾನ ಹಾರಾಟ ರದ್ದು ನಾಳೆ ರಾತ್ರಿಯಿಂದ ಬ್ರಿಟನ್ ವಿಮಾನ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಡಿಸೆಂಬರ್ 31ರವರೆಗೆ ಬ್ರಿಟನ್ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಭಾರತ ಮಾತ್ರವಲ್ಲದೆ 30 ದೇಶಗಳು ಬ್ರಿಟನ್​ಗೆ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ. ನಾಳೆಯೊಳಗೆ ಬ್ರಿಟನ್​ನಿಂದ ಬರುವವರು ಕಡ್ಡಾಯವಾಗಿ RTPCR​ ಟೆಸ್ಟ್​ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ.ಬ್ರಿಟನ್​ನಲ್ಲಿ ಹೊಸ ರೂಪಾಂತರಗೊಂಡ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಿಂದಾಗಿ ಈ ಕ್ರಮ ಜರುಗಿಸಲಾಗಿದೆ.

ವೇಗವಾಗಿ ಹರಡುವ ಹೊಸ ಪ್ರಭೇದದ ಕೊರೊನಾ ವೈರಾಣು ಪತ್ತೆ: ಎಚ್ಚರಿಕೆ ವಹಿಸಲು ಜನರಿಗೆ ಸುಧಾಕರ್ ಮನವಿ

Published On - 9:49 pm, Mon, 21 December 20

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ